ಮೈಸೂರಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಪಾಲಿಕೆ ಆಶ್ರಯ
ಮೈಸೂರು

ಮೈಸೂರಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಪಾಲಿಕೆ ಆಶ್ರಯ

July 8, 2021

ಮೈಸೂರು,ಜು.7-ಸ್ವಚ್ಛ ನಗರಿ ಖ್ಯಾತಿ ಪಡೆ ದಿರುವ ಮೈಸೂರಲ್ಲಿ ಬೀದಿಬದಿ ವ್ಯಾಪಾರಿ ಗಳಿಗೆ ಅಗತ್ಯ ಮೂಲಭೂತ ಸೌಕರ್ಯದೊಂದಿಗೆ ನಿರ್ದಿಷ್ಟ ಸ್ಥಳಗಳಲ್ಲಿ ಸೂರು ಕಲ್ಪಿಸಲು ಮೈಸೂರು ಮಹಾನಗರ ಪಾಲಿಕೆಯು ಮುಂದಾಗಿದೆ. ಎಲ್ಲೆಂದರಲ್ಲಿ ಫುಟ್‍ಪಾತ್ ಮೇಲೆ, ಸರ್ಕಲ್, ಜಂಕ್ಷನ್, ಪ್ರಮುಖ ರಸ್ತೆಗಳಲ್ಲಿ ವ್ಯಾಪಾರ ಮಾಡುತ್ತಿರುವ ಸಾವಿರಾರು ಮಂದಿ ಮಳೆ, ಬಿಸಿಲು, ಗಾಳಿಯಿಂದ ತೊಂದರೆ ಅನುಭವಿ ಸುತ್ತಿದ್ದರಲ್ಲದೆ ಇಲ್ಲಿಗೆ ಬರುವ ಗ್ರಾಹಕರಿಗೂ ಸಹ ತೊಂದರೆ ಉಂಟಾಗುತ್ತಿದೆ. ಜೊತೆಗೆ ಅಲ್ಲಿ ಉತ್ಪತ್ತಿಯಾಗುವ ತ್ಯಾಜ್ಯದಿಂದ ಸ್ವಚ್ಛತೆಗೆ ಕುಂದುಂಟಾಗಿ ನಿಸರ್ಗ ಮಲೀನವಾಗುತ್ತಿದೆ ಎಂಬುದು ಸಮೀಕ್ಷೆಯಿಂದ ತಿಳಿದು ಬಂದಿತ್ತು.

ಸುರಕ್ಷಿತ ಸೂರು: ಬೀದಿಬದಿ ವ್ಯಾಪಾರಿಗಳಿಗೆ ನಿರ್ದಿಷ್ಟ ಸ್ಥಳ ಗುರುತಿಸಿ ಅಲ್ಲಿ ಶೆಲ್ಟರ್, ಕುಡಿ ಯುವ ನೀರು, ಶೌಚಾಲಯ, ಪ್ಲಾಟ್‍ಫಾರಂ, ವಿದ್ಯುತ್ ಸಂಪರ್ಕ, ಡಸ್ಟಬಿನ್‍ನಂತಹ ಮೂಲಭೂತ ಸೌಕರ್ಯ ಒದಗಿಸಲು ಪಾಲಿಕೆಯು ನಿರ್ಧರಿಸಿದೆ. ಗ್ರಾಹಕರ ವಾಹನ ನಿಲುಗಡೆ, ಕುಳಿತುಕೊಳ್ಳಲು ಆಸನ, ಕೈ ತೊಳೆಯಲು ವಾಷ್ ಬೇಸಿನ್‍ನಂತಹ ಸೌಲಭ್ಯ ಕಲ್ಪಿಸುವ ಮೂಲಕ ಸಾರ್ವಜನಿಕರಿಗೂ ಅನುಕೂಲ ಮಾಡಿಕೊಡು ವುದು ಈ ಯೋಜನೆಯ ಉದ್ದೇಶವಾಗಿದೆ.

7 ಕಡೆ ಮಾರಾಟ ವಲಯ: ರಸ್ತೆ ಬದಿ ವ್ಯಾಪಾರಿಗಳಿಗೆ ಸೂರು ಕಲ್ಪಿಸಲು ಮೈಸೂರು ನಗರದ 7 ಕಡೆಗಳಲ್ಲಿ ವ್ಯಾಪಾರ ವಲಯ ಸ್ಥಾಪಿಸಲು ಸ್ಥಳ ಗುರುತಿಸಲಾಗಿದೆ. ಬಲ್ಲಾಳ ಸರ್ಕಲ್ ನಿಂದ ಹೆಮ್ಮಿಗೆ ಸರ್ಕಲ್ ನಡುವೆ ನ್ಯೂಕಾಂತ ರಾಜ ಅರಸ್ ರಸ್ತೆಯ ಎರಡೂ ಬದಿಗಳಲ್ಲಿ, ಸರಸ್ವ ತಿಪುರಂನ ಈಜುಕೊಳ ರಸ್ತೆ ಮಂಭಾಗ, ವಿಜಯ ನಗರ ಎರಡನೇ ಹಂತದ ವಾಟರ್ ಟ್ಯಾಂಕ್ ಸರ್ಕಲ್ ಬಳಿಯ ಸಬ್‍ರಿಜಿಸ್ಟ್ರಾರ್ ಕಚೇರಿ ಮತ್ತು ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜು ನಡು ವಿನ ಹೈಟೆನ್ಷನ್ ರಸ್ತೆ, ಮೈಸೂರು-ಬೆಂಗಳೂರು ಹೆದ್ದಾ ರಿಯ ಬನ್ನಿಮಂಟಪದ ಸೆಂಟ್ ಜೋಸೆಫ್ ಆಸ್ಪತ್ರೆ ಎದುರು, ಎನ್‍ಆರ್ ಮೊಹಲ್ಲಾದ ಪಿ ಅಂಡ್ ಟಿ ಕ್ವಾರ್ಟರ್ಸ ಬಳಿ, ಬಿಲಾಲೆ ಮಸೀದಿ ರಸ್ತೆ ಹಾಗೂ ತಿ.ನರಸೀಪುರ ರಸ್ತೆಯ ಸಿದ್ದಾರ್ಥ ಬಡಾವಣೆಯ ಸರ್ವೀಸ್ ರಸ್ತೆಯಲ್ಲಿ ವ್ಯಾಪಾರ ವಲಯ ಸ್ಥಾಪಿ ಸಲು ಸ್ಥಳ ಗುರುತಿಸಲಾಗಿದೆ.

1,856 ಮಂದಿಗೆ ಐಡಿಕಾರ್ಡ್: ಪಾಲಿಕೆಯಿಂದ ಮೈಸೂರಲ್ಲಿ ಮೊದಲ ಹಂತದ ಸಮೀಕ್ಷೆ ನಡೆಸ ಲಾಗಿದ್ದು, ಬೀದಿಬದಿ ವ್ಯಾಪಾರಿಗಳೆಂದು ದೃಢಪಟ್ಟಿ ರುವ 1,856 ಮಂದಿಗೆ ಗುರುತಿನ ಚೀಟಿ ಹಾಗೂ ವೆಂಡಿಂಗ್ ಸರ್ಟಿಫಿಕೇಟ್ ನೀಡಲಾಗಿದೆ. ಜುಲೈ ಅಂತ್ಯದಲ್ಲಿ ಎರಡನೇ ಹಂತದ ಸಮೀಕ್ಷೆ ಆರಂಭ ವಾಗಲಿದ್ದು, ಇನ್ನೂ ಸುಮಾರು 2,000 ಭಿದಿಬದಿ ವ್ಯಾಪಾರಿಗಳು ಪತ್ತೆಯಾಗಬಹುದೆಂದು ನಿರೀಕ್ಷಿಸಲಾಗಿದೆ.

ಡೇ-ನಲ್ಮ ಅಭಿಯಾನ: ಕೇಂದ್ರ ಸರ್ಕಾರದ ದೀನ ದಯಾಳ ಅಂತ್ಯೋದಯ- ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ(ಡೇ-ನಲ್ಮೆ) ಯೋಜನೆಯಡಿ ಬೀದಿಬದಿ ವ್ಯಾಪಾರಿಗಳಿಗೆ ಅನುಕೂಲ ಕಲ್ಪಿಸಲು ಮುಂದಾಗಿರುವ ಮೈಸೂರು ಮಹಾನಗರ ಪಾಲಿಕೆಯು, 7 ವ್ಯಾಪಾರ ವಲಯ ಗಳನ್ನು ಗುರುತಿಸಿದ್ದು ಅವುಗಳ ಬಗ್ಗೆ ಸಾರ್ವಜನಿಕ ರಿಂದ ಆಕ್ಷೇಪಣೆಗಳನ್ನೂ ಆಹ್ವಾನಿಸಿದೆ.

ಆಗಸ್ಟ್‍ನಲ್ಲಿ ಕಾಮಗಾರಿ ಆರಂಭ: ಸಾರ್ವ ಜನಿಕರಿಂದ ಬಂದ ಆಕ್ಷೇಪಣೆಗಳನ್ನು ಪರಿಶೀಲಿಸಿ ಎರಡನೇ ಹಂತದ ಸಮೀಕ್ಷೆಯಿಂದ ಗುರುತಿಸಲ್ಪಟ್ಟ ಬೀದಿಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ಮತ್ತು ವೆಂಡಿಂಗ್ ಸರ್ಟಿಪಿಕೇಟ್ ವಿತರಿಸಿದ ನಂತರ, ಟೆಂಡರ್ ಪ್ರಕ್ರಿಯೆ ನಡೆಸಿ ಆಗಸ್ಟ್ ಅಂತ್ಯದಲ್ಲಿ ವ್ಯಾಪಾರ ವಲಯ ನಿರ್ಮಿಸುವ ಕಾಮಗಾರಿ ಆರಂಭವಾಗುವ ಸಾಧ್ಯತೆ ಇದೆ. ಹಣ್ಣು-ತರಕಾರಿ, ಚಾಟ್ಸ್, ಫಾಸ್ಟ್‍ಫುಡ್, ಆಟಿಕೆ ಸಾಮಾನು, ನಿತ್ಯ ಬಳಕೆಯ ಗೃಹಪಯೋಗಿ ಪ್ಲಾಸ್ಟಿಕ್ ಪದಾರ್ಥ, ಸಣ್ಣಪುಟ್ಟ ಬಟ್ಟೆ, ಹೂ ಸೇರಿ ದಂತೆ ಮೈಸೂರಿನಾದ್ಯಂತ ಎಲ್ಲೆಂದರಲ್ಲಿ ಫುಟ್ ಪಾತ್, ಖಾಲಿಜಾಗಗಳಲ್ಲಿ ಮಾರಾಟವಾಗುತ್ತಿರುವ ವಸ್ತುಗಳ ಪಟ್ಟಿ ಸಿದ್ದವಾಗಿದ್ದು, ಅವುಗಳನ್ನು ಮಾತ್ರ ಮಾರಾಟ ವಲಯಗಳಲ್ಲಿಟ್ಟುಕೊಂಡು ವ್ಯಾಪಾರ ಮಾಡಲು ಅವಕಾಶ ಕಲ್ಪಿಸಲಾಗುವುದು.

Translate »