ಕೋವಿಡ್-19 ಸೋಂಕು   ಚಿಕಿತ್ಸೆಗೆ “ರೆಮ್ಡೆಸಿವಿರ್”   ಔಷಧ ಹೆಚ್ಚು ಪರಿಣಾಮಕಾರಿ 
ಮೈಸೂರು

ಕೋವಿಡ್-19 ಸೋಂಕು  ಚಿಕಿತ್ಸೆಗೆ “ರೆಮ್ಡೆಸಿವಿರ್”  ಔಷಧ ಹೆಚ್ಚು ಪರಿಣಾಮಕಾರಿ 

October 27, 2020

ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಸಿ.ಎನ್.ಮಂಜುನಾಥ್

ಮೈಸೂರು, ಅ.26 ಕೋವಿಡ್-19 ಸೋಂಕಿನಿಂದ ಬಳಲುತ್ತಿರುವವರನ್ನು ಗುಣ ಪಡಿಸುವಲ್ಲಿ “ರೆಮ್ಡಿಸಿವಿರ್ ಮೆಡಿಸಿನ್” ಬಳಕೆ ಅತ್ಯಂತ ಪರಿಣಾಮಕಾರಿಯಾಗಿದೆ ಎಂದು ಜಯದೇವ ಇನ್ಸ್‍ಟಿಟ್ಯೂಟ್ ಆಫ್ ಕಾರ್ಡಿಯಾಲಜಿ ನಿರ್ದೇಶಕ ಮತ್ತು ಹೃದ್ರೋಗ ವಿಭಾ ಗದ ಪ್ರಾಧ್ಯಾಪಕ ಡಾ.ಸಿ.ಎನ್.ಮಂಜುನಾಥ್ ತಿಳಿಸಿದ್ದಾರೆ.

ಎಲೆಟ್ಸ್ ಟೆಕ್ನೋ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಇ-ಹೆಲ್ತ್ ಮ್ಯಾಗಜೀನ್ ವತಿಯಿಂದ ಆಯೋಜಿಸಿದ್ದ ವರ್ಚು ವಲ್ ಪ್ಯಾನಲ್ ಚರ್ಚೆಯಲ್ಲಿ ಪಾಲ್ಗೊಂಡು, `ಸಾಂಕ್ರಾಮಿಕ ರೋಗಗಳ ನಿಯಂತ್ರಣ’ ಕುರಿತು ಮಂಜುನಾಥ್ ಅವರು ತಮ್ಮ ಅನುಭವ ಹಂಚಿಕೊಂಡರು. ಕೊರೊನಾ ಸೋಂಕಿಗೆ ತುತ್ತಾದವರನ್ನು ಗುಣಪಡಿಸಲು ಪ್ರಾರಂಭ ದಲ್ಲಿಯೇ ರೆಮ್ಡಿಸಿವಿರ್ ಮೆಡಿಸಿನ್ ಬಳಸುವುದರಿಂದ ಬಹುತೇಕರಲ್ಲಿ ಚೇತರಿಕೆ ಕಂಡುಬರುತ್ತಿದೆ. ನಮ್ಮ ಆಸ್ಪತ್ರೆಯಲ್ಲಿ, ಬೋಧಕವರ್ಗ ಮತ್ತು ಸಿಬ್ಬಂದಿ ಸೇರಿದಂತೆ 300 ಜನರು ಸೋಂಕಿಗೆ ಒಳಗಾಗಿದ್ದರು. ಅವರಲ್ಲಿ 30 ಜನ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಅವರಿಗೆ ರೆಮ್ಡೆಸಿವಿರ್ ಮತ್ತು ಇತರ ಅಗತ್ಯ ಔಷಧಿಗಳೊಂದಿಗೆ ಚಿಕಿತ್ಸೆ ನೀಡಲಾಯಿತು. ಇದರಿಂದ ಸೋಂಕಿತರು ಗುಣ ಮುಖವಾಗಿದ್ದು ಕಂಡು ಬಂತು ಎಂದು ಅವರು ವಿವರಿಸಿದರು.

ಶ್ವಾಸಕೋಶ ತಜ್ಞರ ಸ್ಟೇಟ್ ಕಮಿಟಿಯು ಪ್ರತಿದಿನ 100 ಪ್ರಕರಣಗಳನ್ನು ನಿಭಾಯಿಸುವ ಏಳು ಹೆಸರಾಂತ ಶ್ವಾಸಕೋಶ ಶಾಸ್ತ್ರಜ್ಞರು ಸಹ ರೆಮ್ಡೆಸಿವಿರ್ ಮೆಡಿಸಿನ್ ಪರಿಣಾಮದ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ, ಕೊರೊನಾ ಸೋಂಕಿನಿಂದ ಗಂಭೀರ ಆರೋಗ್ಯ ಸಮಸ್ಯೆ ಎದುರಿಸಿ, ವೆಂಟಿ ಲೇಟರ್‍ನಲ್ಲಿ ಇರುವ ರೋಗಿಗಳಿಗೆ ಈ ಔಷಧ ನೀಡುವುದು ಅಷ್ಟು ಸೂಕ್ತವಲ್ಲ. ಸೋಂಕು ಕಾಣಿಸಿಕೊಂಡ ಪ್ರಾರಂಭಿಕ ಹಂತದಲ್ಲೇ ಈ ಮೆಡಿಸಿನ್ ನೀಡುವುದರಿಂದ ಗಂಭೀರ ಆರೋಗ್ಯ ಸಮಸ್ಯೆ ಉಂಟಾಗುವುದನ್ನು ತಡೆಯುವುದರ ಜೊತೆಗೆ, ಬೇಗ ಚೇತರಿಸಿಕೊಳ್ಳಲು ಸಹಕಾರಿಯಾಗಲಿದೆ. ಆಸ್ಪತ್ರೆಗೆ ದಾಖಲಾಗುವುದನ್ನು ಸಹ ತಡೆಯುತ್ತದೆ. ಜೂನ್ ಮತ್ತು ಜುಲೈನಲ್ಲಿ ಈ ಔಷಧಿಯ ದರ ಕಡಿಮೆ ಇತ್ತು. ಆದರೀಗ ಈಗ ಈ ಔಷಧದ ದರ ಹೆಚ್ಚಾಗಿದೆ ಎಂದು ಹೇಳಿದರು.

ದೇಶಾದ್ಯಂತ ಆರೋಗ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಪ್ರಮುಖ ನಿಯತ ಕಾಲಿಕೆಗಳಲ್ಲಿ ಇ ಹೆಲ್ತ್ ಒಂದಾಗಿದೆ. ಈ ನಿಯತಕಾಲಿಕೆಯು ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕುರಿತು ವರ್ಚುವಲ್ ಸಂವಾದವನ್ನು ಆಯೋಜಿಸಿದ್ದು, ಇದರಲ್ಲಿ ಸರ್ಕಾರಿ ಆರೋಗ್ಯ ಪರಿಸರ ವ್ಯವಸ್ಥೆ ಗಣ್ಯರು ಮತ್ತು ಖಾಸಗಿ ಆಸ್ಪತ್ರೆಗಳು ಮತ್ತು ಸಂಶೋಧನಾ ಸಂಸ್ಥೆಗಳ ತಜ್ಞರು ಭಾಗವಹಿಸಿದ್ದರು.

 

 

Translate »