ಡ್ರಗ್ ಮಾಫಿಯಾಗೆ ಚಿತ್ರರಂಗವನ್ನೇ ಏಕೆ ಟಾರ್ಗೆಟ್ ಮಾಡಲಾಗುತ್ತಿದೆ?
ಮೈಸೂರು

ಡ್ರಗ್ ಮಾಫಿಯಾಗೆ ಚಿತ್ರರಂಗವನ್ನೇ ಏಕೆ ಟಾರ್ಗೆಟ್ ಮಾಡಲಾಗುತ್ತಿದೆ?

September 4, 2020

ಮೈಸೂರಲ್ಲಿ ನಟಿ ನಿಧಿ ಸುಬ್ಬಯ್ಯ ಪ್ರತಿಕ್ರಿಯೆ
ಮೈಸೂರು, ಸೆ.3(ಆರ್‍ಕೆ)- ಡ್ರಗ್ ಮಾಫಿಯಾ ಎಲ್ಲಾ ಕ್ಷೇತ್ರ ದಲ್ಲೂ ಇದೆಯಾದರೂ, ಚಿತ್ರರಂಗವನ್ನೇ ಏಕೆ ಟಾರ್ಗೆಟ್ ಮಾಡಲಾಗುತ್ತಿದೆಯೋ ಗೊತ್ತಿಲ್ಲ ಎಂದು ಚಲನಚಿತ್ರ ನಟಿ ನಿಧಿ ಸುಬ್ಬಯ್ಯ ತಿಳಿಸಿದ್ದಾರೆ.

ಮೈಸೂರಿನ ಗೋಕುಲಂ ಮನೆಯಲ್ಲಿ ಖಾಸಗಿ ಸುದ್ದಿವಾಹಿನಿ ಪ್ರತಿನಿಧಿಯೊಬ್ಬರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಅವರು, ಡ್ರಗ್ ಮಾಫಿಯಾದಲ್ಲಿ ಯಾರು ತೊಡಗಿದ್ದಾರೋ ಅವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸಲಿ, ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ ಎಂದು ತಿಳಿಸಿದ್ದಾರೆ.

ಪಾರ್ಟಿಗಳು ಕೇವಲ ಚಿತ್ರರಂಗದಲ್ಲಿ ಮಾತ್ರ ನಡೆಯುವುದಿಲ್ಲ. ಎಲ್ಲಾ ಕ್ಷೇತ್ರಗಳಲ್ಲೂ ಇದು ಪ್ರಾಕ್ಟೀಸ್‍ನಲ್ಲಿದೆ. ಪಾರ್ಟಿಗೆ ಹೋಗುವವ ರೆಲ್ಲಾ ಕೆಟ್ಟವರಲ್ಲ. ಹಾಗೆಯೇ ಪೂಜೆಗೆ ಹೋಗುವವರೆಲ್ಲಾ ಒಳ್ಳೆಯವರೇ ಆಗಿರುವುದಿಲ್ಲ ಎಂದ ಅವರು, ಹಾಗೆಂದ ಮಾತ್ರಕ್ಕೆ ನಾನು ಡ್ರಗ್ಸ್ ತೆಗೆದುಕೊಳ್ಳುವವರ ಪರ ಎಂದಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ. ಸೂರ್ಯ ಮುಳುಗಿದ ಬಳಿಕವೇ ಪಾರ್ಟಿಗಳು ನಡೆಯೋದು. ನಾನೂ ಹಲವು ಪಾರ್ಟಿಗಳನ್ನು ಅಟೆಂಡ್ ಮಾಡಿ ದ್ದೇನೆ. ಆದರೆ ಡ್ರಗ್ಸ್ ತೆಗೆದುಕೊಂಡಿಲ್ಲ. ನಟಿ ರಾಗಿಣಿ ನನ್ನ ಸ್ನೇಹಿತೆ. ಅವರನ್ನು ಸಂಪರ್ಕ ಮಾಡಿಲ್ಲ. ಕಿಂಗ್‍ಪಿನ್ ಅನಿಕಾ ಯಾರೆಂದೂ ನನಗೆ ಗೊತ್ತಿಲ್ಲ. ಆದರೆ ಸತ್ಯಾಸತ್ಯತೆ ತಿಳಿಯುವ ಮೊದಲೇ ಈ ರೀತಿ ಚಿತ್ರರಂಗದವರ ಮೇಲೆ ಗಂಭೀರ ಆರೋಪ ಮಾಡುವುದು ಸರಿಯಲ್ಲ ಎಂದು ನಿಧಿ ಸುಬ್ಬಯ್ಯ ತಿಳಿಸಿದರು.

Translate »