ರೈತರಿಗೆ 20,810 ಕೋಟಿ ರೂ. ಸಾಲ ನೀಡಲು ಗುರಿ
ಕೊಡಗು

ರೈತರಿಗೆ 20,810 ಕೋಟಿ ರೂ. ಸಾಲ ನೀಡಲು ಗುರಿ

July 8, 2021

ಮಡಿಕೇರಿ, ಜು.7- ಕಳೆದ ಸಾಲಿನಲ್ಲಿ ರೈತರಿಗೆ 15,300 ಕೋಟಿ ರೂ. ಗುರಿ ನಿಗದಿಪಡಿಸಲಾಗಿತ್ತು, ರಾಜ್ಯದ 21 ಡಿಸಿಸಿ ಬ್ಯಾಂಕುಗಳು ರೈತರಿಗೆ 16,795 ಕೋಟಿ ರೂ. ಎಲ್ಲಾ ಸಾಲ ನೀಡಿವೆ ಹಾಗೂ ಶೇ.95 ರಷ್ಟು ಸಾಲ ವಸೂಲಾತಿ ಮಾಡಿದೆ. ಈ ಸಾಲಿನಲ್ಲಿ 20,810 ಕೋಟಿ ರೂ. ರೈತರಿಗೆ ಸಾಲ ನೀಡಲು ಗುರಿ ಹೊಂದಲಾಗಿದೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

ಡಿಸಿಸಿ ಬ್ಯಾಂಕ್ ಮತ್ತು ಕೃಷಿ ಪತ್ತಿನ ಸಹ ಕಾರ ಸಂಘಗಳ ಮೂಲಕ ಸಾಲದ ಪ್ರಯೋ ಜನ ಪಡೆಯುತ್ತಿರುವ ಜಿಲ್ಲೆಯ ಫಲಾನು ಭವಿ ರೈತರಿಗೆ ಸಾಂಕೇತಿಕವಾಗಿ ಬುಧವಾರ ನಗರದ ಜಿಪಂ ಸಭಾಂಗಣದಲ್ಲಿ ಸಾಲ ವಿತರಣೆ ಮಾಡಿ ಮಾತನಾಡಿದರು.

ರಾಜ್ಯ ಸರ್ಕಾರದ ವಿವಿಧ ರಿಯಾಯಿತಿ ಬಡ್ಡಿ ದರದ ಸಾಲ ಯೋಜನೆಗಳನ್ನು ಸಹ ಕಾರ ಸಂಸ್ಥೆಗಳ ಮೂಲಕ ಅನುಷ್ಠಾನ ಗೊಳಿಸಿದೆ. ಕೇಂದ್ರ ಸರ್ಕಾರವು ಸಹಕಾರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ಸಹಕಾರ ಸಚಿವರನ್ನು ನೇಮಕ ಮಾಡಿರು ವುದರಿಂದ ಸಹಕಾರ ಕ್ಷೇತ್ರಕ್ಕೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ನೇರವಾಗಿ ಸಹಕಾರ ಸಚಿ ವಾಲಯಕ್ಕೆ ವರದಿ ಸಲ್ಲಿಸಬಹುದಾಗಿದೆ ಎಂದು ಸಚಿವರು ತಿಳಿಸಿದರು.

ಕೊಡಗು ಜಿಲ್ಲೆಯ ಡಿಸಿಸಿ ಬ್ಯಾಂಕ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಜಿಲ್ಲೆಯ ರೈತರಿಗೆ ಸಾಲ ಸೌಲಭ್ಯ ಮತ್ತಿತರ ಸೌಲಭ್ಯಗಳನ್ನು ಒದಗಿಸುವಲ್ಲಿ ಉತ್ತಮ ವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸಚಿವರು ತಿಳಿಸಿದರು.

ಸಹಕಾರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸರ್ಕಾರ ಆದೇಶ ಹೊರಡಿಸಿದಲ್ಲಿ ಆ ಆದೇಶ ದಲ್ಲಿ ರೈತರಿಗೆ ತೊಂದರೆಯಾಗುವ ನಿಟ್ಟಿನಲ್ಲಿ ಚಿಕ್ಕಪುಟ್ಟ ದೋಷಗಳಿದ್ದಲ್ಲಿ ಸ್ಥಳೀಯ ಶಾಸ ಕರು ಸರ್ಕಾರದ ಗಮನಕ್ಕೆ ತಂದು ರೈತರಿಗೆ ಅನ್ಯಾಯವಾಗದಂತೆ ಆದೇಶಗಳನ್ನು ರೂಪಿಸಬೇಕು ಎಂದು ತಿಳಿಸುತ್ತಾ, ಇದು ಅವರ ರೈತರ ಬಗೆಗಿನ ಹಾಗೂ ಸಹಕಾರ ಕ್ಷೇತ್ರದ ಬಗೆಗಿನ ಕಾಳಜಿ ವ್ಯಕ್ತಪಡಿಸುತ್ತದೆ ಎಂದು ಅವರು ತಿಳಿಸಿದರು.

2021ರ ಆಗಸ್ಟ್ 20ಕ್ಕೆ ಜಿಲ್ಲೆಯ ಡಿಸಿಸಿ ಬ್ಯಾಂಕ್ 100 ವರ್ಷ ಪೂರ್ಣಗೊಳಿಸಿ ಶತಮಾನೋತ್ಸವವನ್ನು ಆಚರಿಸಿಕೊಳ್ಳು ತ್ತಿದ್ದು, ಬ್ಯಾಂಕಿನ ಆಡಳಿತ ವರ್ಗ, ಸ್ಥಳೀಯ ಪ್ರತಿನಿಧಿಗಳ ಸಹಕಾರದಿಂದ ಪಾರದರ್ಶಕ ವಾಗಿ ಕಾರ್ಯನಿರ್ವಹಿಸಿಕೊಂಡು ಬರು ತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು. ಡಿಸಿಸಿ ಬ್ಯಾಂಕಿನ ಅಧ್ಯಕ್ಷರಾದ ಕೊಡಂದೇರ ಪಿ.ಗಣಪತಿ ಅವರು ಡಿಸಿಸಿ ಬ್ಯಾಂಕಿಗೆ ಸಂಬಂ ಧಿಸಿದಂತೆ ಮನವಿಯನ್ನು ಸಲ್ಲಿಸಿದರು.
ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಮಾತ ನಾಡಿ, ರೈತರಿಗೆ 3 ಲಕ್ಷ ರೂ. ವರೆಗೆ ಶೂನ್ಯ ಬಡ್ಡಿಯಲ್ಲಿ ಸಾಲ ನೀಡಬೇಕು. ಹಾಗೂ ರೈತರಿಗೆ ಕನಿಷ್ಠ 10 ಲಕ್ಷ ರೂ.ವರೆಗೆ ಸಾಲ ನೀಡಲು ವಿಸ್ತರಣೆ ಮಾಡಬೇಕು. ಜಿಲ್ಲೆಯ ಡಿಸಿಸಿ ಬ್ಯಾಂಕ್‍ಗೆ ಸರ್ಕಾರದಿಂದ ಬರ ಬೇಕಾದ ಬಡ್ಡಿಯನ್ನು ಆದಷ್ಟು ಬೇಗನೆ ಬಿಡುಗಡೆ ಮಾಡಬೇಕಾಗಿ ಸಚಿವರಲ್ಲಿ ಮನವಿ ಮಾಡಿಕೊಂಡರು.

ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಕೊಡಂದೇರ ಪಿ.ಗಣಪತಿ ಮಾತನಾಡಿ, ರೈತರಿಗೆ ಕೆಸಿಸಿ ಕಾರ್ಡು, ಎಟಿಎಂ ಕಾರ್ಡು ಸೌಲಭ್ಯ, ಆರ್‍ಟಿ ಜಿಎಸ್, ನೆಫ್ಟ್, ಮೊಬೈಲ್ ಬ್ಯಾಂಕಿಂಗ್ ಹಾಗೂ ಸಹಕಾರ ಸಂಘಗಳಿಗೆ ಮೈಕ್ರೋ ಎಟಿಎಂ ಸೌಲಭ್ಯ ನೀಡುವುದರೊಂದಿಗೆ ತ್ವರಿತವಾಗಿ ಸಾಲ ನೀಡುವ ಯೋಜನೆ ಯನ್ನು ಸದಾ ಅಳವಡಿಸಿಕೊಂಡು ಬಂದಿರುತ್ತೇವೆ ಎಂದು ಹೇಳಿದರು.

ಬ್ಯಾಂಕಿನ ಶತಮಾನೋತ್ಸವ ಅಂಗ ವಾಗಿ ಸುಸಜ್ಜಿತ ಕೇಂದ್ರ ಕಚೇರಿ ಕಟ್ಟಡದ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾ ಗಿದ್ದು, ರೂ.7 ಕೋಟಿ ವೆಚ್ಚದ ಕಟ್ಟಡ ನಿರ್ಮಿ ಸುವ ಯೋಜನೆಗೆ 2021ರ ಆಗಸ್ಟ್ 20 ರಂದು ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಶುಭ ಸಂದರ್ಭ ವನ್ನು ಸಹಕಾರ ಸಚಿವರುಗಳು, ಜಿಲ್ಲೆಯ ಉಸ್ತುವಾರಿ ಸಚಿವರು, ಕೊಡಗು ಲೋಕಸಭಾ ಕ್ಷೇತ್ರದ ಸದಸ್ಯರು, ಜಿಲ್ಲೆಯ ಶಾಸಕರು, ಪರಿಷತ್ ಸದಸ್ಯರುಗಳು, ಹಿರಿಯ ಸಹಕಾರಿಗಳ ಸಮ್ಮುಖದಲ್ಲಿ ನೆರವೇರಿ ಸಲು ಉದ್ದೇಶಿಸಲಾಗಿದೆ ಎಂದರು.

ರಾಜ್ಯ ಪಶ್ಚಿಮ ಘಟ್ಟ ಕಾರ್ಯಪಡೆಯ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ ಅವರು ಮಾತನಾಡಿ, ರೈತರಿಗೆ ಸಾಲದ ಅಂತರವನ್ನು ಹೆಚ್ಚಳ ಮಾಡಿ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಬೇಕಾಗಿ ಸಚಿವ ರಲ್ಲಿ ಮನವಿ ಮಾಡಿಕೊಂಡರು.

ಡಿಸಿಸಿ ಬ್ಯಾಂಕ್‍ನ ಉಪಾಧ್ಯಕ್ಷರಾದ ಹರೀಶ್, ಸಹಕಾರ ಸಂಘಗಳ ಒಕ್ಕೂಟದ ಅಧÀ್ಯಕ್ಷರಾದ ಮನು ಮುತ್ತಪ್ಪ, ಮೈಸೂರು ವಿಭಾಗದ ಜಂಟಿ ನಿಬಂಧಕರಾದ ಪ್ರಕಾಶ್, ಉಪ ನಿಬಂಧಕರಾದ ಸಲೀಂ, ಡಿಸಿಸಿ ಬ್ಯಾಂಕ್‍ನ ನಿರ್ದೇಶಕರು, ಸಹಕಾರ ಕ್ಷೇತ್ರದ ಪ್ರಮುಖರು, ಇತರರು ಇದ್ದರು.

Translate »