ಯುವ ಕಾಂಗ್ರೆಸ್ ಸಭೆಯಲ್ಲಿ ಕಾರ್ಯಕರ್ತರ ಉತ್ತೇಜಿಸಿದ ಎಂಕೆಎಸ್
ಮೈಸೂರು

ಯುವ ಕಾಂಗ್ರೆಸ್ ಸಭೆಯಲ್ಲಿ ಕಾರ್ಯಕರ್ತರ ಉತ್ತೇಜಿಸಿದ ಎಂಕೆಎಸ್

December 27, 2020

ಮೈಸೂರು, ಡಿ.26(ಎಂಕೆ)- ಕಾಂಗ್ರೆಸ್ 60 ವರ್ಷದಲ್ಲಿ ಮಾಡಿರುವ ಸಾಧನೆಗಳು ಎಂದೆಂದಿಗೂ ಅಜರಾಮರ. ಅಳಿಸಲಾ ಗದ ಶಾಯಿಯ ರೀತಿ ಜನರ ಮನದಲ್ಲಿ ಶಾಶ್ವತವಾಗಿ ಉಳಿದಿವೆ ಎಂದು ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಹೇಳಿದರು.

ಮೈಸೂರಿನ ಕುವೆಂಪು ನಗರದಲ್ಲಿರುವ ಚಿಕ್ಕಮ್ಮಾನಿಕೇತನ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ಯುವ ಕಾಂಗ್ರೆಸ್‍ನ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಯುವ ಕಾಂಗ್ರೆಸ್ ಘಟಕವು ಪಕ್ಷದ ಭವಿಷ್ಯದ ಆಸ್ತಿ. ಪಕ್ಷವೂ ಯುವ ಕಾಂಗ್ರೆಸ್‍ಗೆ ವಿಶೇಷ ಆದ್ಯತೆ ಮತ್ತು ಗೌರವ ನೀಡುತ್ತಿದೆ ಎಂದರು.

ಯುವಕರಿಗೆ ಸಾಧನೆ ಮಾಡುವ ಶಕ್ತಿ ಬಹಳಷ್ಟಿದೆ. ಆದರೆ ಕಾಲಹರಣ ಮಾಡುತ್ತಾ ಉತ್ತಮ ಅವಕಾಶಗಳನ್ನು ಕೈಚೆಲ್ಲುತ್ತಿದ್ದಾರೆ. ನಿಮ್ಮ ಶಕ್ತಿ ಮೇಲೆ ಶ್ರದ್ಧೆ ಇಟ್ಟು ಕೆಲಸ ಮಾಡಿದರೆ ಏನನ್ನಾದರೂ ಸಾಧಿಸಬಹುದು. ನನ್ನ ರಾಜಕೀಯ ಜೀವನ, ಸಮಾಜಸೇವೆ, ಹೋರಾಟದ ಮೂಲಕವೇ ಆರಂಭವಾ ಗಿದೆ. ನಿರಂತರ ಜನಸಂಪರ್ಕ ಇಟ್ಟುಕೊಂಡು ಜನಸೇವೆ ಮಾಡಿದರೆ ಮಾತ್ರ ರಾಜಕಾರಣ ದಲ್ಲಿ ಯಶಸ್ವಿಯಾಗಲು ಸಾಧ್ಯ ಎಂದು ಉತ್ತೇ ಜಿಸಿದರು. ಮೊದಲು ಯುವಕರು ಕಾಂಗ್ರೆಸ್ ಇತಿಹಾಸ ತಿಳಿಯುವ ಪ್ರಯತ್ನ ಮಾಡಬೇಕು. ನಮ್ಮ ಪಕ್ಷದ ಸರ್ಕಾರದ ಸಾಧನೆಗಳು ಬಿಜೆಪಿ ಯವರ ಸುಳ್ಳಿನ ಅಲೆಯಲ್ಲಿ ಸಿಲುಕಿವೆ. ಅದ ರಿಂದ ಹೊರಬರಲು ಸಾಮಾಜಿಕ ಜಾಲತಾಣ ಮೂಲಕ ಯುವಕರು ಜನರಿಗೆ ಸತ್ಯ ತಿಳಿಸ ಬೇಕಿದೆ ಎಂದು ಕರೆ ನೀಡಿದರು. ಮಾಜಿ ಮೇಯರ್ ಟಿ.ಬಿ.ಚಿಕ್ಕಣ್ಣ, ಪಾಲಿಕೆ ಸದಸ್ಯ ರಾದ ಜೆ.ಗೋಪಿ, ಶೋಭಾ ಸುನೀಲ್, ಮಾಜಿ ಸದಸ್ಯ ಎಂ.ಸುನೀಲ್, ಮುಖಂಡರಾದ ಜಿ.ಸೋಮಶೇಖರ್, ಭಾಸ್ಕರ್, ಶ್ರೀನಾಥ್ ಬಾಬು, ಸೇವಾದಳ ಗಿರೀಶ್, ಯುವ ಕಾಂಗ್ರೆಸ್ ಅಧ್ಯಕ್ಷ ಮನೋಜ್ ಮತ್ತಿತರರಿದ್ದರು.

Translate »