ರಾಜ್ಯದಲ್ಲಿ ಒಂದೇ ದಿನ 17 ಮಂದಿಗೆ ಕೊರೊನಾ ಸೋಂಕು
ಮೈಸೂರು

ರಾಜ್ಯದಲ್ಲಿ ಒಂದೇ ದಿನ 17 ಮಂದಿಗೆ ಕೊರೊನಾ ಸೋಂಕು

April 13, 2020
  • ವಿಜಯಪುರಕ್ಕೂ ಕಾಲಿಟ್ಟ ಮಹಾಮಾರಿ
  • ಒಟ್ಟಾರೆ ರಾಜ್ಯದಲ್ಲಿ 232 ಮಂದಿಗೆ ಸೋಂಕು

ಬೆಂಗಳೂರು,ಏ.12-ರಾಜ್ಯದಲ್ಲಿ ಇದೇ ಪ್ರಥಮ ಬಾರಿಗೆ ಒಂದೇ ದಿನ 17 ಕೊರೊನಾ ಸೋಂಕು ಪ್ರಕರಣ ದೃಢಪಟ್ಟಿದ್ದು (ಈ ಹಿಂದೆ 16 ಪ್ರಕರಣ ದೃಢಪಟ್ಟಿದ್ದು ಗರಿಷ್ಠ ಸಂಖ್ಯೆಯಾಗಿತ್ತು), ಸೋಂಕಿತರ ಸಂಖ್ಯೆ 232ಕ್ಕೆ ಏರಿಕೆಯಾಗಿದೆ. ಅದೇ ರೀತಿ ಇಂದು ಮೈಸೂರಿನ 7 ಮಂದಿ ಸೇರಿದಂತೆ ರಾಜ್ಯದಲ್ಲಿ 15 ಸೋಂಕಿ ತರು ಪೂರ್ಣ ಗುಣಮುಖರಾಗಿ ಆಸ್ಪತ್ರೆ ಯಿಂದ ಬಿಡುಗಡೆಯಾಗಿದ್ದಾರೆ. ಈವ ರೆಗೂ ರಾಜ್ಯದಲ್ಲಿ ಒಟ್ಟು 54 ಸೋಂಕಿ ತರು ಪೂರ್ಣ ಗುಣಮುಖರಾಗಿದ್ದು, 172 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊರೊನಾ ಸೋಂಕು ಇಲ್ಲದೇ ಇದ್ದ ವಿಜಯ ಪುರ ಜಿಲ್ಲೆಗೆ ಇಂದು ಸೋಂಕು ವಕ್ಕರಿ ಸಿದ್ದು, 10, 12, 13 ವರ್ಷದ ಮಕ್ಕಳೂ ಸೇರಿದಂತೆ 6 ಮಂದಿಯಲ್ಲಿ ಸೋಂಕು ದೃಢ ಪಟ್ಟಿದೆ. ಇವರ ಪೈಕಿ 60 ವರ್ಷದ ವೃದ್ಧೆ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಲ್ಲಿನ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ವಿಜಯಪುರದಲ್ಲಿ ಸೋಂಕು
ದೃಢಪಟ್ಟ ಯಾರಿಗೂ ಟ್ರಾವಲ್ ಹಿಸ್ಟರಿಯೇ ಇಲ್ಲ. ಇವರಿಗೆ ಹ್ಯಾಗೆ ಸೋಂಕು ತಗುಲಿತು ಎಂಬುದರ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ವೃದ್ಧೆ ಹೊರತುಪಡಿಸಿ ಉಳಿದ ಎಲ್ಲಾ ಐವರೂ ಸೋಂಕಿತರು ಒಂದೇ ಪ್ರದೇಶಕ್ಕೆ ಸೇರಿದವರಾಗಿದ್ದು, ಇವರ ಸಂಪರ್ಕದಲ್ಲಿದ್ದ 169 ಮಂದಿಯನ್ನು ಐಸೊಲೇಷನ್ ಮಾಡಲಾಗಿದೆ. ಕೊರೊನಾ ಸೋಂಕಿನಿಂದ ದೇಶದಲ್ಲಿ ಮೊಟ್ಟ ಮೊದಲು ಮೃತಪಟ್ಟ ಕಲಬುರಗಿ ವ್ಯಕ್ತಿಯ ಸೊಸೆ ಹಾಗೂ 2 ವರ್ಷದ ಹೆಣ್ಣು ಮಗು ಸೇರಿದಂತೆ ಆ ಜಿಲ್ಲೆಯಲ್ಲಿ ಮೂವರಿಗೆ ಸೋಂಕು ದೃಢಪಟ್ಟಿದೆ. ಈ ಮಗು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆತಂದಾಗ ಸೋಂಕು ದೃಢಪಟ್ಟಿದೆ. ಇದರಿಂದಾಗಿ ಕಲಬುರಗಿಯಲ್ಲಿ ಸೋಂಕಿತರ ಸಂಖ್ಯೆ 13ಕ್ಕೆ ಏರಿದೆ.

ರಾಜಧಾನಿ ಬೆಂಗಳೂರಿನಲ್ಲಿ ಇಂದು ಮೂವರಿಗೆ ಸೋಂಕು ದೃಢಪಟ್ಟಿದ್ದು, ಅವ ರಲ್ಲಿ 58 ವರ್ಷದ ವ್ಯಕ್ತಿ ಇತ್ತೀಚೆಗೆ ಇಂಡೊನೇಷಿಯಾದಿಂದ ಬೆಂಗಳೂರಿಗೆ ಹಿಂದಿ ರುಗಿದ್ದರು. ಇನ್ನುಳಿದಂತೆ 75 ವರ್ಷದ ವೃದ್ಧೆ ಮತ್ತು 76 ವರ್ಷದ ವೃದ್ಧನಿಗೆ ಉಸಿ ರಾಟದ ಸಮಸ್ಯೆ ಕಾಣಿಸಿಕೊಂಡು ಪರೀಕ್ಷೆಗೊಳಪಡಿಸಿದಾಗ ಸೋಂಕು ತಗುಲಿರುವುದು ಪತ್ತೆಯಾಗಿದೆ. ಬೆಳಗಾವಿಯಲ್ಲಿ ಇಂದು ನಾಲ್ವರಿಗೆ ಸೋಂಕು ದೃಢಪಟ್ಟಿದೆ. ಇವರೆಲ್ಲರೂ ಈಗಾಗಲೇ ಸೋಂಕಿತರಾಗಿರುವವರ ಸಂಪರ್ಕದಲ್ಲಿದ್ದವರು ಎಂಬುದು ತಿಳಿದು ಬಂದಿದೆ. ಈ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ.

24 ಗಂಟೆಯಲ್ಲಿ ದೇಶದಲ್ಲಿ 909 ಹೊಸ ಪ್ರಕರಣ: ಭಾರತದಲ್ಲಿ ಸೋಂಕಿತರ ಸಂಖ್ಯೆ 8,000ಕ್ಕೇರಿಕೆ, 273 ಮಂದಿ ಬಲಿ
ನವದೆಹಲಿ,ಏ.12- ‘ಲಾಕ್‍ಡೌನ್ ಇದ್ದರೂ ಕೊರೊನಾ ವೈರಸ್ ತಾಂಡವ ನೃತ್ಯ ಪ್ರದರ್ಶಿಸುತ್ತಿದ್ದು, ಕಳೆದ 24 ಗಂಟೆಗಳಲ್ಲಿ 909 ಮಂದಿಯಲ್ಲಿ ಹೊಸದಾಗಿ ಸೋಂಕು ಕಂಡು ಬಂದಿದೆ. ಇದರಿಂದಾಗಿ ದೇಶದಲ್ಲಿ ಸೋಂಕಿತರ ಸಂಖ್ಯೆ 8 ಸಾವಿರಕ್ಕೆ ಏರಿಕೆ ಯಾಗಿದೆ. ಮತ್ತೊಂದೆಡೆ ಮಹಾಮಾರಿ 36 ಮಂದಿಯನ್ನು ಬಲಿ ಪಡೆದುಕೊಂಡಿದೆ. ಹೀಗಾಗಿ ದೇಶಕ್ಕೆ ಕೊರೊನಾ ಕಾಲಿರಿಸಿದ ಬಳಿಕ ಅದಕ್ಕೆ ಬಲಿಯಾದವರ ಸಂಖ್ಯೆ 273ಕ್ಕೆ ಏರಿಕೆಯಾಗಿದ್ದು, 300ರ ಗಡಿಗೆ ಬಂದು ತಲುಪಿದೆ. ಜಾಗತಿಕವಾಗಿ ಗಮನಿಸಿ ದರೆ, ಭಾರತದಲ್ಲಿನ ಸೋಂಕಿನ ಸಂಖ್ಯೆ ಹಾಗೂ ಸಾವಿಗೀಡಾದವರ ಸಂಖ್ಯೆ ತೀರಾ ಕಡಿಮೆ ಪ್ರಮಾಣದಲ್ಲಿಯೇ ಇದೆ ಎಂದು ತಜ್ಞರು ತಿಳಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಶನಿವಾರ 187ಮಂದಿಗೆ ಹೊಸದಾಗಿ ಸೋಂಕು ಕಂಡುಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 1761ಕ್ಕೆ ಹೆಚ್ಚಳವಾಗಿದೆ. ಮುಂಬೈವೊಂದರಲ್ಲೇ 1146 ಮಂದಿ ಸೋಂಕಿತರಿದ್ದಾರೆ. ಪುಣೆಯಲ್ಲಿ 228 ಮಂದಿ ಇದ್ದಾರೆ. 17 ಮಂದಿ ಸಾವಿಗೀಡಾಗಿದ್ದು, ಮೃತರ ಸಂಖ್ಯೆ 127ಕ್ಕೇರಿಕೆಯಾಗಿದೆ. ಮುಂಬೈವೊಂದರಲ್ಲೇ ಶಿವಾರ 12 ಮಂದಿ ಮರಣವನ್ನಪ್ಪಿದ್ದಾರೆ. ಈ ನಡುವೆ ದೆಹಲಿಯಲ್ಲಿ 166 ಸೋಂಕಿತರು ಪತ್ತೆಯಾಗಿದ್ದು, ಒಟ್ಟು ಕೊರೊನಾ ಪೀಡಿತರ ಸಂಖ್ಯೆ 1000ದ ಗಡಿ ದಾಟಿ 1069ಕ್ಕೆ ಹೆಚ್ಚಳವಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಈವರೆಗೆ 14 ಮಂದಿ ಸಾವಿಗೀಡಾಗಿದ್ದಾರೆ.

Translate »