ಕೋವಿಡ್-19 ಕಡಿವಾಣ ಹಾಕಲು ಪೊಲೀಸ್ ಠಾಣೆಗಳ ಸ್ವಾಗತ ಕೌಂಟರ್‍ನಲ್ಲೇ ದೂರು ಸ್ವೀಕಾರ, ಲಘು ವಿಚಾರಣೆ ವ್ಯವಸ್ಥೆ
ಮೈಸೂರು

ಕೋವಿಡ್-19 ಕಡಿವಾಣ ಹಾಕಲು ಪೊಲೀಸ್ ಠಾಣೆಗಳ ಸ್ವಾಗತ ಕೌಂಟರ್‍ನಲ್ಲೇ ದೂರು ಸ್ವೀಕಾರ, ಲಘು ವಿಚಾರಣೆ ವ್ಯವಸ್ಥೆ

June 23, 2020

ಮೈಸೂರು,ಜೂ.22(ಆರ್‍ಕೆ)- ಕೊರೊನಾ ಭೀತಿ ಹಿನ್ನೆಲೆ ಹಾಗೂ ಸೋಂಕು ಹರಡುವು ದನ್ನು ತಡೆಯುವ ಸಲುವಾಗಿ ಮೈಸೂರಿನ ಪೊಲೀಸ್ ಠಾಣೆಗಳ ಸ್ವಾಗತ ಕೌಂಟರ್ ಗಳಲ್ಲೇ ಸಾರ್ವಜನಿಕರಿಂದ ಸಂಬಂಧಿಸಿದ ದೂರುಗಳನ್ನು ಸ್ವೀಕರಿಸಿ, ಲಘು ವಿಚಾರಣೆ ವ್ಯವಸ್ಥೆ ಮಾಡಲಾಗಿದೆ. ಕೋವಿಡ್ ಲಾಕ್ ಡೌನ್ ನಿರ್ಬಂಧ ತೆರವುಗೊಂಡು ಸಾರಿಗೆ ಸಂಚಾರ, ವಾಣಿಜ್ಯ ಚಟುವಟಿಕೆ ಆರಂಭ ವಾಗಿರುವ ಹಿನ್ನೆಲೆ ಹಾಗೂ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿ ರುವುದರಿಂದ ಎಚ್ಚೆತ್ತ ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಸಾರ್ವ ಜನಿಕರು ಠಾಣೆಗೆ ಭೇಟಿ ನೀಡುವುದರ ಮೇಲೂ ಎಚ್ಚರವಹಿಸಲು ಸೂಚಿಸಿದ್ದಾರೆ.

ಈಗಾಗಲೇ ಪ್ರತಿ ಪೊಲೀಸ್ ಠಾಣೆಯ ಪ್ರವೇಶ ದ್ವಾರದಲ್ಲಿ ಕಾರ್ಯನಿರ್ವಹಿಸು ತ್ತಿರುವ ಸ್ವಾಗತಕಾರರ ಕೌಂಟರ್‍ನಲ್ಲೇ ಸಾರ್ವಜನಿಕರಿಗೆ ಸ್ಯಾನಿಟೈಸರ್ ನೀಡಿ, ಮಾಸ್ಕ್ ಧರಿಸುವಂತೆ ಸೂಚಿಸುತ್ತಾರೆ. ಸಾಮಾನ್ಯ ದೂರುಗಳಾದರೆ ಅವುಗಳ ಪಡೆದು ಎನ್‍ಸಿಆರ್ ನೀಡುತ್ತಾರೆ. ಒಂದು ವೇಳೆ ಗಂಭೀರ ಸ್ವರೂ ಪದ ದೂರುಗಳಾದಲ್ಲಿ ಅವುಗಳ ಪಡೆದು ಸಂಬಂಧಪಟ್ಟ ಅಧಿಕಾರಿಗಳಿಗೆ ಕಳುಹಿಸಿ, ಎಫ್‍ಐಆರ್ ದಾಖಲಿಸಿ, ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ತಿಳಿಸಿದ್ದಾರೆ.

ಕೊರೊನಾ ವೈರಸ್ ಸೋಂಕಿನಿಂದಾಗಿ ಇತ್ತೀಚಿನ ದಿನಗಳಲ್ಲಿ ಠಾಣೆಗಳಿಗೆ ಬರುವ ಜನರ ಸಂಖ್ಯೆ ಕಡಿಮೆಯಾಗುತ್ತಿದೆ. ಬಹು ತೇಕ ಎಲ್ಲಾ ದೂರುಗಳನ್ನು ಸ್ವಾಗತ ಕೌಂಟರ್ ನಲ್ಲಿ ಸ್ವೀಕರಿಸಿ, ಕ್ರಮಕೈಗೊಳ್ಳುತ್ತಿರುವು ದರಿಂದ ಸಾರ್ವಜನಿಕರನ್ನು ಪೊಲೀಸ್ ಠಾಣೆ ಒಳಗೆ ಪ್ರವೇಶಿಸುವ, ಅದರಿಂದ ಸೋಂಕು ತಗುಲುವ ಭೀತಿ ಇಲ್ಲ ಎಂದರು.

ಕೋವಿಡ್-19 ಹಿನ್ನೆಲೆ ಪ್ರತ್ಯೇಕ ಕಿಯಾಸ್ಕ್ ಮಾಡಲು ಸ್ಥಳವೂ ಇಲ್ಲ, ಮೇಲಾಗಿ ಸಿಬ್ಬಂದಿ ಕೊರತೆಯೂ ಇರುವ ಕಾರಣ ಹಾಲಿ ಇರುವ ಕೌಂಟರ್‍ನಲ್ಲಿ ಬಹುತೇಕ ದೂರುಗಳ ಸ್ವೀಕರಿಸಿ, ವಿಚಾರಣೆ ನಡೆಸಿ ಇತ್ಯರ್ಥಗೊಳಿಸುತ್ತಿದ್ದೇವೆ. ಇದರಿಂದಾಗಿ ಪೊಲೀಸ್ ಠಾಣೆ ಒಳಗೆ ಜನರು ಅನಗತ್ಯವಾಗಿ ಸುಳಿದು ಸೋಂಕು ಹರಡುವುದಕ್ಕೆ ಆಸ್ಪದವಿಲ್ಲದಂತಾಗುತ್ತದೆ ಎಂದೂ ಡಾ.ಚಂದ್ರಗುಪ್ತ ತಿಳಿಸಿದರು.

ಅದೇ ರೀತಿ ಪೊಲೀಸ್ ಆಯುಕ್ತರ ಕಚೇರಿ, ಡಿಸಿಪಿ, ಎಸಿಪಿ ಕಚೇರಿ, ಸಿಸಿಬಿ, ಸಿಎಸ್‍ಬಿ, ಟ್ರಾಫಿಕ್ ಆಟೋಮೇಷನ್ ಸೆಂಟರ್, ಸಿಎಸ್‍ಬಿ, ಸಿಸಿಆರ್‍ಬಿ, ಎಸ್‍ಬಿ, ಲೋಕಾಯುಕ್ತ ಕಚೇರಿಗಳಲ್ಲೂ ಪ್ರವೇಶದ್ವಾರ ದಲ್ಲೇ ಜನರನ್ನು ವಿಚಾರಿಸಿ, ಅಲ್ಲಿಂದಲೇ ಅರ್ಜಿ ಪಡೆದು ಸೇವೆಯನ್ನು ಒದಗಿಸಲಾಗುತ್ತಿದ್ದು, ಎಲ್ಲಿಯೂ ಸಾರ್ವಜನಿಕರು ಠಾಣೆ ಇಲ್ಲವೆ ಕಚೇರಿ ಪ್ರವೇಶಿಸುವುದನ್ನು ಸಾಧ್ಯವಾದಷ್ಟು ನಿಯಂತ್ರಿಸಲಾಗುತ್ತಿದೆ ಎಂದರು.

Translate »