ಮೈಸೂರು, ಜೂ. 1(ಆರ್‍ಕೆ)- ಕೋವಿಡ್ -19 ಲಾಕ್‍ಡೌನ್ ನಿರ್ಬಂಧಕಾಜ್ಞೆಯಿಂ ದಾಗಿ ಕಳೆದ ಮಾರ್ಚ್‍ನಿಂದ ಸ್ಥಗಿತ ಗೊಂಡಿದ್ದ ಮೈಸೂರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯಗಳ ಕಾರ್ಯಕಲಾಪಗಳು ಸೋಮವಾರದಿಂದ ಪುನಾರಂಭಗೊಂಡಿವೆ.
ಮೈಸೂರಿನ ಲಕ್ಷ್ಮೀಪುರಂ ಠಾಣಾ ಸರ ಹದ್ದಿನ ಜಿಲ್ಲಾ ಪಂಚಾಯ್ತಿ ಕಚೇರಿ ಪಕ್ಕ ದಲ್ಲಿರುವ ಹಳೇ ನ್ಯಾಯಾಲಯಗಳ ಸಂಕೀರ್ಣ ಹಾಗೂ ಮಳಲವಾಡಿಯ ನೂತನ ಕೋರ್ಟ್ ಕಟ್ಟಡದ ನ್ಯಾಯಾಲಯಗಳಲ್ಲಿ ಆರಂಭ ವಾದ ಕೋರ್ಟ್ ಕಲಾಪಗಳಿಗೆ ಪ್ರಧಾನ ಜಿಲ್ಲಾ ನ್ಯಾಯಾಧೀಶ ರಾಮಚಂದ್ರ ಡಿ. ಉದ್ದಾರ್ ಚಾಲನೆ ನೀಡಿದರು.
ನಿಯಮಿತ ಕೇಸ್‍ಗಳು: ರಾಜ್ಯ ಹೈಕೋರ್ಟ್ ನಿರ್ದೇಶನದಂತೆ ಪ್ರತೀ ಕೋರ್ಟ್ ಹಾಲ್ ನಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ 10 ಹಾಗೂ ಮಧ್ಯಾಹ್ನದಿಂದ ಸಂಜೆವರೆಗೆ 10 ಪ್ರಕರಣಗಳ ಕಲಾಪಕ್ಕೆ ಅವಕಾಶ ನೀಡ ಲಾಗಿದ್ದು, ಆ ದಿನ ಕಲಾಪಕ್ಕೆ ಬರುವ ಪ್ರಕ ರಣಗಳ ಪಟ್ಟಿಯನ್ನು ಪ್ರತೀ ದಿನ ಬೆಳಗ್ಗೆ ಕೋರ್ಟ್ ಹಾಲ್ ಮತ್ತು ನ್ಯಾಯಾಲಯ ಕಟ್ಟಡದ ಪ್ರವೇಶ ದ್ವಾರದ ಬಳಿ ಪ್ರಕಟಿಸ ಲಾಗುವುದು ಹಾಗೂ ಹಿಂದಿನ ದಿನ ಸಂಜೆ ಸಂಬಂಧಿಸಿದ ವಕೀಲರಿಗೆ ಮೊಬೈಲ್ ಮೂಲಕ ಮಾಹಿತಿ ರವಾನಿಸಲಾಗುವುದು.
ವಕೀಲರಿಗೆ ಮಾತ್ರ ಪ್ರವೇಶ: ಕಲಾಪದಲ್ಲಿ ಪಾಲ್ಗೊಳ್ಳುವ ಆಯಾ ಪ್ರಕರಣದ ವಕೀಲ ರಿಗೆ ಮಾತ್ರ ನ್ಯಾಯಾಲಯಕ್ಕೆ ಪ್ರವೇಶಾವಕಾಶ ವಿರುತ್ತದೆ. ಕಕ್ಷಿದಾರರು, ಸಾಕ್ಷಿದಾರರು ಅಥವಾ ಆರೋಪಿಗಳು ಕೋರ್ಟ್ ಆವರಣ ಪ್ರವೇಶಿ ಸದಂತೆ ಎಚ್ಚರಿಕಾ ಕ್ರಮ ವಹಿಸಲಾಗಿದೆ.
ವಾಹನ ಪ್ರವೇಶವೂ ನಿಷಿದ್ಧ : ನ್ಯಾಯಾ ಧೀಶರ ವಾಹನಗಳನ್ನು ಹೊರತುಪಡಿಸಿ ಉಳಿದಂತೆ ನ್ಯಾಯವಾದಿಗಳು, ಕೋರ್ಟ್ ಸಿಬ್ಬಂದಿ, ಕಕ್ಷಿದಾರರು ಹಾಗೂ ಸಾರ್ವ ಜನಿಕರು ತಮ್ಮ ವಾಹನಗಳನ್ನು ನ್ಯಾಯಾ ಲಯದ ಆವರಣಕ್ಕೆ ತೆಗೆದುಕೊಂಡು ಹೋಗುವಂತಿಲ್ಲ. ಅವರಿಗೆ ಕೋರ್ಟ್ ಹೊರಗೆ ರಸ್ತೆಯುದ್ದಕ್ಕೂ ವಾಹನ ನಿಲು ಗಡೆಗೆ ಅವಕಾಶ ಕಲ್ಪಿಸಲಾಗಿದೆ.
ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ: ಕೋರ್ಟ್‍ಗೆ ಹಾಜರಾಗುವ ವಕೀಲರು ಹಾಗೂ ಸಿಬ್ಬಂದಿಗೆ ಪ್ರವೇಶದ್ವಾರಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿದ್ದು, ಸ್ಯಾನಿಟೈಸರ್ ನೀಡಿ ಕೈತೊಳೆಸಿದ ನಂತರ ವಷ್ಟೇ ಪ್ರವೇಶಿಸಲು ಅವಕಾಶ ಕಲ್ಪಿಸಲಾಗು ತ್ತಿದೆ. ಪ್ರತಿಯೊಬ್ಬರೂ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮೇಲ್ವಿಚಾರಣೆ ಮಾಡಲಾಗುತ್ತಿದ್ದು, ನ್ಯಾಯಾ ಲಯದ ಸಂಕೀರ್ಣ, ಪ್ರತೀ ಹಾಲ್ ಅನ್ನು ಬೆಳಗ್ಗೆ ಮತ್ತು ಮಧ್ಯಾಹ್ನ ಸಂಪೂರ್ಣ ವಾಗಿ ಸ್ಯಾನಿಟೈಸ್ ಮಾಡಲಾಗುವುದು.
ಬಂದೋಬಸ್ತ್: ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಹಾಗೂ ಉಚ್ಛ ನ್ಯಾಯಾಲಯದ ಸೂಚನೆಯನ್ವಯ ಎರಡೂ ನ್ಯಾಯಾಲಯ ಸಂಕೀರ್ಣಗಳಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ವ್ಯಾಪಕ ಬಂದೋಬಸ್ತ್ ವ್ಯವಸ್ಥೆ ಮಾಡ ಲಾಗಿದೆ. ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ(ಹಳೇ ಕಟ್ಟಡ)ದಲ್ಲಿ ಲಕ್ಷ್ಮೀ ಪುರಂ ಠಾಣೆ ಇನ್‍ಸ್ಪೆಕ್ಟರ್ ಗಂಗಾಧರ ಮತ್ತು ಮಳಲವಾಡಿಯ ಹೊಸ ಕೋರ್ಟ್ ಬಳಿ ಅಶೋಕಪುರಂ ಠಾಣೆ ಇನ್‍ಸ್ಪೆಕ್ಟರ್ ಮಂಜುನಾಥ ಬಂದೋಬಸ್ತ್ ಉಸ್ತು ವಾರಿ ವಹಿಸಿದ್ದಾರೆ.
ಗರಿಗೆದರಿದ ಚಟುವಟಿಕೆ: ಲಾಕ್‍ಡೌನ್ ನಿಂದಾಗಿ ನ್ಯಾಯಾಲಯಗಳು ಬಂದ್ ಆಗಿದ್ದ ಕಾರಣ ಬಿಕೋ ಎನ್ನುತ್ತಿದ್ದ ಆವ ರಣಗಳಲ್ಲೀಗ ವಕೀಲರ ಚಲನ-ವಲನ ಕಂಡು ಬರುತ್ತಿದೆ. ಕೋರ್ಟ್ ಹೊರಗಿನ ಅಂಗಡಿ ಮುಂಗಟ್ಟುಗಳಲ್ಲೂ ವ್ಯಾಪಾರ-ವಹಿವಾಟು ಆರಂಭವಾಗಿದೆ.
ವಕೀಲರ ಸಂಘದ ಕಚೇರಿ ತೆರೆದಿಲ್ಲ: ನ್ಯಾಯಾಲಯ ಬಂದ್ ಆದ ದಿನದಿಂದ ಮುಚ್ಚಿದ ಜಿಲ್ಲಾ ಸತ್ರ ನ್ಯಾಯಾಲಯದ ಆವರಣದಲ್ಲಿರುವ ಮೈಸೂರು ವಕೀಲರ ಸಂಘದ ಕಚೇರಿಯನ್ನು ಸೋಮವಾರ ದಿಂದ ಕೋರ್ಟ್ ಕಲಾಪ ಆರಂಭವಾದರೂ ತೆರೆಯಲು ಅವಕಾಶ ನೀಡಿಲ್ಲ. ಆದ ಕಾರಣ ವಕೀಲರು ಕೋರ್ಟ್ ಹೊರಗೆ ಲವ-ಕುಶ ಪಾರ್ಕಿನಲ್ಲೇ ಕಾಲ ಕಳೆಯುತ್ತಿದ್ದಾರೆ.