ನೆಲ್ಯಹುದಿಕೇರಿ ಗ್ರಾಪಂ ಮುಂದೆ ಸಿಪಿಐ(ಎಂ) ಪ್ರತಿಭಟನೆ
ಕೊಡಗು

ನೆಲ್ಯಹುದಿಕೇರಿ ಗ್ರಾಪಂ ಮುಂದೆ ಸಿಪಿಐ(ಎಂ) ಪ್ರತಿಭಟನೆ

July 8, 2021

ಸಿದ್ದಾಪುರ, ಜು.7- ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ಮುಂದೆ ಸಿಪಿಐ(ಎಂ) ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಪಂಚಾಯಿತಿ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪಕ್ಷದ ಪ್ರಮುಖ ಪಿ.ಆರ್.ಭರತ್ ಮಾತ ನಾಡಿ, ಕಳೆದ ಹಲವು ವರ್ಷಗಳಿಂದ ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸ ಬೇಕಾದ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ಗಮನ ಹರಿಸದೆ ಅಸಹಾಯಕತೆ ತೋರು ತ್ತಿರುವುದು ಸರಿಯಾದ ನಡೆಯಲ್ಲ.
ಹತ್ತು ವರ್ಷಗಳಿಂದ ನೆಲ್ಯಹುದಿಕೇರಿ ಪಟ್ಟಣದಲ್ಲಿ ಸಾರ್ವಜನಿಕ ಶೌಚಾಲಯವಿ ಲ್ಲದೆ, ವಾಹನ ಸವಾರರು, ಸಾರ್ವಜನಿಕರು, ಶಾಲಾ ವಿದ್ಯಾರ್ಥಿಗಳು ಪರದಾಡುವಂತಾಗಿದೆ.

ನೆಲ್ಯಹುದಿಕೇರಿ ಸುತ್ತಮುತ್ತಲ ಗ್ರಾಮ ಗಳ ರಸ್ತೆಗಳು ಗುಂಡಿಗಳಾಗಿ ಹದಗೆಟ್ಟು ಸಂಚರಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಸೂಕ್ತ ಚರಂಡಿ ವ್ಯವಸ್ಥೆ ಯಿಲ್ಲದೆ ರಸ್ತೆಯಲ್ಲೇ ನೀರು ಹರಿಯುತ್ತಿದ್ದು ಮಳೆಗಾಲ ಸಂದರ್ಭದಲ್ಲಿ ಸಾರ್ವ ಜನಿಕರಿಗೆ ನಡೆದಾಡಲೂ ಸಾಧ್ಯವಾಗ ದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಗ್ರಾಮದ ಸಮೀಪವೇ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು ಹಲವರ ಮೇಲೆ ದಾಳಿ ಮಾಡಿದ್ದಲ್ಲದೆ ಸಣ್ಣ ರೈತರು ಬೆಳೆದ ಕೃಷಿ ಫಸಲುಗಳನ್ನು ತುಳಿದು ತಿಂದು ನಾಶ ಮಾಡುವ ಮೂಲಕ ಕಾರ್ಮಿಕರು, ಸಾರ್ವಜನಿಕರು, ಬೆಳೆಗಾರರು ನಡೆದಾ ಡಲೂ ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿ ಭಯದ ವಾತಾವರ ಣದ ನಡುವೆ ಜೀವನ ನಡೆಸುವಂತಾ ಗಿದೆ. ಕಾರ್ಮಿಕ ಕುಟುಂಬಗಳೇ ಅಧಿಕ ವಾಗಿದ್ದು, ಬಿಪಿಲ್ ಕಾರ್ಡ್ ಅವಲಂಬಿತ ರಾಗಿದ್ದಾರೆ. ಈಗಾಗಲೇ ಬಹುತೇಕ ಕಾರ್ಮಿಕ ಕುಟುಂಬಗಳನ್ನು ಬಿಪಿಎಲ್ ಪಟ್ಟಿಯಿಂದ ರದ್ದುಗೊಳಿಸಲಾಗಿದೆ. ಏಕಾಏಕಿ ಬಿಪಿಎಲ್ ಕಾರ್ಡ್ ರದ್ದುಗೊಳಿಸಿರುವುದು ಸರಿಯಾದ ನಡೆಯಲ್ಲ. ಕೂಡಲೇ ಗ್ರಾಮ ಪಂಚಾ ಯಿತಿ ಆಡಳಿತ ಮಂಡಳಿ ಸಭೆ ಕರೆದು ನಿರ್ಣಯ ಕೈಗೊಳ್ಳುವ ಮೂಲಕ ಸರ್ಕಾ ರಕ್ಕೆ ಒತ್ತಾಯ ಹೇರಬೇಕೆಂದು ಹೇಳಿದ ಅವರು, ಗ್ರಾಮದ ಮನೆಗಳ ಸಮೀಪವೇ ಅಪಾಯಕಾರಿಯಲ್ಲಿರುವ ಮರಗಳನ್ನು ತೆರವುಗೊಳಿಸುವುದರೊಂದಿಗೆ ಮಳೆಗಾಲ ಪ್ರಾರಂಭವಾಗಲಿದ್ದು, ಪ್ರವಾಹದ ಭೀತಿ ಎದು ರಾಗುವ ಸಾಧ್ಯತೆ ಇದೆ. ನದಿ ದಡ ಸೇರಿ ದಂತೆ ಬಹುತೇಕ ಬಡ ಕುಟುಂಬಗಳ ಮನೆಗಳು ಕಳೆದ ಬಾರಿ ಪ್ರವಾಹ ಹಾಗೂ ಗಾಳಿ ಮಳೆಯಿಂದ ಮನೆ ಕಳೆದುಕೊಂಡಿ ರುವ ಕುಟುಂಬಗಳಿಗೆ ಕೂಡಲೇ ನಿವೇ ಶನ ಹಾಗೂ ಮನೆ ಕಟ್ಟಿಕೊಡುವ ಮೂಲಕ ಗ್ರಾಮದ ಜನರ ಮೂಲಭೂತ ಸಮಸ್ಯೆ ಗಳ ಬಗ್ಗೆ ಗಂಭೀರವಾಗಿ ಪರಿಗಣಿಸಿ ಬೇಡಿಕೆ ಗಳನ್ನು ಈಡೇರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ನಿರಂತರ ಹೋರಾಟ ಮಾಡ ಬೇಕಾಗುತ್ತದೆ ಎಂದು ಎಚ್ಚರಿಸಿದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿ ಕಾರಿ ಅನಿಲ್ ಕುಮಾರ್ ಹಾಗೂ ಪಂಚಾಯ್ತಿ ಉಪಾಧ್ಯಕ್ಷೆ ದಮಯಂತಿ ಅವರಿಗೆ ಬೇಡಿಕೆಯ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಿಪಿಐಎಂ ಪಕ್ಷದ ಪ್ರಮುಖರಾದ ಎಂ.ಜಿ.ಜೋಸ್, ಮೋಣಪ್ಪ, ಉದಯಕುಮಾರ್, ರವಿ, ಚಂದ್ರ, ಗೀತಾ, ರಾಣಿ, ಬೋಜಿ, ಹಕ್ಕಣಿ, ಅಬೀಬ್ ಸೇರಿದಂತೆ ಮತ್ತಿತರರು ಇದ್ದರು

Translate »