ಕೋವಿಡ್ 3ನೇ ಅಲೆ ಆತಂಕ; ಶಾಲಾ-ಕಾಲೇಜು ಆರಂಭಿಸುವ ಸರ್ಕಾರದ ನಿರ್ಧಾರ ಖಂಡಿಸಿ ಪ್ರತಿಭಟನೆ
ಮೈಸೂರು

ಕೋವಿಡ್ 3ನೇ ಅಲೆ ಆತಂಕ; ಶಾಲಾ-ಕಾಲೇಜು ಆರಂಭಿಸುವ ಸರ್ಕಾರದ ನಿರ್ಧಾರ ಖಂಡಿಸಿ ಪ್ರತಿಭಟನೆ

August 19, 2021

ಮೈಸೂರು,ಆ.18(ಪಿಎಂ)-ಕೋವಿಡ್ ಮೂರನೇ ಅಲೆಯ ಆತಂಕದ ಹಿನ್ನೆಲೆಯಲ್ಲಿ ಮುಂದಿನ ವಾರ ದಿಂದ ರಾಜ್ಯದಲ್ಲಿ ಶಾಲಾ-ಕಾಲೇಜು ಆರಂಭಿಸುವ ನಿರ್ಧಾರವನ್ನು ಸರ್ಕಾರ ಕೈಬಿಡಬೇಕೆಂದು ಒತ್ತಾಯಿಸಿ ಕರ್ನಾಟಕ ಸೇನಾ ಪಡೆ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.
ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಜಮಾ ಯಿಸಿದ ಪ್ರತಿಭಟನಾಕಾರರು, ಈಗಾಗಲೇ ನೆರೆ ರಾಜ್ಯಗಳಲ್ಲಿ ಕೋವಿಡ್ 3ನೇ ಅಲೆ ರುದ್ರತಾಂಡವ ವಾಡುತ್ತಿದೆ. ಮಹಾರಾಷ್ಟ್ರ, ಕೇರಳ, ತಮಿಳುನಾಡಿ ನಲ್ಲಿ ಕೋವಿಡ್ ಅಟ್ಟಹಾಸ ಮುಂದುವರೆದಿದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಶಾಲಾ-ಕಾಲೇಜುಗಳನ್ನು ತರಾತುರಿಯಲ್ಲಿ ಆರಂಭಿಸಲು ಹೊರಟಿರುವುದು ಅತ್ಯಂತ ಅಪಾಯಕಾರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಮತ್ತೆ ಲಾಕ್‍ಡೌನ್ ಅಗತ್ಯವಿದೆ ಎಂದು ಹೇಳುವ ಜೊತೆಗೆ ಗಡಿ ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ಸರ್ಕಾರ, ವಾರಾಂತ್ಯ ಕಫ್ರ್ಯೂ ಅನ್ನೂ ವಿಧಿಸಿದೆ. ಈ ನಡುವೆ ಶಾಲಾ-ಕಾಲೇಜು ಆರಂಭಿಸಲು ಹೊರಟಿರುವುದು ಸರ್ಕಾರದ ಹುಚ್ಚು ತನದ ಪರಮಾವಧಿ. ಖಾಸಗಿ ಶಾಲಾ-ಕಾಲೇಜು ಗಳು ಶುಲ್ಕ ಭರಿಸಿಕೊಳ್ಳಲು ಹಾಕಿರುವ ಒತ್ತಡ ಮತ್ತು ಲಾಬಿಗೆ ಸರ್ಕಾರ ಮಣಿದಿರುವ ಶಂಕೆಯಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

ಒಂದು ವೇಳೆ ಶಾಲಾ-ಕಾಲೇಜು ಆರಂಭಿಸು ವುದೇ ಆದಲ್ಲಿ ಮೊದಲು ವಿದ್ಯಾರ್ಥಿಗಳಿಗೆ ಅವರ ಶಾಲಾ-ಕಾಲೇಜಿನಲ್ಲೇ ಕೋವಿಡ್ ಲಸಿಕೆ ನೀಡ ಬೇಕು ಎಂದು ಒತ್ತಾಯಿಸಿದರು. ಸಂಘಟನೆ ಜಿಲ್ಲಾ ಧ್ಯಕ್ಷ ತೇಜೇಶ್ ಲೋಕೇಶ್‍ಗೌಡ, ಮುಖಂಡರಾದ ಶಾಂತರಾಜೇಅರಸ್, ಮೊಗಣ್ಣಾಚಾರ್, ವಿಜ ಯೇಂದ್ರ, ಕುಮಾರ್‍ಗೌಡ, ರಾಜೇಶ್, ಯೋಗೀಶ್, ವಿನೋದ್, ದರ್ಶನ್‍ಗೌಡ ಮತ್ತಿತರರು ಪ್ರತಿ ಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »