ಪರೀಕ್ಷೆ ವಿಧಾನದ ಸಂಬಂಧ ಸಮಿತಿ ರಚಿಸಿ
ಮೈಸೂರು

ಪರೀಕ್ಷೆ ವಿಧಾನದ ಸಂಬಂಧ ಸಮಿತಿ ರಚಿಸಿ

May 12, 2020

ಮೈಸೂರು, ಮೇ 11(ಪಿಎಂ)- ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆ, ಮೌಲ್ಯಮಾಪನ ಹಾಗೂ ಫಲಿತಾಂಶ ಕುರಿತಂತೆ ಉಂಟಾಗಿರುವ ಸಮಸ್ಯೆ ಗಳಿಗೆ ಪರಿಹಾರ ಕಂಡುಕೊಳ್ಳಲು ತಮ್ಮ ಅಧ್ಯ ಕ್ಷತೆಯಲ್ಲಿ ತಜ್ಞರ ಸಮಿತಿ ರಚಿಸಿ ಸಮಯೋ ಚಿತ ತೀರ್ಮಾನ ಕೈಗೊಳ್ಳುವಂತೆ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ್ ನಾರಾಯಣ್ ಅವರಲ್ಲಿ ದಕ್ಷಿಣ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಮನವಿ ಮಾಡಿದ್ದಾರೆ.

ಪ್ರಸ್ತುತದ ಜಟಿಲ ಪರಿಸ್ಥಿತಿ ಕಾರಣಕ್ಕೆ ಪ್ರಥಮ ಹಾಗೂ ದ್ವಿತೀಯ ಪದವಿ ಪರೀಕ್ಷೆ ಮಾಡದೇ ತೇರ್ಗಡೆ ಮಾಡುವುದೂ ಸೂಕ್ತವಲ್ಲ. ಸರಳವಾದ ಮಾದರಿಯಲ್ಲಿ ಪರೀಕ್ಷೆ ನಡೆಸುವ ಜೊತೆಗೆ ಮೌಲ್ಯ ಮಾಪನ ಹಾಗೂ ಫಲಿತಾಂಶ ನೀಡುವ ವಿಷಯದಲ್ಲಿ ಉಂಟಾಗಿ ರುವ ಗಂಭೀರ ಸಮಸ್ಯೆಗಳನ್ನು ಪರಿಹರಿಸಲು ತಮ್ಮ ಅಧ್ಯಕ್ಷತೆ ಯಲ್ಲಿ ಸಮಿತಿಯೊಂದನ್ನು ರಚಿಸಬೇಕು ಎಂದು ಕೋರಿದ್ದಾರೆ.

ಉನ್ನತ ಶಿಕ್ಷಣ ಇಲಾಖೆಯಡಿ ಬರುವ ಕಾಲೇಜು ಶಿಕ್ಷಣ, ತಾಂತ್ರಿಕ ಶಿಕ್ಷಣ ಹಾಗೂ ವಿಶ್ವವಿದ್ಯಾನಿಲಯಗಳ ಹಿರಿಯ ಕುಲಪತಿಗಳು, ಪರೀಕ್ಷಾಂಗ ಕುಲಸಚಿವರು, ಪ್ರಾಂಶುಪಾಲರು, ನಿರ್ದೇಶಕರು ಹಾಗೂ ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸಿ, ಆಳವಾಗಿ ಚರ್ಚಿಸುವ ಮೂಲಕ ಸಮಯೋಚಿತ ತೀರ್ಮಾನ ಕೈಗೊಳ್ಳಬೇಕು. ಆ ಮೂಲಕ ಖಚಿತವಾದ ಪರೀಕ್ಷಾ ವಿಧಾನ ಕಂಡುಕೊಂಡು ವೇಳಾಪಟ್ಟಿಯನ್ನು ಸೂಕ್ತವಾದ ಸಮಯ ದಲ್ಲಿ ಘೋಷಣೆ ಮಾಡಬೇಕೆಂದು ಮನವಿ ಮಾಡಿದ್ದಾರೆ.

ಉನ್ನತ ಶಿಕ್ಷಣ ಇಲಾಖೆಯಲ್ಲಿ ಶೇ.60ರಷ್ಟು ಮಹಿಳಾ ಉದ್ಯೋಗಿಗಳಿದ್ದಾರೆ. ಬೋಧಕ ಹಾಗೂ ಬೋಧಕೇತರರು ಪ್ರತಿನಿತ್ಯ 50ರಿಂದ 60 ಕಿ.ಮೀ. ದೂರದಿಂದ ರೈಲು ಹಾಗೂ ಬಸ್ಸುಗಳಲ್ಲಿ ಬರುವವರು ಬಹುತೇಕರಿದ್ದಾರೆ. ಹೀಗಾಗಿ ಇವರು ಕಾಲೇಜಿಗೆ ಬರಲು ಸಾಧ್ಯವಾಗದ ಕಾರಣ ಅಂತರ ಜಿಲ್ಲೆಗಳಿಗೆ ರೈಲು ಮತ್ತು ಬಸ್ ಸಂಚಾರ ಪ್ರಾರಂಭಗೊಳ್ಳುವವರೆಗೆ ಸ್ಥಳೀಯ ವಾಗಿ ಲಭ್ಯವಿರುವ ಕಾಲೇಜು ಸಿಬ್ಬಂದಿಯಿಂದ ಕಾಲೇಜಿನಲ್ಲಿ ಕೆಲಸ ನಿರ್ವಹಿಸುವಂತೆ ಎಲ್ಲಾ ಪ್ರಾಂಶುಪಾಲರಿಗೆ ನಿರ್ದೇಶನ ನೀಡಬೇಕೆಂದೂ ಮರಿತಿಬ್ಬೇಗೌಡ ಕೋರಿದ್ದಾರೆ.

Translate »