ಮೈಸೂರು, ಜು.21(ಎಸ್‍ಪಿಎನ್)- ಮೈಸೂರಿನ ಶಾರದಾದೇವಿನಗರದ 1ನೇ ಮುಖ್ಯರಸ್ತೆ, 2ನೇ ಕ್ರಾಸ್‍ನ ಕಂಟೇನ್ಮೆಂಟ್ ವಲಯದಲ್ಲಿರುವ 20ಕ್ಕೂ ಹೆಚ್ಚು ಕುಟುಂಬ ಗಳಿಗೆ ನಗರ ಪಾಲಿಕೆ ಸದಸ್ಯೆ ನಿರ್ಮಲಾ ಹರೀಶ್, ದಿನಸಿ ಕಿಟ್‍ಗಳನ್ನು ವಿತರಿಸಿದರು.
ತಲಾ 10 ಕೆಜಿ ಅಕ್ಕಿ, ಬೇಳೆ, ಎಣ್ಣೆ, ಗೋಧಿ, ರಾಗಿ, ಅಕ್ಕಿ ಹಿಟ್ಟು, ಎಣ್ಣೆ ಸೇರಿದಂತೆ ಇತರೆ ಪದಾರ್ಥಗಳಿದ್ದ 20 ಕಿಟ್‍ಗಳನ್ನು ವಿತರಿಸಿದ ನಿರ್ಮಲಾ ಹರೀಶ್, ನಗರ ದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಆರ್ಭಟ ಹೆಚ್ಚಾಗುತ್ತಿದ್ದು, ನಮ್ಮ ವಾರ್ಡ್ ವ್ಯಾಪ್ತಿಯಲ್ಲಿ ಕಂಟೇನ್ಮೆಂಟ್ ವಲಯಗಳೂ ಜಾಸ್ತಿಯಾಗುತ್ತಿವೆ. ಇದರಿಂದ ಸೋಂಕಿತರ ಅಕ್ಕ-ಪಕ್ಕದ ನಿವಾಸಿಗಳಿಗೆ ತೊಂದರೆಯಾಗುತ್ತಿದೆ. ಕೊರೊನಾ ಸೋಂಕು ತಡೆಗಟ್ಟಲು ಪ್ರತಿಯೊಬ್ಬ ನಾಗರಿಕರು ಸ್ಥಳೀಯ ಆಡಳಿತದ ಜೊತೆ ಕೈಜೋಡಿಸಬೇಕು. ತೊಂದರೆ ಯಲ್ಲಿರುವವರಿಗೆ ಸಾಧ್ಯವಾದಷ್ಟು ನೆರವಾಗಬೇಕೆಂದು ಮನವಿ ಮಾಡಿದರು.