ಮೈಸೂರಲ್ಲಿ ಮಳೆ ಅವಾಂತರ; ೫೦ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು ಧರೆಗುರುಳಿದ ಮರಗಳು, ವಿದ್ಯುತ್ ಕಂಬಗಳು, ತಪ್ಪಿದ ಅನಾಹುತ
ಮೈಸೂರು

ಮೈಸೂರಲ್ಲಿ ಮಳೆ ಅವಾಂತರ; ೫೦ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು ಧರೆಗುರುಳಿದ ಮರಗಳು, ವಿದ್ಯುತ್ ಕಂಬಗಳು, ತಪ್ಪಿದ ಅನಾಹುತ

October 22, 2021

ಬಾಣಂತಿ, ಮಗು ರಕ್ಷಣೆ

ಕೆರೆಯಂತಾದ ಖಾಲಿ ನಿವೇಶನ

ಮಳೆ ಹಾನಿಗೆ ಕ್ರಮಕ್ಕೆ ದೆಹಲಿಯಿಂದಲೇ ಶಾಸಕ ಎಸ್.ಎ.ರಾಮದಾಸ್ ಸೂಚನೆ

ತಾಲೂಕುವಾರು ಮಳೆಯ ಪ್ರಮಾಣ
ಮೈಸೂರು – ೯೭ ಮಿ.ಮೀ
ಎಚ್.ಡಿ.ಕೋಟೆ – ೭೭.೬ ಮಿ.ಮೀ.
ಸರಗೂರು – ೩೭.೨ ಮಿ.ಮೀ.
ಹುಣಸೂರು – ೨೮.೫ ಮಿ.ಮೀ.
ಕೆ.ಆರ್.ನಗರ – ೭೨.೧ ಮಿ.ಮೀ.
ತಿ.ನರಸೀಪುರ – ೨೩.೫ ಮಿ.ಮೀ.
ಪಿರಿಯಾಪಟ್ಟಣ – ೨೪ ಮಿ.ಮೀ.
ನಂಜನಗೂಡು – ೨೩.೫ ಮಿ.ಮೀ.

ಮೈಸೂರು, ಅ.೨೧(ಆರ್‌ಕೆಬಿ)- ಮೈಸೂರಿನಲ್ಲಿ ಬುಧವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಹಲವು ಮರಗಳು ಉರುಳಿದ್ದು, ಕೆಲವು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಜೊತೆಗೆ ತಗ್ಗು ಪ್ರದೇಶಗಳಲ್ಲಿದ್ದ ೫೦ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ.

ಬುಧವಾರ ಸಂಜೆ ಆರಂಭವಾದ ಮಳೆ ಇಡೀ ರಾತ್ರಿ ಬಿಟ್ಟು ಬಿಟ್ಟು ಧೋ ಎಂದು ಸುರಿಯಿತು. ಗುಡುಗು, ಮಿಂಚಿನ ಮಳೆಯ ರಭಸಕ್ಕೆ ಮಹಾರಾಜ ಕಾಲೇಜು ಮೈದಾನದ ಬಳಿ ಹಾಗೂ ಜಿಲ್ಲಾಧಿಕಾರಿ ಕಚೇರಿ ಬಳಿ ಎರಡು ದೊಡ್ಡ ಮರಗಳು ಉರುಳಿ ಬಿದ್ದಿವೆ. ನಗರಪಾಲಿಕೆಯ ಅಭಯ ತಂಡ ತಕ್ಷಣ ಸ್ಥಳಕ್ಕೆ ತೆರಳಿ ಮರಗಳನ್ನು ತೆರವುಗೊಳಿಸಿದರು. ಸಿಎಫ್‌ಟಿಆರ್‌ಐ ಕಾಲೋನಿ ಯಲ್ಲಿ ವಿದ್ಯುತ್ ಕಂಬವೊAದು ಮುರಿದಿದೆ. ಹಲವೆಡೆ ವಿದ್ಯುತ್ ತಂತಿ ಕಡಿದು ಬಿದ್ದಿತ್ತು. ಕಡಕೊಳ ಮತ್ತು ಸಿದ್ದಲಿಂಗಪುರದ ಬಳಿ ಸುಮಾರು ಆರು ವಿದ್ಯುತ್ ಕಂಬಗಳು ಉರುಳಿ ಬಿದ್ದಿದ್ದವು. ತಕ್ಷಣ ವಿದ್ಯುತ್ ಸಂಪರ್ಕ ಕಡಿತಗೊಂಡ ಹಿನ್ನೆಲೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಲಿಲ್ಲ.
ವಿದ್ಯಾರಣ್ಯಪುರಂ ೩೨ನೇ ಕ್ರಾಸ್‌ನ ತಗ್ಗು ಪ್ರದೇಶದಲ್ಲಿದ್ದ ಮನೆಯೊಂದಕ್ಕೆ ನೀರು ನುಗ್ಗಿದೆ. ತಕ್ಷಣ ಮನೆಯಲ್ಲಿದ್ದ ಬಾಣಂತಿ ಮತ್ತು ಮಗುವನ್ನು ಬೇರೆಡೆಗೆ ಸ್ಥಳಾಂತರಿಸಲಾಯಿತು. ಶ್ರೀರಾಂಪುರ ೨ನೇ ಹಂತದಲ್ಲಿ ರಾಜಕಾಲುವೆ ಉಕ್ಕಿ ಹರಿದು ಪಕ್ಕದಲ್ಲಿದ್ದ ಖಾಲಿ ನಿವೇಶನ ಕೆರೆಯಂತೆ ಮಾರ್ಪಾಡಾಗಿತ್ತು. ಅರವಿಂದ ನಗರದ ಎಸ್‌ಬಿಎಂ ಕಾಲೋನಿಯಲ್ಲಿ ೩ ಮನೆ ಗಳಿಗೆ ನೀರು ನುಗ್ಗಿತ್ತು. ಕೆ.ಆರ್.ಕ್ಷೇತ್ರದಲ್ಲಿ ಮಳೆ ಯಿಂದಾದ ಹಾನಿ ಬಗ್ಗೆ ದೆಹಲಿ ಪ್ರವಾಸದಲ್ಲಿರುವ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಅವರಿಂದ ಮಾಹಿತಿ ತಿಳಿದು, ನಗರಪಾಲಿಕೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡರು.

ಚಾಮರಾಜ ಕ್ಷೇತ್ರ ವ್ಯಾಪ್ತಿಯ ಕುಂಬಾರ ಕೊಪ್ಪಲು, ಪಡುವಾರಹಳ್ಳಿ, ಬೃಂದಾವನ ಬಡಾ ವಣೆ, ಲೋಕನಾಯಕನಗರ, ಹೆಬ್ಬಾಳು ಇನ್ನಿತರ ಪ್ರದೇಶಗಳಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಶಾಸಕ ಎಲ್.ನಾಗೇಂದ್ರ ಭೇಟಿ ನೀಡಿ ಪರಿಶೀಲಿಸಿದರು. ರಾಜಕಾಲುವೆ ಕುಸಿದ ಸ್ಥಳಗಳನ್ನು ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿ, ಕೈಗೊಳ್ಳಬೇಕಾದ ಕ್ರಮಗಳು ಕುರಿತು ಸೂಚನೆ ನೀಡಿದರು.

Translate »