ವಿಶ್ವನಾಥ್‍ಗೆ ಎಂಎಲ್‍ಸಿ ಟಿಕೆಟ್ ಖಚಿತ
ಮೈಸೂರು

ವಿಶ್ವನಾಥ್‍ಗೆ ಎಂಎಲ್‍ಸಿ ಟಿಕೆಟ್ ಖಚಿತ

June 15, 2020

ಬಿಜೆಪಿ ಅಧಿಕಾರಕ್ಕೆ ಬರಲು ಹಲವು ನಾಯಕರಲ್ಲಿ ಮಾಜಿ ಸಂಸದ ಅಡಗೂರು ಹೆಚ್.ವಿಶ್ವನಾಥ್ ಅವರೂ ಕಾರಣರಾಗಿದ್ದಾರೆ. ಪರಿಷತ್ ಚುನಾವಣೆಯಲ್ಲಿ ಟಿಕೆಟ್ ನೀಡುವ ಮೂಲಕ ಹೈಕಮಾಂಡ್ ಕೊಟ್ಟ ಮಾತಿನಂತೆ ನಡೆದುಕೊಳ್ಳುವುದು ಖಚಿತ ಎಂದು ಸಚಿವ ನಾರಾಯಣಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಎಂಎಲ್‍ಸಿ ಟಿಕೆಟ್ ಹಂಚಿಕೆ ವಿಚಾರದಲ್ಲಿ ಹೈಕಮಾಂಡ್ ಸೂಕ್ತ ನಿಲುವು ತಾಳುತ್ತದೆ. ಮಾಜಿ ಸಂಸದ ಎ.ಹೆಚ್.ವಿಶ್ವನಾಥ್ ಅವರಿಗೆ ಎಂಎಲ್‍ಸಿ ಟಿಕೆಟ್ ಸಿಕ್ಕೇ ಸಿಗುತ್ತದೆ. ಅವರಿಗೆ ಟಿಕೆಟ್ ಸಿಗಬೇಕೆಂ ಬುದೇ ನಮ್ಮ ಭಾವನೆಯೂ ಆಗಿದೆ. ಹೈಕಮಾಂಡ್ ಕೂಡ ಅದನ್ನೇ ನಿರ್ಧಾರ ಮಾಡಲಿದೆ ಎಂದರು.

ಯಾವುದೇ ಪಕ್ಷವಿರಲಿ ಚುನಾವಣೆ ಸಂದರ್ಭ ಟಿಕೆಟ್ ಆಕಾಂಕ್ಷಿಗಳು ಹೆಚ್ಚಾಗಿರುವುದು ಸಹಜ. ಬಿಜೆಪಿ ಯಲ್ಲೂ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ಆದರೆ ಎಲ್ಲವೂ ಅಂದುಕೊಂಡಂತೆ ಅಗುತ್ತದೆ. ಆದರೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಹಲವು ನಾಯಕರು ಕಾರಣ. ವಿಶ್ವನಾಥ್‍ರಂತಹ ನಾಯಕರ ಪಾತ್ರವೂ ಹೆಚ್ಚಾಗಿದೆ. ನಮಗೆ ಅವರ ಮೇಲೆ ಅಪಾರ ಗೌರವವಿದೆ. ಅವರಿಗೆ ಸೂಕ್ತ ಸ್ಥಾನಮಾನ ದೊರೆಯುವುದು ಖಚಿತ ಎಂದರು.

Translate »