ಪ್ರಾಣಿಗಳ ದತ್ತು ಸ್ವೀಕಾರ
ಮೈಸೂರು

ಪ್ರಾಣಿಗಳ ದತ್ತು ಸ್ವೀಕಾರ

November 6, 2020

ಮೈಸೂರು, ನ.5-ಮೈಸೂರು ಮೃಗಾಲಯದ ಪ್ರಾಣಿಗಳ ದತ್ತು ಸ್ವೀಕಾರ ಯೋಜನೆ ಅಡಿಯಲ್ಲಿ ಬೆಂಗಳೂರಿನ ಮೇಧ ಸಿದ್ಧಾರ್ಥ 18,500 ರೂ. ಪಾವತಿಸಿ ಫ್ಲೆಮಿಂಗೊ, ಚೇತನ್ ಚುತುರ್ವೇದಿ 20,000 ರೂ. ಪಾವತಿಸಿ ಫ್ಲೆಮಿಂಗೊ, ಮೋನಾ ಡೋನಾ ರಾಜೇಶ್ 5,000 ರೂ. ಪಾವತಿಸಿ ಲೆಪರ್ಡ್ ಕ್ಯಾಟ್, ವಯಾನ್ ಅಗರ್ವಾಲ್ 2,000 ರೂ. ಪಾವತಿಸಿ ಮೌಸ್ಟಚ್ ಪ್ಯಾರಕೀಟ್, ಮೈಸೂರಿನ ರಮ್ಯ ಭಂಡಾಟರಿ 1,000 ರೂ. ಪಾವತಿಸಿ ರೆಡ್ ಅವಡವಿಟ್ ದತ್ತು ಪಡೆದಿದ್ದಾರೆ. ಬೆಂಗಳೂರಿನ ಬೆನ್ ಅಜರೆಲ್ 1,000 ರೂ. ಪಾವತಿಸಿ ರೆಡ್ ಅವಡವಿಟ್, ಮೈಸೂರಿನ ವಿನೂ.ಪಿ 1,000 ರೂ. ಪಾವತಿಸಿ ಲವ್‍ಬರ್ಡ್ ಹಾಗೂ ರಾಮನಗರದ ರಾಜಕಮಲ್ 2,000 ರೂ. ಪಾವತಿಸಿ ನಕ್ಷತ್ರ ಆಮೆ ಅನ್ನು 1 ವರ್ಷದ ಅವಧಿಗೆ ದತ್ತು ಪಡೆದಿದ್ದಾರೆ. ಪ್ರಾಣಿಗಳನ್ನು ದತ್ತು ಪಡೆಯುವ ಮೂಲಕ ಪ್ರಾಣಿಗಳ ಸಂರಕ್ಷಣೆ ಹಾಗೂ ಮೃಗಾಲಯ ನಿರ್ವಹಣೆಗೆ ಕೈಜೋಡಿಸಿದ ಎಲ್ಲರಿಗೂ ಮೃಗಾಲಯವು ಅಭಿನಂದಿಸಿದೆ.

 

 

Translate »