ನ್ಯಾಯಾಲಯದ ತೀರ್ಪುಗಳು ಸಮಾಜದಲ್ಲಿ ಚಿಂತನೆ ಹುಟ್ಟು ಹಾಕಬೇಕು
ಮೈಸೂರು

ನ್ಯಾಯಾಲಯದ ತೀರ್ಪುಗಳು ಸಮಾಜದಲ್ಲಿ ಚಿಂತನೆ ಹುಟ್ಟು ಹಾಕಬೇಕು

December 27, 2020

ಮೈಸೂರು,ಡಿ.26(ಪಿಎಂ)-ನ್ಯಾಯಾ ಲಯದ ತೀರ್ಪುಗಳು ಕೇವಲ ಕಾಗದ ದಲ್ಲಿ ಉಳಿಯದೇ ಜನಸಾಮಾನ್ಯರಲ್ಲಿ ಚಿಂತನೆ ಹುಟ್ಟು ಹಾಕುವಂತಿರಬೇಕು. ಜೊತೆಗೆ ಅಧ್ಯಯನಶೀಲರಾಗಿ ಜ್ಞಾನ ಸಂಪಾದಿಸದ ಹೊರತು ವಕೀಲ ವೃತ್ತಿಯಲ್ಲಿ ಸಮರ್ಥ ವಾದ ಮಂಡಿಸಲು ಸಾಧ್ಯವಿಲ್ಲ ಎಂದು ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅಭಿಪ್ರಾಯಪಟ್ಟರು.

ಮೈಸೂರಿನ ನ್ಯಾಯಾಲಯದ ಆವರಣ ದಲ್ಲಿರುವ ಮೈಸೂರು ವಕೀಲರ ಸಂಘದ ಸಭಾಂಗಣದಲ್ಲಿ ವಕೀಲರ ಸಂಘ ಮತ್ತು ಲಾಗೈಡ್ ಕನ್ನಡ ಕಾನೂನು ಮಾಸ ಪತ್ರಿಕೆ ಜಂಟಿ ಆಶ್ರಯದಲ್ಲಿ ಶನಿವಾರ ಹಮ್ಮಿ ಕೊಂಡಿದ್ದ 2021ನೇ ಸಾಲಿನ ಡೈರಿ ಬಿಡುಗಡೆ ಸಮಾರಂಭ ಉದ್ಘಾಟಿಸಿ, ಡೈರಿ ಬಿಡು ಗಡೆಗೊಳಿಸಿ, ಅವರು ಮಾತನಾಡಿದರು.

ಜನರ ಮನಸ್ಸಿನ ಮೇಲೆ ನ್ಯಾಯಾ ಲಯದ ತೀರ್ಪು ಯಾವುದೇ ಭಾವನೆ ಉಂಟು ಮಾಡದಿದ್ದರೆ ಪ್ರಯೋಜನವಿಲ್ಲ. ಅದು ಸಮಾಜವನ್ನು ಚಿಂತನೆಗೆ ಒಳಪಡಿಸು ವಂತಿರಬೇಕು. ರೈತರು ಹಾಗೂ ಶೋಷಿತರ ಸಮಸ್ಯೆಗಳನ್ನು ವಕೀಲರು ತಿಳಿದುಕೊಳ್ಳಬೇಕು. ಆಗ ಮಾತ್ರ ಅವರಿಗೆ ನ್ಯಾಯ ಕೊಡಿಸಲು ವಕೀಲರಿಂದ ಸಾಧ್ಯ ಎಂದು ತಿಳಿಸಿದರು.

ಸಾಲದ ಬಾಕಿ ವಸೂಲಾತಿಗೆ ರೈತನ ಟಿಲ್ಲರ್ ವಶಪಡಿಸಿಕೊಳ್ಳುವ ಸಂಬಂಧ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ಅದರ ಬಗ್ಗೆ ಹಿಂದೆ ತಾವು ನೀಡಿದ ತೀರ್ಪನ್ನು ಉಲ್ಲೇಖಿಸಿದ ಕೃಷ್ಣ ಎಸ್.ದೀಕ್ಷಿತ್, ಸಿಪಿಸಿ ಸಂಹಿತೆಯಲ್ಲಿ ರೈತ ಕೃಷಿ ಉಪಕರಣಗಳನ್ನು ವಶಪಡಿಸಿಕೊಳ್ಳಲು ಅವಕಾಶ ಇಲ್ಲ ಎಂದು ಹೇಳಲಾಗಿದೆ. ಆದಾಗ್ಯೂ ಕೃಷಿ ಉಪಕರಣ ಗಳ ಮೇಲಿನ ವಿಂಗಡಣೆಯ ವ್ಯಾಖ್ಯಾನ ದಲ್ಲಿ ಅಲ್ಲಿ ಸ್ಪಷ್ಟತೆ ಇಲ್ಲ. ಆದರೂ ರೈತನ ಸಂಕಷ್ಟ ಹಾಗೂ ಬಡತನದ ಬಗೆಗಿನ ಅರಿವು ಇದ್ದ ಹಿನ್ನೆಲೆಯಲ್ಲಿ ಟಿಲ್ಲರ್ ವಶಪಡಿಸಿ ಕೊಳ್ಳಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ತೀರ್ಪು ನೀಡಿದೆ ಎಂದು ತೀರ್ಪಿನ ಮಹತ್ವ ಕುರಿತು ಉದಾಹರಣೆ ನೀಡಿದರು.

ಒಬ್ಬ ಒಳ್ಳೆಯ ವಕೀಲನಾಗಿ ಬೆಳೆಯಬೇಕಾ ದರೆ ಕಾನೂನಿನ ಆಳವಾದ ಅಧ್ಯಯನ ಮಾಡಬೇಕು. ಮನುಷ್ಯನಿಗೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ಅಧ್ಯಯನ ಮಾಡ ಬೇಕು. ಗೋಹತ್ಯೆ ನಿಷೇಧ ಕಾಯ್ದೆ ಎಂದಾ ಕ್ಷಣ, ನಿಮ್ಮ ಮುಂದೆ ಹಸುಗಳ ಜೀವನ ಶೈಲಿ, ಹಸುಗಳು ಮತ್ತು ಮನುಷ್ಯನ ನಡು ವಿನ ಸಂಬಂಧ ಗೊತ್ತಿರಬೇಕು. ಇಲ್ಲವಾದರೆ ಈ ಸಂಬಂಧ ವಾದ ಮಾಡುವ ಸಾಮಥ್ರ್ಯ ಬರುವುದಿಲ್ಲ ಎಂದು ಹೇಳಿದರು.

ವಕೀಲ ವೃತ್ತಿ ಅತ್ಯಂತ ಶ್ರೇಷ್ಠ. ವೃತ್ತಿಯ ಘನತೆ, ಗೌರವವನ್ನು ವಕೀಲರು ಕಾಪಾಡಿ ಕೊಂಡು ಹೋಗಬೇಕು. ನಾನು ವಕೀಲ ವೃತ್ತಿಯಲ್ಲಿದ್ದಾಗಿನ ಅತ್ಯಂತ ಸಂತಸದ ಕ್ಷಣ ಗಳನ್ನು ಮರೆಯಲಾಗದು. ನ್ಯಾಯಾಧೀಶ ಆಗಬೇಕೆಂಬ ಆಕಾಂಕ್ಷೆ ನನಗೆ ಇರಲಿಲ್ಲ. ಏಕೆಂದರೆ ವಕೀಲರಾಗಿದ್ದಾಗ ನಮಗೆ ಹೆಚ್ಚಿನ ವಾಕ್ ಸ್ವಾತಂತ್ರ್ಯ ಇರುತ್ತದೆ. ಎಷ್ಟು ಬೇಕಾ ದರೂ ಮಾತನಾಡಬಹುದು. ಆದರೆ ನ್ಯಾಯಾಧೀಶರಾದ ಬಳಿಕ ಕೆಲವು ಇತಿಮಿತಿ ಗಳು ಇರುತ್ತವೆ ಎಂದು ಹೇಳಿದರು.

ಬ್ರಿಟನ್ ಮತ್ತು ಅಮೆರಿಕದಲ್ಲಿ ಕಾನೂನು ಬೆಳವಣಿಗೆ ಹೊಂದಲು ಪ್ರಮುಖ ಕಾರಣ ಅಲ್ಲಿನ ನ್ಯಾಯಾಧೀಶರ ಕ್ರಿಯಾಶೀಲತೆ. ಆದರೆ ಭಾರತದಲ್ಲಿ ಕ್ರಿಯಾಶೀಲ ವಕೀಲ ರಿಂದ ಕಾನೂನಿನ ಬೆಳವಣಿಗೆ ಕಂಡಿದೆ. ವಕೀಲರು ನಮ್ಮ ಸಂವಿಧಾನ ಸಂರಕ್ಷಣೆ ಯಲ್ಲಿ ನಿರತರಾಗಿದ್ದಾರೆ. ನಾನು ಕೂಡಾ ಹಲವು ವರ್ಷಗಳ ಕಾಲ ವಕೀಲರ ಸಂಘದ ಸದಸ್ಯನಾಗಿದ್ದೆ ಎನ್ನಲು ಹೆಮ್ಮೆಯೆನಿಸುತ್ತದೆ ಎಂದು ಹರ್ಷ ವ್ಯಕ್ತಪಡಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಹಿರಿಯ ವಕೀಲ ಎಂ.ಡಿ.ಹರೀಶ್‍ಕುಮಾರ್ ಹೆಗ್ಡೆ, ನ್ಯಾಯಾಲಯದ ತೀರ್ಪುಗಳನ್ನು ಕನ್ನಡ ದಲ್ಲಿ ಪ್ರಕಟಿಸಿ ಕಿರಿಯ ವಕೀಲರಿಗೆ ಅನು ಕೂಲ ಮಾಡಿಕೊಡುವ ಉದ್ದೇಶದಿಂದ 20 ವರ್ಷಗಳ ಹಿಂದೆ ಲಾ ಗೈಡ್ ಕನ್ನಡ ಕಾನೂನು ಮಾಸ ಪತ್ರಿಕೆ ಆರಂಭಿಸ ಲಾಯಿತು. ಮಾಸ ಪತ್ರಿಕೆ ಹೊರತರು ವುದು ಮಾತ್ರವಲ್ಲದೆ, ಸರ್ಕಾರಿ ಅಭಿ ಯೋಜಕರ ನೇಮಕಾತಿ ಪರೀಕ್ಷೆ, ನ್ಯಾಯಾ ಧೀಶರ ನೇಮಕಾತಿ ಪರೀಕ್ಷೆಗೆ ನುರಿತ ಕಾನೂನು ತಜ್ಞರಿಂದ ತರಬೇತಿ ತರಗತಿ ಗಳನ್ನು ನಡೆಸಲಾಗುತ್ತಿದೆ ಎಂದರು.

ಅಲ್ಲದೆ, ಕೊರೊನಾದಿಂದ ಆರ್ಥಿಕ ಸಮಸ್ಯೆಯಲ್ಲಿದ್ದ ವಕೀಲರಿಗೆ ಸಹಾಯಧನ ಸಹ ನೀಡಲಾಗಿದೆ. ಇಂದು ಡೈರಿ ಬಿಡು ಗಡೆ ಮಾಡಿದ ಹೈಕೋರ್ಟ್ ನ್ಯಾಯ ಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರು ಸುವರ್ಣಾಕ್ಷರದಲ್ಲಿ ಬರೆದಿಡುವಂತಹ ಮಹತ್ವದ ತೀರ್ಪುಗಳನ್ನು ನೀಡಿದ್ದಾರೆ ಎಂದು ಹೇಳಿದರು.

ಮೈಸೂರು ವಕೀಲರ ಸಂಘದ ಕಾರ್ಯದರ್ಶಿ ಬಿ.ಶಿವಣ್ಣ ಮಾತನಾಡಿ, ಡೈರಿ ವಕೀಲರಿಗೆ ಅತ್ಯಮೂಲ್ಯವಾದ ಸಾಧನ. ಯಾವ್ಯಾವ ಕೋರ್ಟ್‍ನಲ್ಲಿ ಯಾವ ಪ್ರಕರಣಗಳ ಕಲಾಪವಿದೆ ಎಂದು ದಾಖ ಲಿಸಿಕೊಳ್ಳುವಲ್ಲಿ ಡೈರಿ ಮಹತ್ವದ ಪಾತ್ರ ವಹಿಸಲಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಮೈಸೂರು ವಕೀ ಲರ ಸಂಘದ ಅಧ್ಯಕ್ಷ ಎಸ್.ಆನಂದ್ ಕುಮಾರ್ ಮಾತನಾಡಿ, ಪ್ರತಿ ವರ್ಷ ವಕೀಲರ ಸಂಘದಿಂದ ಡೈರಿ ಹೊರತರ ಲಾಗುತ್ತಿತ್ತು. ಆದರೆ ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಕಾಲಾವಕಾಶ ಇಲ್ಲವಾ ಯಿತು. ಹೀಗಾಗಿ `ಲಾಗೈಡ್’ ಕನ್ನಡ ಕಾನೂನು ಪತ್ರಿಕೆ ಪ್ರಧಾನ ಸಂಪಾದಕ ಹೆಚ್.ಎನ್.ವೆಂಕಟೇಶ್ ಅವರನ್ನು ಸಂಘ ಕ್ಕಾಗಿ ಡೈರಿ ನೀಡುವಂತೆ ಮನವಿ ಮಾಡಿ ದಾಗ ಅವರು ಮನತುಂಬಿ ಒಪ್ಪಿ, ಇಂದು ಡೈರಿ ಬಿಡುಗಡೆಗೆ ಕಾರಣಕರ್ತರಾಗಿ ದ್ದಾರೆ. ಉಪಯುಕ್ತವಾಗುವಂತೆ ಅಚ್ಚು ಕಟ್ಟಾದ ಡೈರಿ ಮಾಡಿಸಿಕೊಟ್ಟಿದ್ದಾರೆ ಎಂದು ಅವರಿಗೆ ಧನ್ಯವಾದ ಸಲ್ಲಿಸಿದರು.

ಲಾಗೈಡ್ ಕನ್ನಡ ಕಾನೂನು ಮಾಸ ಪತ್ರಿಕೆ ಪ್ರಧಾನ ಸಂಪಾದಕ ಹೆಚ್.ಎನ್. ವೆಂಕಟೇಶ್, ಮೈಸೂರು ವಕೀಲರ ಸಂಘದ ಉಪಾಧ್ಯಕ್ಷ ಎಸ್.ಜಿ.ಶಿವಣ್ಣೇ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನ್ಯಾಯಾಧೀಶರು ಹಾಗೂ ವಕೀಲರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

 

Translate »