ಅಲಮೇಲಮ್ಮನ ಶಾಪ; ವಿಜ್ಞಾನಕ್ಕೆ ದೊಡ್ಡ ಸವಾಲು
ಮೈಸೂರು

ಅಲಮೇಲಮ್ಮನ ಶಾಪ; ವಿಜ್ಞಾನಕ್ಕೆ ದೊಡ್ಡ ಸವಾಲು

October 27, 2020

ಮೈಸೂರು, ಅ.26(ಆರ್‍ಕೆಬಿ)- `ಮಾಲಂಗಿ ಮಡುವಾಗಲಿ, ತಲಕಾಡು ಮರುಳಾಗಲಿ, ಮೈಸೂರು ಅರಸರಿಗೆ ಮಕ್ಕ ಳಾಗದಿರಲಿ’ ಎಂದು ಅಲಮೇಲಮ್ಮ ಶಾಪ ನೀಡಿದಳೆಂಬುದನ್ನು ಹಿರಿಯರಿಂದ ಕೇಳಿ ತಿಳಿದಿದ್ದೇವೆ. ಆದರೆ ವಿಜ್ಞಾನಕ್ಕೆ ದೊಡ್ಡ ಸವಾಲಾಗಿರುವ ಈ ವಿಚಾರ ಕುರಿತು ಅಧ್ಯ ಯನ ನಡೆಯಬೇಕಿದೆ ಎಂದು ಕನ್ನಡ ಮತ್ತು ಸಂಸ್ಕøತಿ ಹಾಗೂ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಅಭಿಪ್ರಾಯಪಟ್ಟರು.

ಮೈಸೂರಿನ ವಸ್ತು ಪ್ರದರ್ಶನ ಆವರಣ ದಲ್ಲಿರುವ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಸಭಾಂ ಗಣದಲ್ಲಿ ಸೋಮವಾರ ನಡೆದ ಪುಸ್ತಕ ಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅಲಮೇಲಮ್ಮನ ಶಾಪ ಕೆಲವರ ದೃಷ್ಟಿಯಲ್ಲಿ ಮೂಢನಂಬಿಕೆ ಎನ್ನ ಲಾಗುತ್ತದೆ. ಆದರೆ ಒಂದು ಕ್ಷಣ ಅವ ಲೋಕಿಸಿದರೆ ಅಲಮೇಲಮ್ಮನ ಶಾಪದ ರೀತಿಯಲ್ಲಿ ಮಾಲಂಗಿ ಮಡುವಾಗಿ, ತಲ ಕಾಡು ಮರಳಾಗಿದೆ. ಮೈಸೂರು ಅರಸರಿಗೆ ಮಕ್ಕಳಾಗದಿರಲಿ ಎಂಬುದಕ್ಕೆ ತಕ್ಕ ರೀತಿ ಯಲ್ಲಿಯೇ 6-7 ತಲೆಮಾರುಗಳಿಂದ ಮೈಸೂರು ಅರಸರು ದತ್ತು ಸ್ವೀಕಾರ ಮಾಡಿದ ಬಳಿಕವೇ ವಾರಸುದಾರರು ಬಂದಿರುವು ದನ್ನು ಕಂಡಿದ್ದೇವೆ. ಹೀಗಿದ್ದಾಗ ಅಲಮೇಲ ಮ್ಮನ ಶಾಪ ನಂಬಬೇಕೋ, ಮೂಢನಂಬಿಕೆ ಎನ್ನಬೇಕೋ ಅಥವಾ ಸಾತ್ವಿಕ ಶಕ್ತಿಧಾರಣೆ ಮಾಡಿಕೊಂಡವರು ಕೊಟ್ಟ ಶಾಪ ಶತ ಮಾನಗಳ ಕಾಲ ಮುಂದುವರಿಯುತ್ತಾ ಬಂದಿ ರುವುದು ನಿಜಕ್ಕೂ ವಿಜ್ಞಾನಕ್ಕೆ ಒಂದು ದೊಡ್ಡ ಸವಾಲೇ ಆಗಿದೆ. ಇದರ ಸಮಗ್ರ ಅಧ್ಯ ಯನ ಆಗಬೇಕು ಎಂದು ಸಲಹೆ ನೀಡಿದರು.

ತಲಕಾಡಿನಲ್ಲಿ ನಡೆದ ಉತ್ಖನನದ ಪ್ರಕಾರ 1400 ವರ್ಷಗಳ ಪೂರ್ವ ದಲ್ಲಿಯೇ ತಲಕಾಡಿನಲ್ಲಿ ಅಕ್ಕಸಾಲಿಗ ರೋಮ್ ನಾಣ್ಯಗಳನ್ನು ನಕಲು ಮಾಡುತ್ತಿದ್ದ ಎಂಬುದು ಇಂದು ಬಿಡುಗಡೆಯಾಗಿರುವ `ಆಕ್ರ್ಯಾ ಲಜಿಕಲ್ ಎಕ್ಸಕೇವಶನ್ ಅಟ್ ತಲಕಾಡ್ ವಾಲ್ಯೂಂ-2’ ಪುಸ್ತಕದಲ್ಲಿ ದಾಖಲಾಗಿದೆ. ಭಾರತ ಮತ್ತು ರೋಮ್‍ನ ಸಂಬಂಧವನ್ನು ಇದು ತಿಳಿಸುತ್ತದೆ ಎಂದರು. ಇದೇ ಸಂದರ್ಭದಲ್ಲಿ ಪುರಾತತ್ವ ಇಲಾಖೆ ಹೊರ ತಂದಿರುವ ‘ಆಕ್ರ್ಯಾಲಜಿಕಲ್ ಎಕ್ಸ ಕೇವ ಶನ್ ಅಟ್ ತಲಕಾಡ್ ವಾಲ್ಯೂಂ -2’, ‘ಬುದ್ಧೀಸ್ಟ್ ಆರ್ಟ್ ಅಂಡ್ ಕಲ್ಚರ್ ಇನ್ ಕರ್ನಾಟಕ’, ‘ಹಂಪಿ ಸ್ಪ್ಲೆಂಡರ್ ದಟ್ ವಾಸ್’, ‘ಮೈಸೂರು ದಸರಾ ದಿ ಸ್ಟೇಟ್ ಫೆಸ್ಟಿವಲï’, ‘ಕರ್ನಾಟಕ ಎ ಗಾರ್ಡನ್ ಆಫ್ ಆರ್ಕಿ ಟೆಕ್ಚರ್’ ಪುಸ್ತಕಗಳನ್ನು ಸಹಕಾರ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಬಿಡುಗಡೆ ಮಾಡಿದರು. ಶಾಸಕರಾದ ಎಸ್.ಎ.ರಾಮದಾಸ್, ಎಲ್. ನಾಗೇಂದ್ರ, ಜಿಪಂ ಅಧ್ಯಕ್ಷೆ ಪರಿಮಳಾ ಶ್ಯಾಂ, ಪುರಾತತ್ವ ಇಲಾಖೆ ಆಯುಕ್ತೆ ಆರ್. ಪೂರ್ಣಿಮಾ, ಉಪನಿರ್ದೇಶಕ ಡಾ. ಗೋಪಾಲ್, ಪುಸ್ತಕದ ಲೇಖಕರಾದ ಎಂ. ಎಸ್.ಕೃಷ್ಣಮೂರ್ತಿ, ಡಾ.ಲ.ನ.ಸ್ವಾಮಿ ಇದ್ದರು.

Translate »