ಕೋವಿಡ್-19 ಹಿನ್ನೆಲೆ ದೂರ ಶಿಕ್ಷಣವೀಗ ಬಲು ಸಮೀಪ
ಮೈಸೂರು

ಕೋವಿಡ್-19 ಹಿನ್ನೆಲೆ ದೂರ ಶಿಕ್ಷಣವೀಗ ಬಲು ಸಮೀಪ

November 6, 2020

ಮೈಸೂರು, ನ.5(ಆರ್‍ಕೆಬಿ)- ಎಲ್ಲ ರಿಗೂ, ಎಲ್ಲೆಡೆ ಶಿಕ್ಷಣ ಎಂಬ ಉದ್ದೇಶ ದೊಂದಿಗೆ ಸ್ಥಾಪನೆಯಾದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ (ಕರಾಮುವಿ) ದೂರ ಶಿಕ್ಷಣದ ಮಹತ್ವ ಇಂದು ವಿಶ್ವದೆಲ್ಲೆಡೆ ವ್ಯಾಪಿಸಿದೆ ಎಂದು ಕರಾಮುವಿ ಕುಲಸಚಿವ ಲಿಂಗರಾಜ ಗಾಂಧಿ ಅಭಿಪ್ರಾಯಪಟ್ಟರು.

ಮೈಸೂರಿನ ಕರಾಮುವಿ ಕಾವೇರಿ ಸಭಾಂಗಣದಲ್ಲಿ ಗುರುವಾರ ಕರಾಮುವಿ ಆಯೋಜಿಸಿದ್ದ `ಆಯ್ಕೆ ಆಧಾರಿತ ಶ್ರೇಯಾಂಕ ಪದ್ಧತಿ’ (ಸಿಬಿಸಿಎಸ್) ಕುರಿತ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ಅವರು, ಕೋವಿಡ್-19 ಸಂದರ್ಭ ಇಡೀ ಜಗತ್ತಿಗೆ ದೂರ ಶಿಕ್ಷಣದ ಅನಿವಾರ್ಯತೆ ಮತ್ತು ಮಹತ್ವ ಅರಿವಾಗಿದೆ. ದೂರ ಶಿಕ್ಷಣ ಇಂದು ಸಮೀಪ ಶಿಕ್ಷಣವಾಗುತ್ತಿದೆ ಎಂದು ನುಡಿದರು. ದೂರ ಶಿಕ್ಷಣ ಉನ್ನತ ಶಿಕ್ಷಣದ ಮುಂಬಾಗಿಲಿನಲ್ಲಿದೆ. ರಾಷ್ಟ್ರೀಯ ಉನ್ನತ ಶಿಕ್ಷಣದ ಕಲ್ಪನೆ ಇದು. ನಾವಿಂದು ಅನುಭವದ ಹಂತದಲ್ಲಿದ್ದೇವೆ. ಹೊಸ ಶಿಕ್ಷಣ ಪದ್ಧತಿ ಅಳವಡಿಸಿಕೊಳ್ಳೋಣ. ನಾವೆ ಲ್ಲರೂ ಮಾನಸಿಕವಾಗಿ ಸಿದ್ಧರಾಗಿದ್ದೇವೆ. ಇತ್ತೀಚಿನದನ್ನು ಅಳವಡಿಸಿಕೊಂಡು ಕಲಿಕೆಯ ಅಲ್ಪಸ್ವಲ್ಪ ಬದಲಾವಣೆ ಮಾಡಿಕೊಂಡು ಮುನ್ನಡೆಯಬೇಕಾಗಿದೆ. ಉನ್ನತ ಶಿಕ್ಷಣ ಅಂತಾರಾಷ್ಟ್ರೀಯ ಶಿಕ್ಷಣವಾಗಲು ಸಿಬಿಸಿಎಸ್ ಮುಖ್ಯವಾಗುತ್ತದೆ ಎಂದು ತಿಳಿಸಿದರು.

ಮೈವಿವಿ ಗಣಕಯಂತ್ರ ಅಧ್ಯಯನ ಮತ್ತು ಸಂಶೋಧನ ವಿಭಾಗದ ಪ್ರಾಧ್ಯಾ ಪಕ ಡಿ.ಎಸ್.ಗುರು, ಕರಾಮುವಿ ಶೈಕ್ಷಣಿಕ ವಿಭಾಗದ ಡೀನ್ ಕಾಂಬ್ಳೆ ಅಶೋಕ್ ಇದ್ದರು.

 

 

Translate »