ಮೈಸೂರು,ನ.8(ಎಂಟಿವೈ)-ಮೈಸೂರಲ್ಲಿ ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟಲು ಮುಂದಾಗಿರುವ ಜಿಲ್ಲಾಡಳಿತ ಇದೀಗ ನಗರದ ಮಾಲ್‍ಗಳಲ್ಲಿ ಕೋವಿಡ್ ಟೆಸ್ಟ್ ನಡೆಸಲು ಮುಂದಾಗಿದೆ.
ಎರಡನೇ ಹಂತದ ಕೊರೊನಾ ಅಲೆಯಿಂದ ಮೈಸೂರಿಗರನ್ನು ರಕ್ಷಿಸಲು ಕೋವಿಡ್ ಟೆಸ್ಟ್ ಸಂಖ್ಯೆ ಹೆಚ್ಚಿಸಿದೆ. ಅಲ್ಲದೆ ಒಂದೇ ದಿನದಲ್ಲಿ ಕೋವಿಡ್ ಟೆಸ್ಟ್ ಫಲಿತಾಂಶ ಪ್ರಕಟಿಸಲು ಕ್ರಮ ಕೈಗೊಳ್ಳ ಲಾಗಿದ್ದು, ನಾಳೆಯಿಂದ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಕೋಟಿ ರೂ. ಮೌಲ್ಯದ `ಲಿಕ್ವಿಡ್ ಹ್ಯಾಂಡಲಿಂಗ್ ಸಿಸ್ಟಮ್’ ಯಂತ್ರದ ಮೂಲಕ ಟೆಸ್ಟ್ ಆರಂಭಿಸಲಾಗುತ್ತಿದೆ. ಒಟ್ಟಾರೆ ಒಂದು ದಿನ ದಲ್ಲಿ 4 ಸಾವಿರ ಕೊರೊನಾ ಸೋಂಕಿತರ ಸ್ಯಾಂಪಲ್ ಅನ್ನು ಪರೀಕ್ಷಿಸಿ, ಫಲಿತಾಂಶ ನೀಡುವ ವ್ಯವಸ್ಥೆ ಮೈಸೂರಲ್ಲಿ ಚಾಲ್ತಿಯ ಲ್ಲಿದೆ. ಇದೀಗ ಕೊರೊನಾ ಸೋಂಕಿತರನ್ನು ಪತ್ತೆಹಚ್ಚಿ ತ್ವರಿತಗತಿ ಯಲ್ಲಿ ಚಿಕಿತ್ಸೆ ನೀಡಿ, ಅಪಾಯದಿಂದ ಪಾರು ಮಾಡುವುದರೊಂ ದಿಗೆ ಸೋಂಕು ಹರಡುವಿಕೆ ತಡೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇದೀಗ ಮಾಲ್‍ಗಳಲ್ಲೂ ಕೋವಿಡ್-19 ಟೆಸ್ಟ್ ನಡೆಸಲು ಮುಂದಾಗಿದೆ. ಪ್ರಾಥಮಿಕ ಹಂತದಲ್ಲಿ ನಜûರ್ ಬಾದ್‍ನಲ್ಲಿರುವ ಫೋರಂ ಮಾಲ್ ಹಾಗೂ ಮಾಲ್ ಆಫ್ ಮೈಸೂರ್‍ನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಕೋವಿಡ್ ಟೆಸ್ಟ್ ನಡೆಸಲಾಗುತ್ತಿದೆ. ವಾರಾಂತ್ಯ ರಜೆ ದಿನಗಳಲ್ಲಿ ಶಾಪಿಂಗ್‍ಗಾಗಿ ಮಾಲ್‍ಗಳಿಗೆ ಹೆಚ್ಚಿನ ಜನರು ಬರುವುದರಿಂದ ಸೋಂಕು ಹರಡಬಹುದೆಂಬ ಆತಂಕ ವ್ಯಕ್ತ ವಾದ ಹಿನ್ನೆಲೆಯಲ್ಲಿ ಮಾಲ್‍ಗಳ ಸಿಬ್ಬಂದಿಗಳಿಗೆ ಮೊದಲ ಹಂತ ದಲ್ಲಿ ಕೋವಿಡ್ ಟೆಸ್ಟ್ ಮಾಡಲಾಗುತ್ತಿದೆ. ಮಾಲ್‍ಗಳಲ್ಲಿ ಹೆಚ್ಚು ಜನರ ಸಂಪರ್ಕದಲ್ಲಿ ಸಿಬ್ಬಂದಿ ಇರುವುದರಿಂದ ಮೊದಲು ಸಿಬ್ಬಂ ದಿಗೆ ಟೆಸ್ಟ್ ಮಾಡಿದ ನಂತರ ಶಾಪಿಂಗ್‍ಗೆ ಬರುವ ಸಾರ್ವ ಜನಿಕರಿಗೆ ಟೆಸ್ಟ್ ನಡೆಸಲಾಗಿದೆ. ವಿವಿಧೆಡೆ ಕೊರೊನಾ ಸೋಂಕು ಹರಡುವಿಕೆಯಲ್ಲಿ ಶಾಪಿಂಗ್ ಮಾಲ್‍ಗಳು ಪ್ರಮುಖ ಸ್ಥಳವಾಗಿ ಗುರುತಿಸಿಕೊಂಡಿರುವುದರಿಂದ ಮೈಸೂರಲ್ಲಿ ಇದೀಗ ಮಾಲ್ ಗಳಲ್ಲಿನ ಸಿಬ್ಬಂದಿಗಳಿಗೆ ಹಾಗೂ ಖರೀದಿಗಾಗಿ ಬರುವ ಸಾರ್ವ ಜನಿಕರಿಗೆ ಕೋವಿಡ್ ಟೆಸ್ಟ್ ಮಾಡಲಾಗುತ್ತಿದೆ. ಮೈಸೂರಲ್ಲಿ 22 ಸ್ಥಳಗಳಲ್ಲಿ ಕೋವಿಡ್ ಟೆಸ್ಟ್ ನಡೆಸಲಾಗುತ್ತಿದೆ. ಇದೀಗ ವಾರಾಂತ್ಯ ರಜೆ ದಿನದಂದು ಮಾಲ್‍ಗಳು ಟೆಸ್ಟ್ ಕೇಂದ್ರವಾಗಲಿದೆ.