ಚಾಮರಾಜನಗರ, ಮೇ 11- ಕೊರೊನಾ ಲಾಕ್‍ಡೌನ್‍ನಿಂದ ತೊಂದರೆ ಗೊಳಗಾದ ತಾಲೂಕಿನ ಮುರಟಿಪಾಳ್ಯ, ಬೆಲವತ್ತ ಗ್ರಾಮಗಳ ಗಿರಿಜನರಿಗೆ ಮಾಜಿ ಸಂಸದ ಆರ್.ಧ್ರುವನಾರಾಯಣ್ ದಿನಸಿ ಕಿಟ್ ವಿತರಿಸಿದರು.
ಬೆಲವತ್ತ ಗ್ರಾಮದಲ್ಲಿ ದಿನಸಿ ಕಿಟ್ ವಿತ ರಿಸಿದ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಾರಿಯಾದ ಯೋಜನೆಗಳು ಕೊರೊನಾ ಸಂಕಷ್ಟದಲ್ಲಿ ಉಪಯೋಗಕ್ಕೆ ಬರುತ್ತಿರುವುದು ಸಂತಸ ತಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೆಪಿಸಿಸಿ ಆದೇಶದ ಮೇರೆಗೆ ಕಾಂಗ್ರೆಸ್ ಬಡವರಿಗೆ ಸ್ಪಂದಿಸಿ ಕೆಲಸ ಮಾಡುತ್ತಿದೆ. ಚಾ.ನಗರ ಹಾಗೂ ಹನೂರು ವಿಧಾನ ಸಭಾ ಕ್ಷೇತ್ರದಲ್ಲಿ ಶಾಸಕರಾದ ಸಿ.ಪುಟ್ಟ ರಂಗಶೆಟ್ಟಿ, ನರೇಂದ್ರ ಅವರು ಮೂಲ ನಿವಾಸಿಗಳಾದ ಗಿರಿಜನರಿಗೆ ದಿನಸಿ ಕಿಟ್ ವಿತರಿಸಿದ್ದಾರೆ. ಕೊಳ್ಳೇಗಾಲ ಕ್ಷೇತ್ರದ ಮೂಲ ನಿವಾಸಿಗಳಿಗೆ ಅನ್ಯಾಯವಾಗಬಾರ ದೆಂದು ಕಳೆದ 10 ದಿನಗಳಿಂದೆಯೇ ಬಿಳಿ ಗಿರಿರಂಗನಬೆಟ್ಟದ 10 ಪೋಡಿನ ಗಿರಿ ಜನರಿಗೆ 1 ಸಾವಿರ ದಿನಸಿ ಕಿಟ್ ವಿತರಿಸ ಲಾಗಿದೆ ಎಂದರು. ಈ ಸಂದರ್ಭ ಮಾಜಿ ಶಾಸಕರಾದ ಎ.ಆರ್.ಕೃಷ್ಣಮೂರ್ತಿ, ಎಸ್. ಬಾಲರಾಜ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಮರಿಸ್ವಾಮಿ, ಜಿಪಂ ಸದಸ್ಯ ಕೆ.ಪಿ.ಸದಾ ಶಿವಮೂರ್ತಿ, ತಾಪಂ ಮಾಜಿ ಅಧ್ಯಕ್ಷ ಎಚ್.ವಿ.ಚಂದ್ರು, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಂಕರ್, ಗ್ರಾಪಂ ಅಧ್ಯಕ್ಷೆ ನಿರ್ಮಲ ರಾಮು, ಉಪಾಧ್ಯಕ್ಷ ಕುನ್ನಂಜಯ್ಯ, ಮುಖಂಡರಾದ ಜಯರಾಜ್, ಚಾಮ ದಾಸ್, ಸಿದ್ದೇಗೌಡ, ಮಹದೇವಮ್ಮ, ಕೆಪಿ ಸಿಸಿ ಮಾಧ್ಯಮ ಸಂಚಾಲಕ ಮಹದೇವ ಸ್ವಾಮಿ, ಎಸ್.ಮಣಿಕಂಠ ಇತರರಿದ್ದರು.