ಜಗತ್ತಿಗೇ ಭಾರತದಿಂದ ಕೋವಿಡ್ ಲಸಿಕೆ ಮೋದಿ ಸರ್ಕಾರಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಧನ್ಯವಾದ
ಮೈಸೂರು

ಜಗತ್ತಿಗೇ ಭಾರತದಿಂದ ಕೋವಿಡ್ ಲಸಿಕೆ ಮೋದಿ ಸರ್ಕಾರಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಧನ್ಯವಾದ

January 25, 2021

ವಾಷಿಂಗ್ಟನ್,ಜ.24-ಜಗತ್ತಿನ ನಾನಾ ದೇಶಗಳಿಗೆ ಕೋವಿಡ್ ಲಸಿಕೆ ಒದಗಿಸು ತ್ತಿರುವ ಭಾರತ ದೇಶಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಧನ್ಯವಾದ ಅರ್ಪಿಸಿದೆ. ಇಡೀ ಜಗತ್ತನ್ನು ಕಾಡುತ್ತಿರುವ ಮಾರಕ ಕೊರೊನಾ ಸೋಂಕಿನ ವಿರುದ್ಧ ಹೋರಾಟ ದಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ ಭಾರತ, ಕೋವಿಡ್ ಲಸಿಕೆ ಹಂಚಿಕೆ ಯಲ್ಲಿ `ನಿರಂತರ ಬೆಂಬಲ’ ನೀಡಿದ್ದಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆ ಧನ್ಯವಾದ ತಿಳಿಸಿದೆ.

ಈ ವಿಚಾರವಾಗಿ ಶನಿವಾರ ಟ್ವೀಟ್ ಮಾಡಿರುವ Wಊಔ ಮುಖ್ಯಸ್ಥ ಟೆಡ್ರೋಸ್ ಅಧನೊಮ್ ಗೆಬ್ರೆಯೆಸಸ್, `ಕೋವಿಡ್ ವಿರುದ್ಧದ ಜಾಗತಿಕ ಹೋರಾ ಟಕ್ಕೆ ನಿರಂತರ ಬೆಂಬಲ ನೀಡಿದ್ದಕ್ಕಾಗಿ ಭಾರತ ಮತ್ತು ನರೇಂದ್ರ ಮೋದಿ ಅವ ರಿಗೆ ಧನ್ಯವಾದಗಳು. ನಾವು ಒಗ್ಗಟ್ಟಾಗಿ ಹೋರಾಟ ನಡೆಸಿದರೆ ಮಾತ್ರ ಈ ವೈರಸ್‍ನಿಂದ ಜೀವ ಮತ್ತು ಜೀವನ ಗಳನ್ನು ಉಳಿಸಬಹುದು’ ಎಂದು ಹೇಳಿ ದ್ದಾರೆ. ಇದೇ ವಿಚಾರವಾಗಿ ಬ್ರೆಜಿಲ್ ಅಧ್ಯಕ್ಷ ಜೇರ್ ಬೊಲ್ಸೊನಾರೊ ಅವರೂ ಕೂಡ ಮೋದಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ್ದು, ಕೊರೊನಾ ವಿರುದ್ಧ ಹೋರಾಟದಲ್ಲಿ ಭಾರತದ ಪಾತ್ರ ಮಹತ್ವದ್ದು. ಇತರೆ ರಾಷ್ಟ್ರಗಳಿಗೆ ಲಸಿಕೆ ಪೂರೈಸುವುದರಲ್ಲೂ ಭಾರತ ಪ್ರಮುಖ ಪಾತ್ರವಹಿಸಿದೆ ಎಂದು ಹೇಳಿದ್ದಾರೆ. ಕೊರೊನಾದಿಂದ ಗರಿಷ್ಠ ಪೀಡನೆಗೊಳಗಾಗಿರುವ ಬ್ರೆಜಿಲ್‍ಗೆ ಭಾರತ 20 ಲಕ್ಷ ಡೋಸ್ ಲಸಿಕೆಗಳನ್ನು ಕಳುಹಿಸಿಕೊಟ್ಟಿದೆ. ಇದಕ್ಕೆ ಬ್ರೆಜಿಲ್ ಅಧ್ಯಕ್ಷರು ಕೃತಜ್ಞತೆ ಸಲ್ಲಿಸಿರುವ ರೀತಿ ವಿಶೇಷವಾಗಿದ್ದು, ರಾಮಾಯಣದಲ್ಲಿ ಯುದ್ಧ ನಡೆಯುತ್ತಿದ್ದಾಗ, ಹನುಮಂತ ಔಷಧ ಪರ್ವತಕ್ಕೆ ತೆರಳಿ, ಅಲ್ಲಿಂದ ಸಂಜೀವಿನಿ ಪರ್ವತವನ್ನು ಹೊತ್ತು ಲಂಕೆಗೆ ತೆರಳಿ ಲಕ್ಷ್ಮಣನ ಜೀವ ಉಳಿಸುತ್ತಾನೆ. ಆ ಚಿತ್ರವನ್ನು ಟ್ವೀಟ್ ಮಾಡಿರುವ ಬೊಲ್ಸೊನಾರೊ, “ಧನ್ಯವಾದ ಭಾರತ’ ಎಂದಿದ್ದಾರೆ. ಭಾರತದಂತಹ ಸ್ನೇಹಿತ ನಮ್ಮ ಜೊತೆಗಿರುವುದು ಬಹಳ ಗೌರವದ ವಿಷಯ ಎಂದು ಹೇಳಿದ್ದಾರೆ. ಬ್ರೆಜಿಲ್ ಮಾತ್ರವಲ್ಲ, ಭಾರತ ತನ್ನ ನೆರೆಯ ರಾಷ್ಟ್ರಗಳಾದ ನೇಪಾಳ, ಭೂತಾನ್, ಬಾಂಗ್ಲಾ, ಮಾಲ್ಡೀವ್ಸ್‍ಗಳಿಗೆ ಉಚಿತವಾಗಿ 32 ಲಕ್ಷ ಡೋಸ್ ಲಸಿಕೆ ಕಳುಹಿಸಿಕೊಟ್ಟಿದೆ. ದ.ಆಫ್ರಿಕಾ, ಮೊರಾಕ್ಕೊಗಳಿಗೂ ಕೋವಿಶೀಲ್ಡ್ ಅನ್ನು ರವಾನಿಸಿದೆ. ದಕ್ಷಿಣ ಆಫ್ರಿಕಾವೂ ಸಹ ಭಾರತದ ಲಸಿಕೆ ಶೀಘ್ರದಲ್ಲಿಯೇ ಪಡೆಯಲಿದೆ.

 

 

Translate »