ವರಮಹಾಲಕ್ಷ್ಮಿ ಹಬ್ಬ: ಮೈಸೂರು ಮಾರುಕಟ್ಟೆಯಲ್ಲಿ ಜನ ಜಾತ್ರೆ
ಮೈಸೂರು

ವರಮಹಾಲಕ್ಷ್ಮಿ ಹಬ್ಬ: ಮೈಸೂರು ಮಾರುಕಟ್ಟೆಯಲ್ಲಿ ಜನ ಜಾತ್ರೆ

August 19, 2021

ಮೈಸೂರು,ಆ.18(ಆರ್‍ಕೆ)- ವರಮಹಾ ಲಕ್ಷ್ಮಿ ಹಬ್ಬಕ್ಕೆ ಕೊರೊನಾ ಸೋಂಕನ್ನೂ ಲೆಕ್ಕಿಸದೇ ಜನರು ಪೂಜಾ ಸಾಮಗ್ರಿ ಖರೀದಿಸಲು ಮುಗಿ ಬೀಳುತ್ತಿದ್ದಾರೆ.

ಹಬ್ಬಕ್ಕೆ ಭರದ ಸಿದ್ಧತೆ ಮಾಡಿಕೊಳ್ಳು ತ್ತಿರುವ ಜನರು, ಹೂ, ಹಣ್ಣು, ಪೂಜಾ ಸಾಮಗ್ರಿ ಖರೀದಿಸಲು ಇಂದು ಮೈಸೂರಿನ ದೇವರಾಜ ಮಾರುಕಟ್ಟೆ, ಚಿಕ್ಕಗಡಿಯಾರ, ಶಿವರಾಂಪೇಟೆಯಲ್ಲಿ ಭಾರೀ ಪ್ರಮಾಣದ ಜನಜಂಗುಳಿ. ಜೀವವಿದ್ದರೆ ಜೀವನ ಎಂಬ ಎಚ್ಚರಿಕೆ ಸಂದೇಶವನ್ನು ಧಿಕ್ಕರಿಸಿ, ಹಬ್ಬ ಆಚರಣೆಗೆ ಸಾಮಗ್ರಿ ಖರೀದಿಗೆ ನಿಂತಿ ದ್ದರು. ಇಂತಹ ಜನರಿಗೆ ಪರಿಸ್ಥಿತಿಯ ಅರಿವೇ ಇರಲಿಲ್ಲ. ಪೊಲೀಸರೂ ಸಹ ಇತ್ತ ಸುಳಿ ಯಲಿಲ್ಲ. ದೇವರಾಜ ಮಾರುಕಟ್ಟೆ ಹಾಗೂ ಆಜುಬಾಜು, ಬಡಾವಣೆಗಳ ಪ್ರಮುಖ ವಾಣಿಜ್ಯ ಕೇಂದ್ರಗಳಲ್ಲಿ ಕಾಕಡ, ಮಲ್ಲಿಗೆ, ಮಲ್ಲೆ, ಕನಕಾಂಬರ, ಸೇವಂತಿಗೆ ಹೂವಿಗೆ ಬೇಡಿಕೆ ಹೆಚ್ಚಾಗಿರುವುದರಿಂದ ಸಹಜ ವಾಗಿಯೇ ಬೆಲೆಯೂ ಹೆಚ್ಚಾಗಿದೆ.

ನಿನ್ನೆ-ಮೊನ್ನೆವರೆಗೆ 30ರಿಂದ 50 ರೂ. ಇದ್ದ ವಿವಿಧ ಹೂಗಳ ಬೆಲೆ ಇಂದು ಮಾರಿಗೆ 50ರಿಂದ 80 ರೂ.ಗಳಿಗೆ ಮಾರಾಟವಾಗು ತ್ತಿದೆ. ದೇವರಾಜ ಮಾರುಕಟ್ಟೆ, ಚಿಕ್ಕಗಡಿ ಯಾರ ಸರ್ಕಲ್‍ನಲ್ಲಿ ಕಾಲಿಡಲು ಜಾಗ ವಿಲ್ಲದಂತೆ ಜನಜಂಗುಳಿ ಏರ್ಪಟ್ಟಿದ್ದು, ಅದೇ ರೀತಿ ಶಿವರಾಂಪೇಟೆ, ಸಂತೆಪೇಟೆ, ಡಿ.ದೇವರಾಜ ಅರಸು ರಸ್ತೆಗಳ ಬ್ಯಾಂಗಲ್ ಸ್ಟೋರ್ಸ್, ಸೀರೆ ಅಂಗಡಿಗಳಲ್ಲೂ ಮಹಿಳೆ ಯರು, ಯುವತಿಯರು ಮುಗಿಬೀಳು ತ್ತಿದ್ದುದು ಕಂಡುಬಂತು. ಮಕ್ಕಾಜಿಚೌಕ, ಗಾಂಧಿ ಸ್ಕ್ವೇರ್, ಜೆ.ಕೆ. ಮೈದಾನ ಬಳಿ ಧನ್ವಂ ತರಿ ರಸ್ತೆಯ ಫುಟ್‍ಪಾತ್ ಮೇಲೆ, ವಿವಿ. ಮೊಹಲ್ಲಾದ ಮಾತೃ ಮಂಡಳಿ ಸರ್ಕಲ್, ಹೆಬ್ಬಾಳಿನ ಸೂರ್ಯ ಬೇಕರಿ ಸರ್ಕಲ್, ಸಂಕ್ರಾಂತಿ ಸರ್ಕಲ್, ಅಗ್ರಹಾರ ಸರ್ಕಲ್ ಗಳಲ್ಲೂ ಹೂ ಹಾಗೂ ಪೂಜಾ ಸಾಮಗ್ರಿ ಖರೀದಿ ಬಲು ಜೋರಾಗಿದೆ. ಶುಕ್ರವಾರ ವರಮಹಾಲಕ್ಷ್ಮಿ ಪೂಜೆ ಮಾಡಲಿದ್ದು, ಪ್ರತೀ ಮನೆಗಳಲ್ಲೂ ಲಕ್ಷ್ಮೀ ಪ್ರತಿಷ್ಠಾಪಿಸಿ ಸೀರೆ, ಆಭರಣಗಳೊಂದಿಗೆ ಅಲಂಕರಿಸುವ ಮಹಿಳೆಯರು, ವಿಶೇಷ ಪೂಜೆ ಸಲ್ಲಿಸಲಿ ದ್ದಾರೆ. ಅದಕ್ಕಾಗಿ ಸೀರೆ, ಬಳೆ, ಆಭರಣ, ಹಣ್ಣು-ಹಂಪಲು, ಹೂ, ಬಾಳೆಕಂದು ಇತ್ಯಾದಿ ಸಾಮಗ್ರಿ ಖರೀದಿಗೆ ಮುಂದಾಗಿದ್ದಾರೆ.

Translate »