ಚೀನಾದಲ್ಲಿ ಮತ್ತೆ ಕೋವಿಡ್-೧೯ ಆರ್ಭಟ; ವಿಮಾನ, ಶಾಲೆ ಬಂದ್
ಮೈಸೂರು

ಚೀನಾದಲ್ಲಿ ಮತ್ತೆ ಕೋವಿಡ್-೧೯ ಆರ್ಭಟ; ವಿಮಾನ, ಶಾಲೆ ಬಂದ್

October 22, 2021

ಬಿಜೀAಗ್, ಅ.೨೧- ಚೀನಾದಲ್ಲಿ ಮತ್ತೆ ಕೊರೊನಾ ಆರ್ಭಟ ಆರಂಭವಾಗಿದ್ದು, ಗುರುವಾರ ನೂರಾರು ವಿಮಾನಗಳ ಹಾರಾಟ ರದ್ದುಗೊಳಿಸಲಾಗಿದ್ದು, ಶಾಲೆಗಳನ್ನು ಬಂದ್ ಮಾಡಲಾಗಿದೆ ಎಂದು ಎಎಫ್‌ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

ಪ್ರವಾಸಿಗರ ಗುಂಪಿನೊAದಿಗೆ ಬಂದಿದ್ದ ವೃದ್ಧ ದಂಪತಿಗಳಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಬೀಜಿಂಗ್ ನಲ್ಲಿ ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಪ್ರವಾಸಿಗರ ಸಾಮೂಹಿಕ ಪರೀಕ್ಷೆಗಳನ್ನು ಹೆಚ್ಚಿಸಲಾಗಿದೆ. ಬೇರೆ ದೇಶಗಳಿಗೆ ಹೋಗುವ ವಿಮಾನಗಳನ್ನು ತಕ್ಷಣದಿಂದ ರದ್ದುಗೊಳಿಸಲಾಗಿದೆ. ಶಾಲೆಗಳನ್ನು ಮುಚ್ಚಲಾಗಿದ್ದು, ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗುವುದನ್ನು ತಡೆಯಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಎಎಫ್‌ಪಿ ವರದಿಯಲ್ಲಿ ಹೇಳಿದೆ.
ಪ್ರವಾಸಿಗರ ಜೊತೆ ಬಂದಿದ್ದ ವೃದ್ಧ ದಂಪತಿ ಹಲವಾರು ಪ್ರದೇಶಗಳಲ್ಲಿ ಸಂಚಾರ ನಡೆಸಿದ್ದಾರೆ. ಆದ್ದರಿಂದ ಸಾಮೂಹಿಕ ಪರೀಕ್ಷೆ ಮೂಲಕ ಕೋವಿಡ್ ಹಬ್ಬುವಿಕೆ ಕುರಿತು ನಿಗಾ ವಹಿಸಲು ತೀರ್ಮಾನಿಸಲಾಗಿದೆ. ಕ್ಸಿಯಾನ್ ಮತ್ತು ಲಾನ್ಸೂದಲ್ಲಿ ಶೇ.೬೦ರಷ್ಟು ವಿಮಾನಗಳ ಹಾರಾಟವನ್ನು ಗುರುವಾರ ರದ್ದುಗೊಳಿಸಲಾಗಿದೆ. ಎರೆನ್ ಹೋಟ್ ನಗರದ ಒಳಗೆ ಮತ್ತು ಹೊರಗೆ ಜನರ ಪ್ರಯಾಣ ವನ್ನು ನಿರ್ಬಂಧಿಸಲಾಗಿದೆ. ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರಬನ್ನಿ ಎಂದು ಜನರಿಗೆ ಕರೆ ನೀಡಲಾಗಿದೆ. ಪ್ರವಾಸಿ ತಾಣ, ಮನೋರಂಜನಾ ಸ್ಥಳಗಳಿಗೆ ಜನರ ಭೇಟಿ ನಿಷೇಧಿಸಲಾಗಿದೆ. ಕೆಲವು ಪ್ರದೇಶಗಳಲ್ಲಿ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ಸತತ ೫ನೇ ದಿನ ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆ ಯಲ್ಲಿ ಚೀನಾದ ಉತ್ತರ ಮತ್ತು ವಾಯುವ್ಯ ಪ್ರದೇಶಗಳಲ್ಲಿ ಕಠಿಣ ಕ್ರಮಗಳನ್ನು ಜಾರಿಗೊಳಿಸಲಾಗಿದೆ. ವೃದ್ಧ ದಂಪತಿ ಕ್ಸಿಯಾನ್, ಗನ್ಸು ಪ್ರಾಂತ್ಯಕ್ಕೆ ಸಂಚಾರ ನಡೆಸುವ ಮೊದಲು ಶಾಂಘೈನಲ್ಲಿ ದ್ದರು. ಬೀಜಿಂಗ್ ಸೇರಿದಂತೆ ಕನಿಷ್ಠ ೫ ಪ್ರಾಂತ್ಯಗಳು ಮತ್ತು ಪ್ರದೇಶಗಳಲ್ಲಿ ಹೊಸದಾಗಿ ಹತ್ತಾರು ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ಸೋಂಕು ತಗುಲಿದ ವ್ಯಕ್ತಿಗಳ ನಿಕಟ ಸಂಪರ್ಕ ದಲ್ಲಿದ್ದವರನ್ನು ಪತ್ತೆ ಹಚ್ಚಲಾಗುತ್ತಿದೆ. ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚಾದ ಹಿನ್ನಲೆಯಲ್ಲಿ ಸ್ಥಳೀಯ ಸರ್ಕಾರಗಳು ಸಾಮೂಹಿಕ ಪರೀಕ್ಷೆಗಳನ್ನು ನಡೆಸುವಂತೆ ಸೂಚನೆ ಕೊಡಲಾಗಿದೆ. ಬೇರೆ ಪ್ರದೇಶಗಳಿಗೆ ಸೋಂಕು ಹರಡುವಿಕೆ ತಡೆಯಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ.

Translate »