ವರುಣಾ ತಾಲೂಕು ರಚನೆ ಅಸಮಂಜಸ: ಡಾ.ಯತೀಂದ್ರ
ಮೈಸೂರು

ವರುಣಾ ತಾಲೂಕು ರಚನೆ ಅಸಮಂಜಸ: ಡಾ.ಯತೀಂದ್ರ

November 6, 2020

ಮೈಸೂರು,ನ.5(ಎಂಟಿವೈ)-ವರುಣಾ ಗ್ರಾಮವನ್ನು ಹೊಸ ತಾಲೂಕು ಕೇಂದ್ರವಾಗಿಸುವುದು ಸಮಂಜಸ ವಾದ ಆಲೋಚನೆ ಅಲ್ಲ ಎಂದು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಅಭಿಪ್ರಾಯ ಪಟ್ಟಿದ್ದಾರೆ. ಮೈಸೂರಲ್ಲಿ ಪತ್ರಕರ್ತ ರೊಂದಿಗೆ ಮಾತನಾಡಿದ ಅವರು, ವರುಣಾ ಗ್ರಾಮ ಮೈಸೂರು ನಗರಕ್ಕೆ ಸಮೀಪವಿದೆ. ಈ ಹಿನ್ನೆಲೆಯಲ್ಲಿ ಮೈಸೂರು ತಾಲೂಕಿಂದ ವರುಣಾ ಕ್ಷೇತ್ರವನ್ನು ಬೇರ್ಪಡಿಸಿ ಹೊಸ ತಾಲೂಕು ರಚನೆ ಮಾಡುವ ಆಲೋಚನೆ ಸರಿಯಲ್ಲ. ಜನರನ್ನು ದಿಕ್ಕು ತಪ್ಪಿಸುವ ಪ್ರತ್ಯೇಕ ತಾಲೂಕು ರಚನೆಯ ಹೇಳಿಕೆ ನೀಡಬಾರದು ಎಂದರು.

ಶಿರಾ ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ನಿಶ್ಚಿತ. ಆದರೆ, ಆರ್‍ಆರ್ ನಗರ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಪ್ರಬಲ ಪೈಪೆÇೀಟಿ ನಡೆಯಿತು. ಅಭಿವೃದ್ಧಿ ಕಾರಣಕ್ಕೆ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರ ಪರವಾಗಿ ಕೆಲವರು ಒಲವು ತೋರು ತ್ತಿದ್ದರು. ಆದರೆ, ರಾಜರಾಜೇಶ್ವರಿ ನಗರಕ್ಕೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ 2 ಸಾವಿರ ಕೋಟಿ ರೂ. ಅನುದಾನ ನೀಡಿದ್ದರು. ಹೀಗಾಗಿ ಅಲ್ಲಿ ಉತ್ತಮ ಅಭಿವೃದ್ಧಿ ಕಾರ್ಯಗಳು ಆಗಿವೆ. ಈ ಅಭಿವೃದ್ಧಿ ಕಾಂಗ್ರೆಸ್ ಅವಧಿಯಲ್ಲಿ ಆಗಿರುವ ಸಾಧನೆ ಎಂದು ಜನರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನವನ್ನು ಚುನಾವಣೆ ವೇಳೆ ಮಾಡಲಾಯಿತು ಎಂದು ಡಾ.ಯತೀಂದ್ರ ಹೇಳಿದರು.

 

 

 

Translate »