ಮೈಸೂರು ಜಿಲ್ಲೆಯಲ್ಲಿ ಶೇ.81.17ರಷ್ಟು ಮತದಾನ
ಮೈಸೂರು

ಮೈಸೂರು ಜಿಲ್ಲೆಯಲ್ಲಿ ಶೇ.81.17ರಷ್ಟು ಮತದಾನ

December 28, 2020

ಮೈಸೂರು,ಡಿ.27(ಆರ್‍ಕೆಬಿ, ವೈಡಿಎಸ್) -ಮೈಸೂರು ಜಿಲ್ಲೆಯಲ್ಲಿ ಭಾನುವಾರ ನಡೆದ ಎರಡನೇ ಹಂತದ ಚುನಾವಣೆ ಯಾವುದೇ ಗಲಾಟೆ-ಘರ್ಷಣೆಗಳಿಲ್ಲದೆ ಶಾಂತಿಯುತವಾಗಿ ನಡೆದಿದ್ದು, ಜಿಲ್ಲೆಯಲ್ಲಿ ಶೇ.81.17ರಷ್ಟು ಮತದಾನವಾಗಿದೆ.
ಜಿಲ್ಲೆಯ ಮೂರು ತಾಲೂಕುಗಳಲ್ಲಿ ಭಾನು ವಾರ ಎರಡನೇ ಹಂತದ ಚುನಾವಣೆ ನಡೆ ದಿದ್ದು, ಮೈಸೂರು ತಾಲೂಕಿನ 23 ಗ್ರಾಮ ಪಂಚಾಯಿತಿಗಳ 475 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 1,299 ಮಂದಿ ಕಣದಲ್ಲಿ ದ್ದರು. ನಂಜನಗೂಡು ತಾಲೂಕಿನ 43 ಗ್ರಾಮ ಪಂಚಾಯಿತಿಗಳ 781 ಸ್ಥಾನಗಳಿಗೆ 2,204 ಮಂದಿ, ತಿ.ನರಸೀಪುರ ತಾಲೂ ಕಿನ 36 ಗ್ರಾಮ ಪಂಚಾಯಿತಿಗಳ 577 ಸ್ಥಾನ ಗಳಿಗೆ 1,566 ಮಂದಿ ಕಣದಲ್ಲಿದ್ದರು.

ಭಾನುವಾರ ಬೆಳಗ್ಗೆ 9ರ ವೇಳೆಗೆ ಶೇ. 6.05ರಷ್ಟು ಮತದಾನವಾಗಿತ್ತು. ಬೆಳಗ್ಗೆ 11ರ ವೇಳೆಗೆ ಶೇ.18.44, ಮಧ್ಯಾಹ್ನ 1 ವೇಳೆಗೆ ಶೇ.42.08, 3ಗಂಟೆ ವೇಳೆಗೆ ಶೇ.63.04ರಷ್ಟು ಮತದಾನ ನಡೆದಿತ್ತು. ಸಂಜೆ 5ರವೇಳೆಗೆ ಜಿಲ್ಲೆಯಲ್ಲಿ ಶೇ.81.17ರಷ್ಟು ಮತದಾನವಾಗಿದೆ.

ತಾಲೂಕುವಾರು ಮತದಾನ: ಮೈಸೂರು ತಾಲೂಕಿನ 1,57,760 ಮತದಾರರಲ್ಲಿ 1,34,837 ಮಂದಿ ಮತಚಲಾಯಿಸಿದ್ದು, ಶೇ.85.47ರಷ್ಟು ಮತದಾನವಾಗಿದೆ. ಹಾಗೆಯೇ ನಂಜನಗೂಡಿನಲ್ಲಿ 2,65,202 ಮತದಾರರಲ್ಲಿ 2,20,862 ಮಂದಿ ಮತ ಚಲಾಯಿಸಿದ್ದು, ಶೇ.83.28ರಷ್ಟು ಮತ ದಾನವಾಗಿದೆ.
ತಿ.ನರಸೀಪುರದಲ್ಲಿ 2,02,572 ಮತದಾರರಲ್ಲಿ 1,52,065 ಮಂದಿ ಮತದಾನ ಮಾಡಿದ್ದು, ಶೇ.75ರಷ್ಟು ಮತದಾನವಾಗಿದೆ.

ಉತ್ಸಹದಿಂದ ಮತ ಚಲಾವಣೆ: ಭಾನುವಾರ ಬೆಳಿಗ್ಗೆ ಮಂದಗತಿಯಿಂದಲೇ ಆರಂಭವಾದ ಮತದಾನ 11ಗಂಟೆ ವೇಳೆಗೆ ಚುರುಕು ಪಡೆದುಕೊಂಡಿತು. ನಂತರ ಉತ್ಸಾಹದಿಂದ ಮತಗಟ್ಟೆಗಳಿಗೆ ತೆರಳಿದ ಮತದಾರರು ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಮತಗಟ್ಟೆಗಳ ಬಳಿ ಎಲ್ಲಿಯೂ ಗೊಂದಲವಾಗದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದ ರಿಂದ ಮತದಾನ ಶಾಂತಿಯುತವಾಗಿ ಸಂಪನ್ನಗೊಂಡಿತು. ಅನೇಕ ಮತಗಟ್ಟೆಗಳಲ್ಲಿ ಯುವ ಮತದಾರರು ಹಕ್ಕು ಚಲಾಯಿಸಿದರೆ, ಶತಾಯುಷಿಗಳು, ವಿಕಲಾಂಗರೂ ಬೇರೆಯವರ ನೆರವಿನಲ್ಲಿ ಮತಗಟ್ಟೆಗಳಿಗೆ ಆಗಮಿಸಿ ಹಕ್ಕು ಚಲಾಯಿಸಿದರು.

ಡಿ.30ರಂದು ಎಣಿಕೆ: ಮೈಸೂರು ಜಿಲ್ಲೆಯ 8 ತಾಲೂಕುಗಳ 250 ಗ್ರಾಪಂಗಳ 1,670 ಕ್ಷೇತ್ರಗಳ 4,232 ಸ್ಥಾನಗಳಿಗೆ ಮತದಾನ ನಡೆಯಿತು. ಡಿ.30ರಂದು ಮತ ಏಣಿಕೆ ನಡೆಯಲಿದ್ದು, ಒಟ್ಟಾರೆ 11,234 ಅಭ್ಯರ್ಥಿಗಳ ಹಣೆಬರಹ ನಿರ್ಧಾರವಾಗಲಿವೆ. ಜಿಲ್ಲೆಯಲ್ಲಿ ಒಟ್ಟು 13,52,498 ಮತದಾರರಿದ್ದು, ಒಟ್ಟಾರೆ 2,078 ಮತಗಟ್ಟೆಗಳಲ್ಲಿ ಮತದಾರರು ತಮ್ಮ ಹಕ್ಕು ಚಲಾಯಿಸಿ, ಅಭ್ಯರ್ಥಿಗಳ ಭವಿಷ್ಯ ಬರೆದಿದ್ದಾರೆ. ಮೊದಲ ಹಂತದಲ್ಲಿ ಶೇ.84ರಷ್ಟು ಹಾಗೂ 2ನೇ ಹಂತದಲ್ಲಿ ಶೇ.81.17ರಷ್ಟು ಮತದಾನವಾಗಿದೆ. ಒಟ್ಟಾರೆ 205 ಮಂದಿ ಅವಿರೋಧ ಆಯ್ಕೆಯಾಗಿದ್ದು, 19 ಸ್ಥಾನಗಳಿಗೆ ನಾಮಪತ್ರಗಳು ಸಲ್ಲಿಕೆಯಾಗಿರಲಿಲ್ಲ.

ಸಿದ್ದರಾಮಯ್ಯ, ಜಿಟಿಡಿ ಮತದಾನ: ಮಾಜಿ ಮುಖ್ಯಮಂತ್ರಿಗಳೂ ಆದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವರುಣಾ ವಿಧಾನಸಭಾ ಕ್ಷೇತ್ರದ ಯಡಕೊಳ ಗ್ರಾಪಂ ವ್ಯಾಪ್ತಿಯ ಸ್ವಗ್ರಾಮ ಸಿದ್ದರಾಮಯನಹುಂಡಿಯಲ್ಲಿ ಮತ ಚಲಾಯಿಸಿದರು. ಅವರು ಮತದಾನ ಮಾಡಲು ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಗ್ರಾಮಸ್ಥರು ಸಂಭ್ರಮಿಸಿದರು. ತಮ್ಮ ನಾಯಕನನ್ನು ನೋಡಲು ಮುಗಿಬಿದ್ದರು. ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡರು ಪತ್ನಿ ಲಲಿತಾ ದೇವೇಗೌಡ ಅವರೊಂದಿಗೆ ತಮ್ಮ ಸ್ವಗ್ರಾಮ ಗುಂಗ್ರಾಲ್ ಛತ್ರಕ್ಕೆ ತೆರಳಿ ಮತ ಚಲಾಯಿಸಿದರು. ಸಿದ್ದರಾಮನಹುಂಡಿ ಬಳಿಯ ಕುಪ್ಪೇ ಗಾಲ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಜಯ್ ಎಂಬ ಹೊಸ ಮತದಾರ ಇದೇ ಮೊದಲ ಬಾರಿಗೆ ಮತ ಚಲಾಯಿಸಿ ಖುಷಿಪಟ್ಟರು. ಸಿದ್ದರಾಮಯ್ಯ ಅವರು ಓದಿದ ಈ ಶಾಲೆಯನ್ನು ಹೈಟೆಕ್ ಶಾಲೆಯಾಗಿ ಪರಿವರ್ತಿಸಲಾಗಿದೆ.

ಪೊಲೀಸರ ಶ್ರಮ: ಶಾಂತಿಯುತ ಚುನಾವಣೆ ನಡೆಸುವ ಹಿನ್ನೆಲೆಯಲ್ಲಿ ಮತದಾ£ ಕೇಂದ್ರಗಳ ಬಳಿ ನಿಯೋಜಿಸಲ್ಪಟ್ಟಿದ ಪೊಲೀಸರು ಮತಕೇಂದ್ರಗಳ ಮುಂದೆ ಜನರು ಗುಂಪು ಗುಂಪಾಗಿ ಸೇರದಂತೆ ನೋಡಿಕೊಳ್ಳುತ್ತಿದ್ದರು. ಕೆಲವೆಡೆ ಗುಂಪು ಸೇರುತ್ತಿದ್ದವ ರನ್ನು ಚದುರಿಸಿ, ದೂರ ಕಳಿಸಲಾಗುತ್ತಿತ್ತು. ಮತಗಟ್ಟೆ 100 ಮೀಟರ್ ದೂರದಲ್ಲಿ ಅಭ್ಯರ್ಥಿಗಳು, ಬೆಂಬಲಿಗರು ಮತದಾರರ ಮನ ಒಲಿಸುವಲ್ಲಿ ನಿರತರಾಗಿದ್ದರು.

 

 

Translate »