`ಕ್ರೈಸ್ತ ಅಭಿವೃದ್ಧಿ ನಿಗಮ’ ಸ್ಥಾಪನೆಗೆ ಮೈಸೂರು ಬಿಷಪ್ ಡಾ.ವಿಲಿಯಂ ಸಲಹೆ
ಮೈಸೂರು

`ಕ್ರೈಸ್ತ ಅಭಿವೃದ್ಧಿ ನಿಗಮ’ ಸ್ಥಾಪನೆಗೆ ಮೈಸೂರು ಬಿಷಪ್ ಡಾ.ವಿಲಿಯಂ ಸಲಹೆ

June 2, 2020

ಮೈಸೂರು,ಜೂ.1(ಎಸ್‍ಪಿಎನ್)-`ಕ್ರಿಶ್ಚಿಯನ್ ಅಭಿವೃದ್ಧಿ ಸಮಿತಿ’(ಸಿಡಿಸಿ) ಬದಲಾಗಿ, `ಕ್ರೈಸ್ತ ಅಭಿವೃದ್ಧಿ ನಿಗಮ’ ಸ್ಥಾಪನೆಗೆ ರಾಜಕೀಯ ಮುಖಂಡರು, ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಬಿಷಪ್ ಡಾ.ಕೆ.ಎ.ವಿಲಿಯಂ ಅಭಿಪ್ರಾಯಪಟ್ಟರು.

ಮೈಸೂರಿನ ಸಂತ ಫಿಲೋಮಿನಾ ಕಾಲೇಜು ಆವರಣದಲ್ಲಿ `ಕ್ರಿಶ್ಚಿಯನ್ ಅಭಿವೃದ್ಧಿ ಸಮಿತಿ’ಯ ಛೇರ್ಮನ್ ಜಾಯ್ಲಸ್ ಡಿಸೋಜಾ ಅವರನ್ನು ಅಭಿನಂದಿಸುವ ಸಮಾರಂಭದಲ್ಲಿ ಅವರು ತಿಳಿಸಿ ದರು. ಈಗಿನ ಸಮಿತಿ 2012ರಲ್ಲಿ ಆರಂಭವಾಗಿದ್ದರೂ, ಇದರಡಿ ಕೇವಲ ಕಟ್ಟಡ ದುರಸ್ತಿ, ಚರ್ಚ್ ಅಭಿವೃದ್ಧಿಗಳಿಗೆ ಮಾತ್ರ ಈ ಅನು ದಾನ ಮೀಸಲಾಗಿದೆ. ಆದರೆ, ಸಮುದಾಯದ ವಿದ್ಯಾವಂತ ಯುವಕ ರಿಗೆ ಇದರಿಂದ ಪ್ರಯೋಜನವಾಗುತ್ತಿಲ್ಲ. ಹಾಗಾಗಿ ಈಗಿರುವ `ಕ್ರಿಶ್ಚಿಯನ್ ಅಭಿವೃದ್ಧಿ ಸಮಿತಿ’ ಬದಲಾಗಿ, `ಕ್ರೈಸ್ತ ಅಭಿವೃದ್ಧಿ ನಿಗಮ’ವೆಂದು ಪರಿವರ್ತಿಸಿದರೆ ಸಮುದಾಯದ ಯುವಕರು, ಬಡವರಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಕ್ರೈಸ್ತ ಸಮು ದಾಯಕ್ಕೆ ಸೇರಿದ ಶೈಕ್ಷಣಿಕ ಮತ್ತು ಆರೋಗ್ಯ ಸಂಸ್ಥೆಗಳ ಕಟ್ಟಡ ಗಳನ್ನು ಬೇರೆ ಬೇರೆ ಕಾರ್ಯಕ್ರಮಗಳಿಗೆ ಬಳಸಿಕೊಳ್ಳುತ್ತವೆ. ಆದರೆ, ನಮ್ಮ ಸಂಸ್ಥೆಗಳ ಕೆಲಸ ಕಾರ್ಯಗಳಿಗೆ ಮಾತ್ರ ಅಧಿಕಾರಿ ಗಳು ಸ್ಪಂದಿಸುತ್ತಿಲ್ಲ. ಇದರಿಂದ ನಮ್ಮ ಕೆಲಸ-ಕಾರ್ಯಗಳು ಇಲಾಖಾ ಮಟ್ಟದಲ್ಲಿ ಸುಗಮವಾಗಿ ಆಗುತ್ತಿಲ್ಲ. ಇದು ಎಲ್ಲಾ ಸರ್ಕಾರದ ಅವಧಿಯಲ್ಲೂ ಅಧಿಕಾರಿಗಳ ಮನಸ್ಥಿತಿ ಇದೇ ಆಗಿದೆ ಎಂದು ಬಿಷಪ್ ಬೇಸರ ವ್ಯಕ್ತಪಡಿಸಿದರು.

3ಬಿ ವರ್ಗದಿಂದ ಪ್ರತ್ಯೇಕಿಸಿ: `3ಬಿ’ ವರ್ಗದಲ್ಲಿ ಕ್ರೈಸ್ತ ಸಮುದಾಯ ಬರುವುದರಿಂದ ಬಲಿಷ್ಠ ಸಮುದಾಯಗಳ ಜೊತೆಗೆ ನಮ್ಮ ಯುವಕರು ಸ್ಪರ್ಧಿಸಲಾಗದೇ, ಸರ್ಕಾರದ ಪ್ರಮುಖ ಹುದ್ದೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆ ಆಗುತ್ತಿಲ್ಲ. ಇದರಿಂದ ಸಮುದಾಯದ ಪ್ರಗತಿಗೂ ಹಿನ್ನಡೆಯಾಗುತ್ತಿದೆ. ಹಾಗಾಗಿ `3ಬಿ’ ವರ್ಗದಿಂದ ನಮ್ಮ ಸಮುದಾಯ ಪ್ರತ್ಯೇಕಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ತಿಳಿಸಿದರು.

`ಕ್ರಿಶ್ಚಿಯನ್ ಅಭಿವೃದ್ಧಿ ಸಮಿತಿ’ ಛೇರ್ಮನ್ ಜಾಯ್ಲಸ್ ಡಿಸೋಜಾ ಮಾತನಾಡಿ, ಕ್ರೈಸ್ತ ಸಮುದಾಯವನ್ನು `3ಬಿ’ ವರ್ಗದಿಂದ ಪ್ರತ್ಯೇ ಕ್ಷಿಸಿ, ಪ್ರತ್ಯೇಕ ಮೀಸಲಾತಿ ಕಲ್ಪಿಸುವ ಹೋರಾಟಕ್ಕೆ ಕ್ರೈಸ್ತ ಧರ್ಮ ಗುರುಗಳು ಒಗ್ಗಟ್ಟಾಗಿ ರಾಜ್ಯ ಸರ್ಕಾರದ ಮೇಲೆ ಒತ್ತಡ ತರಬೇಕು. ಆಗ ಮಾತ್ರ ಕ್ರೈಸ್ತ ಸಮುದಾಯದ ಬೇಡಿಕೆ ಈಡೇರಲು ಸಾಧ್ಯ. ಈ ಹೋರಾಟದಿಂದ ನಮ್ಮ ಸಮುದಾಯದ ಹೆಚ್ಚಿನ ಯುವಕರಿಗೆ ಅನುಕೂಲವಾಗುತ್ತದೆ ಎಂದರು.

ಬಿಜೆಪಿ ಮುಖಂಡ ಡಾ.ಅನಿಲ್ ಥಾಮಸ್ ಪ್ರಾಸ್ತಾವಿಕವಾಗಿ ಮಾತನಾಡಿ, 2012ರಲ್ಲಿ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪ ನವರು `ಕ್ರಿಶ್ಚಿಯನ್ ಅಭಿವೃದ್ಧಿ ಸಮಿತಿ’ ಸ್ಥಾಪಿಸಿ, 50 ಕೋಟಿ ಅನು ದಾನ ನೀಡಿದ್ದರು. ಇದೀಗ, ಮತ್ತೆ ಬಿಎಸ್‍ವೈ ಮುಖ್ಯಮಂತ್ರಿ ಗಳಾದ ನಂತರ ಈ ಬಾರಿ ಬಜೆಟ್‍ನಲ್ಲಿ 200 ಕೋಟಿ ಅನುದಾನ ನೀಡಿದ್ದಾರೆ. ಇದರಿಂದ ನಮ್ಮ ಸಮುದಾಯಕ್ಕೆ ಸಾಕಷ್ಟು ಅನುಕೂಲ ಗಳಾಗಿವೆ. ಮುಂದೆ ಇತರೆ ಬೇಡಿಕೆಗಳ ಬಗ್ಗೆಯೂ ರಾಜ್ಯ ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು. ಕ್ರೈಸ್ತ ಅಭಿವೃದ್ಧಿ ಸಮಿತಿ ನೂತನ ಅಧ್ಯಕ್ಷ ಜಾಯ್ಲಸ್ ಡಿಸೋಜಾ ಅವರನ್ನು ಮೈಸೂರು ಪೇಟ ತೊಡಿಸಿ, ಬಿಷಪ್ ಡಾ.ಕೆ.ಎ.ವಿಲಿಯಂ ಸನ್ಮಾನಿಸಿದರು. ಈ ವೇಳೆ ಬಿಷಪ್ ಮೋಹನ್ ಮನೋರಾಜ್, ಫಾದರ್ ಲೆಸ್ಲಿ ಮೊರಾಸ್, ಫಾದರ್ ತಿಮೋತಿ ಜಾನ್ ಪ್ರಾರ್ಥಿಸಿದರೆ, ಮಾಥ್ಯೂ ಬಿ.ಸುರೇಶ್ ವಂದಿಸಿದರು. ರಾಬರ್ಟ್ ಉಪಸ್ಥಿತರಿದ್ದರು.

Translate »