ಕೊರೊನಾ ಲಸಿಕೆ ಕಲ್ಪಿಸುವುದರಲ್ಲಿ ಇತಿಹಾಸ ಸೃಷ್ಟಿಸಿದ ಪ್ರಧಾನಿ ಮೋದಿ
ಮೈಸೂರು

ಕೊರೊನಾ ಲಸಿಕೆ ಕಲ್ಪಿಸುವುದರಲ್ಲಿ ಇತಿಹಾಸ ಸೃಷ್ಟಿಸಿದ ಪ್ರಧಾನಿ ಮೋದಿ

October 22, 2021

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಶ್ಲಾಘನೆ

ಶೀಘ್ರಗತಿಯಲ್ಲಿ ಕೊರೊನಾಗೆ ಔಷಧಿ ಸಂಶೋಧನೆಯ ದಾಖಲೆ

 ಮೈಸೂರಲ್ಲಿ ಕೊರೊನಾ ವಾರಿಯರ್ಸ್ಗೆ ಅಭಿನಂದನೆ ಸಲ್ಲಿಸಿದ ಕಟೀಲು

ಮೈಸೂರು, ಅ.೨೧(ಎಂಕೆ)- ವಿರೋಧಿಗಳ ಟೀಕೆ-ಟಿಪ್ಪಣ ಗಳನ್ನು ಮೀರಿ ಪ್ರಧಾನಿ ನರೇಂದ್ರ ಮೋದಿಯವರು ಜಗತ್ತಿನಲ್ಲೇ ಹೆಚ್ಚು, ಅದರಲ್ಲೂ ಉಚಿತವಾಗಿ ಕೊರೊನಾ ಲಸಿಕೆ ಒದಗಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.

ಮೈಸೂರಿನ ನಜರ್‌ಬಾದ್‌ನಲ್ಲಿರುವ ಪ್ರಾಥ ಮಿಕ ಆರೋಗ್ಯ ಕೇಂದ್ರದ ಎದುರಿನ ಉದ್ಯಾನ ವನದಲ್ಲಿ ‘ನೂರು ಕೋಟಿ ಲಸಿಕಾ ಅಭಿಯಾನ’ದ ಅಂಗವಾಗಿ ಆಯೋಜಿಸಿದ್ದ ‘ಕೊರೊನಾ ವಾರಿಯರ್ಸ್ಗಳಿಗೆ ಅಭಿನಂದನಾ ಸಮಾರಂಭ’ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಇಲ್ಲಿಯವರೆಗೆ ಕೊರೊನಾ ರೋಗವೊಂದೇ ಬಂದಿಲ್ಲ. ಪೋಲಿಯೋ, ಪ್ಲೇಗ್, ಮಲೇರಿಯಾ ಇನ್ನಿತರೆ ಸಾಂಕ್ರಾಮಿಕ ಕಾಯಿಲೆಗಳು ಬಂದಿವೆ. ಆದರೆ ಇಷ್ಟೊಂದು ತ್ವರಿತವಾಗಿ ಲಸಿಕೆ ಕಂಡು ಹಿಡಿದು ವಿತರಣೆ ಕಾರ್ಯ ಹಿಂದೆAದೂ ಆಗಿರಲಿಲ್ಲ. ೬೦ ವರ್ಷ ದೇಶದಲ್ಲಿ ಆಳ್ವಿಕೆ ನಡೆಸಿ ದವರು ವೈದ್ಯಕೀಯ ಕ್ಷೇತ್ರಕ್ಕೆ ತೋರಿದ ನಿರ್ಲಕ್ಷö್ಯತೆ ಯಿಂದಲೇ ಸಾಕಷ್ಟು ಸಾವು-ನೋವು ಎದುರಿ ಸಬೇಕಾಯಿತು ಎಂದು ಕಿಡಿಕಾರಿದರು.
ಕೊರೊನಾ ಭಾರತವನ್ನಷ್ಟೆ ಅಲ್ಲ ಪ್ರಪಂಚವನ್ನೇ ಕಾಡಿದೆ. ಸಂಕಷ್ಟದ ಪರಿಸ್ಥಿತಿಗೆ ಅನುಗುಣವಾಗಿ ಪ್ರಧಾನಿ ಮೋದಿಯವರು ವಿಜ್ಞಾನಿಗಳಿಗೆ ಪ್ರೇರಣೆ ನೀಡಿ, ಧೈರ್ಯ ತುಂಬುವ ಕೆಲಸ ಮಾಡಿದ್ದರಿಂದ ದೇಶೀಯವಾಗಿ ಲಸಿಕೆ ಕಂಡುಹಿಡಿಯಲು ಸಾಧ್ಯ ವಾಯಿತು. ಲಸಿಕಾ ಅಭಿಯಾನದ ಕಾರ್ಯಕ್ಕೆ ಕೊರೊನಾ ವಾರಿಯರ್ಸ್ಗಳಾದ ವೈದ್ಯರು, ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತೆ ಯರು, ಪೊಲೀಸ್ ಸಿಬ್ಬಂದಿ, ಪೌರಕಾರ್ಮಿಕರು ದುಡಿದಿದ್ದು ಅವರಿಗೆ ಅಭಿನಂದನೆ ಸಲ್ಲಬೇಕು. ಸೋಂಕು ಮತ್ತಷ್ಟು ಹೆಚ್ಚಾಗದಂತೆ ತಡೆಯಲು ಕೊರೊನಾ ವಾರಿಯರ್ಸ್ಗಳು ಎಚ್ಚರಿಕೆ ಕ್ರಮ ಗಳನ್ನು ವಹಿಸಿದ್ದಾರೆ. ಇಂದು ದೇಶದಲ್ಲಿ ೧೦೦ ಕೋಟಿ ಲಸಿಕಾ ಅಭಿಯಾನ ಪೂರ್ಣಗೊಳಿಸ ಲಾಗಿದೆ. ೭೦ ಕೋಟಿ ಜನರಿಗೆ ಮೊದಲ ಡೋಸ್ ಹಾಗೂ ೩೦ ಕೋಟಿ ಜನರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ವಿರೋಧ ಪಕ್ಷಗಳ ಟೀಕೆಗೆ ಲಸಿಕೆ ನೀಡುವ ಮೂಲಕ ಉತ್ತರ ನೀಡಲಾಗಿದ್ದು, ಲಸಿಕೆ ಅಭಿಯಾನದಲ್ಲಿ ಭಾರತ ಇತಿಹಾಸ ಸೃಷ್ಟಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಆರಂಭದಲ್ಲಿ ಮಾಸ್ಕ್, ಸ್ಯಾನಿಟೈಸರ್, ಪಿಪಿಇ ಕಿಟ್ ಇಲ್ಲವೆಂದು ಭಾರೀ ಚರ್ಚೆಯಾಗಿತ್ತು. ಆದರೆ ಕೇವಲ ಎರಡೇ ತಿಂಗಳಲ್ಲಿ ಮಾಸ್ಕ್, ಸ್ಯಾನಿಟೈಸರ್ ಉತ್ಪಾದನೆ ಹೆಚ್ಚಿಸಿ ಬೇರೆ ಬೇರೆ ದೇಶಗಳಿಗೂ ರಫ್ತು ಮಾಡಿದ್ದೇವೆ. ಪ್ರತಿ ಜಿಲ್ಲೆಯಲ್ಲೂ ಆಕ್ಸಿಜನ್ ಪ್ಲ್ಲಾಂಟ್ ನಿರ್ಮಾಣ ಮಾಡಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ ಗಳನ್ನು ಮೇಲ್ದರ್ಜೆಗೆ ಏರಿಸಲು ತಿರ್ಮಾನಿಸ ಲಾಗಿದೆ. ರಾಜ್ಯದಲ್ಲಿ ಸುಮಾರು ೪ ಕೋಟಿ ಜನರಿಗೆ ಕೊರೊನಾ ಲಸಿಕೆ ನೀಡಲಾ ಗಿದೆ. ಇದಕ್ಕೆ ಕಾರಣರಾದ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು.

ಕಾರ್ಯಕರ್ತರ ಸೇವೆ: ಸಚಿವ ನಾರಾಯಣ ಗೌಡ ಮಾತನಾಡಿ, ಕೊರೊನಾ ಲಾಕ್‌ಡೌನ್ ವೇಳೆ ಬಿಜೆಪಿ ಕಾರ್ಯಕರ್ತರ ಸೇವೆ ಶ್ಲಾಘ ನೀಯ. ಮನೆ ಮನೆಗೆ ಭೇಟಿ ನೀಡಿ, ಜನರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಿದ್ದಾರೆ. ಕೊರೊನಾ ಸಂಕಷ್ಟದ ಪರಿಸ್ಥಿತಿಯಲ್ಲಿ ಬಿಜೆಪಿ ಮಾಡಿದ ಸೇವೆಯನ್ನು ಇನ್ನಾವ ಪಕ್ಷವೂ ಮಾಡಿಲ್ಲ. ಅಂದಿನ ಮುಖ್ಯಮಂತ್ರಿಯವರಿAದ ಹಿಡಿದು ಬಿಜೆಪಿ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತ ಶ್ರಮಿ ಸಿದ್ದಾರೆ ಎಂದು ಪ್ರಶಂಸಿಸಿದರು.

ಇAಡಿಯಾದಲ್ಲೂ-ಮAಡ್ಯದಲ್ಲೂ ಬಿಜೆಪಿ: ಬಿಜೆಪಿಗೆ ಬಂದು ನಾನು ಬಹಳ ಖುಷಿಯಾಗಿ ದ್ದೇನೆ. ಮಂಡ್ಯ ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಬಿಜೆಪಿ ಗೆಲ್ಲಲ್ಲಾ ಎನ್ನುತ್ತಿದ್ದರು. ಆದರೆ ಪಕ್ಷದ ಹಾಗೂ ಜನರ ಬೆಂಬಲದಿAದ ಶಾಸಕ ನಾಗಿದ್ದೇನೆ. ಮಂಡ್ಯ ಜಿಲ್ಲೆಯಲ್ಲಿ ಮುಂದೆ ೪-೫ ಸೀಟುಗಳನ್ನು ಪಡೆಯುತ್ತೇವೆ. ಇಂಡಿಯಾ ದಲ್ಲೂ-ಮಂಡ್ಯದಲ್ಲೂ ಬಿಜೆಪಿ ಇದೆ ಎಂದು ಹೇಳಿದರು. ಶಾಸಕ ಎಲ್.ನಾಗೇಂದ್ರ ಮಾತನಾಡಿ, ಚಾಮರಾಜ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು ೪೨ ಸಾವಿರ ಮನೆಗಳಿಗೆ ದಿನಸಿ ಕಿಟ್ ವಿತರಣೆ ಮಾಡುವ ಮೂಲಕ ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಜನರ ಕಷ್ಟಕ್ಕೆ ಸ್ಪಂದಿಸಲಾಗಿದೆ. ಇದಕ್ಕೆ ಕಾರ್ಯಕರ್ತರ ಶ್ರಮವೇ ಕಾರಣ. ಮೈಸೂರಿನಲ್ಲಿ ಕೊರೊನಾ ಸೋಂಕು ಹರಡ ದಂತೆ ಕಡಿವಾಣ ಹಾಕುವುದರ ಜೊತೆಗೆ ಕೊರೊನಾ ಲಸಿಕೆ ನೀಡುವುದರಲ್ಲೂ ಮುಂದಿದ್ದೇವೆ ಎಂದರು.

ಇದೇ ವೇಳೆ ೨೦ ಮಂದಿ ವೈದ್ಯರಿಗೆ ಸನ್ಮಾನಿ ಸಲಾಯಿತು. ಮಾಜಿ ಸಂಸದ ಸಿ.ಹೆಚ್.ವಿಜಯ ಶಂಕರ್, ಮೈಲ್ಯಾಕ್ ಅಧ್ಯಕ್ಷ ಫಣ Ãಶ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ರಾಜೇಂದ್ರ, ನಗರಾಧ್ಯಕ್ಷ ಶ್ರೀವತ್ಸ, ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್, ಮಾಜಿ ಮೇಯರ್ ಸಂದೇಶ್‌ಸ್ವಾಮಿ, ಪಾಲಿಕೆ ಸದಸ್ಯರಾದ ಮಾವಿ ರಾಮಪ್ರಸಾದ್, ಎಂ.ಸತೀಶ್, ರವೀಂದ್ರ, ಪ್ರಮೀಳಾ ಭರತ್, ಶಿವಕುಮಾರ್, ಸುಬ್ಬಯ್ಯ, ಮುಖಂಡರಾದ ಸೋಮಶೇಖರ ರಾಜು, ಚರಣ್ ಮತ್ತಿತರರು ಉಪಸ್ಥಿತರಿದ್ದರು.

ದೇಶದ ಸ್ವಾತಂತ್ರö್ಯ ನಂತರ ಲಾಲ್‌ಬಹ ದ್ದೂರ್ ಶಾಸ್ತಿç ಅವರ ಬಳಿಕ ಪ್ರಧಾನಿ ಮೋದಿಯವರಿಗೆ ದೇಶದ ಜನತೆ ಜಾತಿ, ಪಂಥ ಮೀರಿ ಸಂಪೂರ್ಣ ಬೆಂಬಲ ನೀಡಿದ್ದಾರೆ. ಮೋದಿ ಯೊಂದಿಗೆ ಎಲ್ಲರೂ ಒಗ್ಗಟ್ಟಾಗಿ ಕೈಜೋಡಿಸಿದ್ದಾರೆ. ಕೇಂದ್ರ ಸರ್ಕಾರ ಕೊರೊನಾ ಲಸಿಕೆಗಾಗಿ ೩೪,೫೧೫ ಕೋಟಿ ರೂ. ಖರ್ಚು ಮಾಡಿದೆ. ಪಿಎಂ ಕೇರ್ಸ್ ಫಂಡ್‌ನಿAದ ೧,೩೯೨ ಕೋಟಿ ರೂ. ವಿನಿಯೋಗಿ ಸಲಾಗಿದೆ. ಕೊರೊನಾ ಸೋಂಕು ತಡೆಗಟ್ಟುವಲ್ಲಿ ರಾಜ್ಯ ಸರ್ಕಾರ ಯಶಸ್ವಿಯಾಗಿದೆ.
-ನಳಿನ್‌ಕುಮಾರ್ ಕಟೀಲು, ಬಿಜೆಪಿ ರಾಜ್ಯಾಧ್ಯಕ್ಷ

ಬಿಜೆಪಿಯಲ್ಲಿರುವ ಟ್ರೆöÊನಿಂಗ್ ಬೇರೆ ಯಾವ ಪಕ್ಷದಲ್ಲೂ ಇಲ್ಲ. ನಾನು ಈ ಹಿಂದೆ ಎರಡು ಪಕ್ಷದಲ್ಲಿ ಇದ್ದೆ. ಆದರೆ ಅಲ್ಲಿ ಬೇರೆ ಬೇರೆ ತರಹದ ಆಕ್ಟಿವಿಟೀಸ್‌ಗಳು ನಡೆಯು ತ್ತಿದ್ದವು. ಬಿಜೆಪಿಯಲ್ಲಿ ಶಿಸ್ತು ಎಂಬುದಿದೆ.
– ನಾರಾಯಣಗೌಡ, ಸಚಿವ

Translate »