ಮೈಸೂರು, ಸೆ.3(ಪಿಎಂ)- ಲಾಕ್‍ಡೌನ್ ಹಿನ್ನೆಲೆ ಯಲ್ಲಿ ಸಂಕಷ್ಟಕ್ಕೆ ಸಿಲುಕಿದ ಬಡ ಕುಟುಂಬಗಳಿಗೆ ಮುಂದಿನ 6 ತಿಂಗಳವರೆಗೆ ಮಾಸಿಕ 7,500 ರೂ. ಆರ್ಥಿಕ ನೆರವು ನೀಡಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಭಾರತ್ ಕಮ್ಯೂನಿಸ್ಟ್ ಪಕ್ಷ-ಮಾಕ್ರ್ಸ್‍ವಾದಿ/ಸಿಪಿಐ (ಎಂ) ವತಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.
ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ನೆರೆದ ಪ್ರತಿಭಟನಾಕಾರರು, ದೇಶದಲ್ಲಿ ಕೊರೊನಾ ಹಾವಳಿ ತೀವ್ರವಾಗುತ್ತಲೇ ಇದೆ. ಈಗಾಗಲೇ 50 ಸಾವಿರ ಮಂದಿ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಕೆಲವೇ ದಿನ ಗಳಲ್ಲಿ ಕೊರೊನಾ ನಿಯಂತ್ರಿಸುತ್ತೇವೆ ಎಂದು ಹೇಳಿದ್ದ ಪ್ರಧಾನಿ ನರೇಂದ್ರ ಮೋದಿ ವಿಫಲರಾಗಿ ಜನತೆ ಗಮನವನ್ನು ಬೇರೆಡೆ ಸೆಳೆಯಲು ಹೊರ ಟಿದ್ದಾರೆ ಎಂದು ಆರೋಪಿಸಿದರು.
ಕಷ್ಟದಲ್ಲಿರುವ ಕುಟುಂಬಗಳಿಗೆ ಪ್ರತಿವ್ಯಕ್ತಿಗೆ 10 ಕೆಜಿ ಯಂತೆ ಉಚಿತ ಆಹಾರ ಧಾನ್ಯ ವಿತರಿಸಬೇಕು. ಉದ್ಯೋಗ ಖಾತರಿ ಯೋಜನೆಯನ್ನು ವಿಸ್ತರಿಸಿ ಕೂಲಿ ಹೆಚ್ಚಿಸಬೇಕು. ವರ್ಷದಲ್ಲಿ 200 ದಿನಗಳ ಕೆಲಸದ ಖಾತ್ರಿ ನೀಡಬೇಕು. ನಗರ ಉದ್ಯೋಗ ಖಾತರಿ ಕಾಯ್ದೆ ಜಾರಿಗೊಳಿಸಬೇಕು. ನಿರುದ್ಯೋಗಿ ಭತ್ಯೆ ನೀಡಬೇಕು ಎಂದು ಒತ್ತಾಯಿಸಿದರು.
ಅಂತರ ರಾಜ್ಯ ವಲಸೆ ಕೆಲಸಗಾರರ ಕಾಯ್ದೆ ಯನ್ನು ಮತ್ತಷ್ಟು ಬಲಪಡಿಸಬೇಕು. ಜನರ ಆರೋಗ್ಯ ದೃಷ್ಟಿಯಿಂದ ಕೇಂದ್ರೀಯ ವೆಚ್ಚವನ್ನು ಕನಿಷ್ಠ ಜಿಡಿ ಪಿಯ ಶೇ.3ಕ್ಕೆ ಹೆಚ್ಚಿಸಬೇಕು. ಅಗತ್ಯ ವಸ್ತುಗಳ ಕಾಯ್ದೆ ಹಾಗೂ ಎಪಿಎಂಸಿ ಕಾಯ್ದೆಗಳ ತಿದ್ದುಪಡಿ ಹಿಂಪಡೆಯಬೇಕು. ಕಾರ್ಮಿಕಪರ ಕಾನೂನುಗಳ ರದ್ದತಿ ಹಾಗೂ ಕಾಯ್ದೆ ತಿದ್ದುಪಡಿ ಪ್ರಸ್ತಾಪ ಕೈಬಿಡ ಬೇಕು ಎಂದು ಆಗ್ರಹಿಸಿದರು.
ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಕೆ.ಬಸವ ರಾಜ್, ಮುಖಂಡರಾದ ಜಿ.ಜಯರಾಂ, ಜಗನ್ನಾಥ್, ವಿಜಯಕುಮಾರ್, ಜಗದೀಶ್ ಸೂರ್ಯ, ಜಿ. ರಾಜೇಂದ್ರ, ಶಿನಪ್ಪ, ಪುಟ್ಟಮಲ್ಲಯ್ಯ, ಹೆಚ್.ಎಂ.ಬಸವಯ್ಯ, ಶಿವಣ್ಣ, ಸಿದ್ದಯ್ಯ ಮತ್ತಿತರರು ಪ್ರತಿಭಟನೆಯಲ್ಲಿದ್ದರು.