ಮೈಸೂರಲ್ಲಿ ಸೋಮವಾರ 63 ಮಂದಿಗೆ ಕೊರೊನಾ ಸೋಂಕು
ಮೈಸೂರು

ಮೈಸೂರಲ್ಲಿ ಸೋಮವಾರ 63 ಮಂದಿಗೆ ಕೊರೊನಾ ಸೋಂಕು

December 29, 2020

ಮೈಸೂರು, ಡಿ.28(ಎಂಕೆ)- ಜಿಲ್ಲೆಯಲ್ಲಿ ಸೋಮವಾರ 63 ಮಂದಿಗೆ ಕೊರೊನಾ ಸೋಂಕು ತಗುಲಿದೆ. 88 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಹೊರಬಂದಿದ್ದು, ಯಾವುದೇ ಸಾವು ಸಂಭವಿಸಿಲ್ಲ. ಒಟ್ಟು ಸೋಂಕಿತರ ಸಂಖ್ಯೆ 52,289ಕ್ಕೆ ಏರಿಕೆ ಯಾದರೆ, ಸೋಮವಾರದ 88 ಮಂದಿ ಸೇರಿ ಒಟ್ಟು 50,776 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇಲ್ಲಿಯವರೆಗೆ 1,010 ಮಂದಿ ಮೃತಪಟ್ಟಿದ್ದು, 507 ಮಂದಿಯಲ್ಲಿ ಸೋಂಕು ಸಕ್ರಿಯವಾಗಿದೆ.

ರಾಜ್ಯದ ವಿವರ: ರಾಜ್ಯದಲ್ಲಿ ಸೋಮವಾರ 653 ಮಂದಿಗೆ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 9,16,909ಕ್ಕೇರಿದೆ. ಇಂದು 1178 ಮಂದಿ ಸೇರಿದಂತೆ ಈವರೆಗೆ 8,92,273 ಮಂದಿ ಬಿಡುಗಡೆಯಾಗಿದ್ದಾರೆ. ಇನ್ನೂ 12,547 ಸಕ್ರಿಯ ಪ್ರಕರಣ ಗಳಿವೆ. ಇಂದು 8 ಮಂದಿ ಸೋಂಕಿತರು ಸಾವನ್ನಪ್ಪಿದ್ದು, ಇದುವರೆಗೆ ರಾಜ್ಯದಲ್ಲಿ 12,070 ಮಂದಿ ಮೃತಪಟ್ಟಂತಾಗಿದೆ. ಬಳ್ಳಾರಿ 13, ಬೆಳಗಾವಿ 12, ಬೆಂಗಳೂರು ಗ್ರಾಮಾಂತರ 10, ಬೆಂಗಳೂರು ನಗರ 309, ಬೀದರ್ 1, ಚಾಮರಾಜನಗರ 8, ಚಿಕ್ಕಬಳ್ಳಾ ಪುರ 28, ಚಿಕ್ಕ ಮಗಳೂರು 12, ಚಿತ್ರದುರ್ಗ 10, ದ.ಕನ್ನಡ 08, ದಾವಣಗೆರೆ 4, ಧಾರವಾಡ 12, ಗದಗ 01, ಹಾಸನ 9, ಹಾವೇರಿ 1, ಕಲಬುರಗಿ 14, ಕೊಡಗು 27, ಕೋಲಾರ 7, ಕೊಪ್ಪಳ 4, ಮಂಡ್ಯ 26, ರಾಯಚೂರು 5, ಶಿವಮೊಗ್ಗ 17, ತುಮಕೂರು 20, ಉಡುಪಿ 14, ಉ.ಕನ್ನಡ 8, ವಿಜಯಪುರ 9 ಮತ್ತು ಯಾದಗಿರಿ ಜಿಲ್ಲೆಯಲ್ಲಿ 1 ಪ್ರಕರಣ ಪತ್ತೆಯಾಗಿದೆ.

 

Translate »