ಆರೋಪಿಗಳ ಪ್ರಶ್ನಿಸುವ ಸಂಬಂಧ ವಿಚಾರಣಾ ನ್ಯಾಯಾಲಯಗಳಿಗೆ ಹೈಕೋರ್ಟ್ ಮಾರ್ಗಸೂಚಿ
ಮೈಸೂರು

ಆರೋಪಿಗಳ ಪ್ರಶ್ನಿಸುವ ಸಂಬಂಧ ವಿಚಾರಣಾ ನ್ಯಾಯಾಲಯಗಳಿಗೆ ಹೈಕೋರ್ಟ್ ಮಾರ್ಗಸೂಚಿ

October 22, 2021

ಬೆಂಗಳೂರು, ಅ.೨೧- ಆರೋಪಿಗಳನ್ನು ಪ್ರಶ್ನಿಸುವ ಸಂಬಂಧ ವಿಚಾರಣಾ ನ್ಯಾಯಾಲಯಗಳಿಗೆ ಹೈಕೋರ್ಟ್ ಮಾರ್ಗಸೂಚಿ ಹೊರಡಿಸಿದೆ. ವಿಚಾರಣಾ ನ್ಯಾಯಾಲಯ ಆರೋಪಿ ನೀಡಿದ ಉತ್ತರ ಮತ್ತು ವಿವರಣೆಯನ್ನು ದಾಖಲಿಸಿಕೊಳ್ಳಬೇಕೇ ಹೊರತು, ಸುಳ್ಳು ಅಥವಾ ಸತ್ಯ ಎಂದು ಏಕ ಪದದಲ್ಲಿ ಉತ್ತರಿಸುವಂತೆ ಸೂಚಿಸಬಾರದು. ಸಾಮಾನ್ಯ ಭಾಷೆಯಲ್ಲಿ ಚಿಕ್ಕ ವಾಕ್ಯಗಳ ಪ್ರಶ್ನೆ ಸಿದ್ಧಪಡಿಸಿ, ಲಿಖಿತ ಉತ್ತರ ದಾಖಲಿಸಲು ಆರೋಪಿಗೆ ಸೂಚಿಸ ಬಹುದು. ದೋಷಾರೋಪ ಸಾಕ್ಷ÷್ಯಗಳನ್ನು ಮಾತ್ರ ಆಯ್ಕೆ ಮಾಡಿ, ಸಾಮೂಹಿಕ ಸಾಕ್ಷö್ಯ ನುಡಿಯುವ ಸಾಧ್ಯತೆ ಇರುವಾಗ ಒಂದೇ ಪ್ರಶ್ನೆ ಕೇಳಬಹುದು.

ಪ್ರತಿ ಆರೋಪಿಯನ್ನು ವೈಯಕ್ತಿಕವಾಗಿ ಪ್ರಶ್ನೆ ಮಾಡಿ, ಅವರ ಉತ್ತರವನ್ನು ಪ್ರತ್ಯೇಕವಾಗಿ ದಾಖಲಿಸಬೇಕು. ದೋಷಾರೋಪಣೆ ಇರುವ ಸಂದರ್ಭದಲ್ಲಿ ಪಟ್ಟಿ ಮಾಡಲಾಗಿರುವ ದಾಖಲೆ ಮತ್ತು ವಸ್ತುಗಳ ಕುರಿತು ಆರೋಪಿಗಳ ಗಮನ ಸೆಳೆಯ ಬೇಕು. ಔಪಚಾರಿಕ ಸಾಕ್ಷಿಗಳು ನೀಡಿದ ಸಾಕ್ಷ÷್ಯದ ಬಗ್ಗೆ ಆರೋಪಿಯನ್ನು ಪ್ರಶ್ನಿಸುವ ಅಗತ್ಯವಿಲ್ಲ. ಹೀಗೆ ಹಲವು ಅಂಶಗಳಿರುವ ಮಾರ್ಗಸೂಚಿ ಬಿಡುಗಡೆ ಮಾಡಿರುವ ನ್ಯಾಯಾಲಯ, ಮಾದರಿ ಪ್ರಶ್ನಾವಳಿ ಸಿದ್ಧಪಡಿಸಿ ಮಾರ್ಗದರ್ಶನಕ್ಕಾಗಿ ಎಲ್ಲಾ ವಿಚಾರಣಾ ನ್ಯಾಯಾಲಯಗಳಿಗೆ ರವಾನಿಸುವಂತೆ ರಾಜ್ಯ ನ್ಯಾಯಾಂಗ ಅಕಾಡೆಮಿಗೆ ನಿರ್ದೇಶನ ನೀಡಿದೆ. ಮೈಸೂರಿನ ತಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿ ರುವ ಕೊಲೆ ಪ್ರಕರಣವೊಂದರ ವಿಚಾರಣೆ ವೇಳೆ ಇಬ್ಬರು ಆರೋಪಿಗಳಿಗೆ ಸೂಕ್ತ ರೀತಿಯಲ್ಲಿ ಪ್ರಶ್ನಿಸದಿರುವುದು ಹಾಗೂ ವಿವರಣೆ ನೀಡಲು ಅವರಿಗೆ ಅವಕಾಶ ನೀಡದಿರುವ ಸಂಗತಿಯನ್ನು ಮನಗಂಡ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಅವರ ನ್ಯಾಯಪೀಠ, ಪ್ರಕರಣದ ಆರೋಪಿಗಳಾದ ಮೀನಾಕ್ಷಿ ಮತ್ತು ತ್ರಿನೇತ್ರ ವಿರುದ್ಧ ಹೇಳಿಕೆಗಳನ್ನು ಹೊಸದಾಗಿ ದಾಖಲಿಸಬೇಕು ಎಂದು ಆದೇಶಿಸುವುದರ ಜೊತೆಗೆ ಆರೋಪಿಗಳ ವಿಚಾರಣಾ ವಿಧಾನದ ಸುಧಾರಣೆಗೆ ಕ್ರಮ ವಹಿಸಿದೆ.

Translate »