ರಾಜ್ಯದಲ್ಲಿ 7 ಸಾವಿರ ತಲುಪಿದ ಕೊರೊನಾ ಐವರ ಸಾವು, ಸಾವಿನ ಸಂಖ್ಯೆ 86ಕ್ಕೆ ಏರಿಕೆ
ಮೈಸೂರು

ರಾಜ್ಯದಲ್ಲಿ 7 ಸಾವಿರ ತಲುಪಿದ ಕೊರೊನಾ ಐವರ ಸಾವು, ಸಾವಿನ ಸಂಖ್ಯೆ 86ಕ್ಕೆ ಏರಿಕೆ

June 15, 2020

ಬೆಂಗಳೂರು, ಜೂ. 14- ರಾಜ್ಯ ದಲ್ಲಿ ಕೊರೊನಾ ಸೋಂಕು ಪ್ರಕರಣ 7 ಸಾವಿರಕ್ಕೆ ತಲುಪಿದೆ. ಭಾನುವಾರ 176 ಹೊಸ ಪ್ರಕರಣಗಳು ದಾಖಲಾಗಿವೆ. ಇವುಗಳ ಪೈಕಿ ಹೊರ ರಾಜ್ಯ ದಿಂದ ಬಂದವರು 88 ಮಂದಿಯಾದರೆ, 6 ಮಂದಿ ವಿದೇಶದಿಂದ ಬಂದವರು. ಬೆಂಗಳೂರಿನ 55 ವರ್ಷದ ವ್ಯಕ್ತಿ, 57 ಮತ್ತು 60 ವರ್ಷದ ಮಹಿಳೆಯರು, ದಕ್ಷಿಣ ಕನ್ನಡದಲ್ಲಿ 24 ವರ್ಷದ ಯುವಕ ಮತ್ತು ಬೀದರ್‍ನಲ್ಲಿ 76 ವರ್ಷದ ವೃದ್ಧ ಸೇರಿ ಇಂದು ಐವರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 88ಕ್ಕೇರಿದೆ. ರಾಜ್ಯದಲ್ಲಿ ಭಾನುವಾರ 312 ಮಂದಿ ಗುಣಮುಖ ರಾಗಿದ್ದು, ಒಟ್ಟಾರೆ 3955 ಮಂದಿ ಗುಣಮುಖರಾದಂತಾಗಿದೆ. ಬೆಂಗ ಳೂರು-42, ಯಾದಗಿರಿ-22, ಉಡುಪಿ-21, ಬೀದರ್-20, ಕಲಬುರಗಿ-13, ಧಾರವಾಡ-10, ಬಳ್ಳಾರಿ-8, ಕೋಲಾರ-7, ದಕ್ಷಿಣ ಕನ್ನಡ-6, ಮಂಡ್ಯ-5, ಬಾಗಲಕೋಟೆ-4, ರಾಮನಗರ -3, ರಾಯಚೂರು ಮತ್ತು ಶಿವಮೊಗ್ಗ ತಲಾ 2, ಬೆಳಗಾವಿ, ಹಾಸನ, ವಿಜಯಪುರ, ಬೆಂಗಳೂರು ಗ್ರಾಮಾಂತರ ಮತ್ತು ಹಾವೇರಿಯಲ್ಲಿ ತಲಾ 1 ಪ್ರಕರಣ ಇಂದು ದಾಖಲಾಗಿದೆ. ರಾಜ್ಯದ 7 ಸಾವಿರ ಸೋಂಕಿತರ ಪೈಕಿ 2956 ಮಂದಿ ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯು ತ್ತಿದ್ದಾರೆ. ಅವರ ಪೈಕಿ 16 ಮಂದಿಯನ್ನು ತುರ್ತು ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡ ಲಾಗುತ್ತಿದೆ. ಸೋಂಕಿತರ ಪ್ರಥಮ ಸಂಪರ್ಕದಲ್ಲಿದ್ದ 20,527 ಮತ್ತು ದ್ವಿತೀಯ ಸಂಪರ್ಕದ 15,419 ಮಂದಿ ಸೇರಿದಂತೆ 35,946 ಮಂದಿಯನ್ನು ಕ್ವಾರಂಟೇನ್ ಮಾಡಲಾಗಿದೆ.

Translate »