ನಾಳೆ ವಿವಿಧೆಡೆ ವಿದ್ಯುತ್ ವ್ಯತ್ಯಯ
ಮೈಸೂರು

ನಾಳೆ ವಿವಿಧೆಡೆ ವಿದ್ಯುತ್ ವ್ಯತ್ಯಯ

May 12, 2020

ಮೈಸೂರು, ಮೇ 11- ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ವತಿಯಿಂದ ಮೇ 13ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ಫೀಡರ್‍ಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಯನ್ನು ಹಮ್ಮಿಕೊಳ್ಳಲಾಗಿದೆ. ಈ ಸಂಬಂಧ ಶಿವಾಜಿ ರಸ್ತೆ, ಎನ್.ಆರ್. ಮೊಹಲ್ಲಾ, ಗಣೇಶ್‍ನಗರ, ನಾರ್ಥ್-ಈಸ್ಟ್ ಆಫ್ ಎನ್.ಆರ್. ಮೊಹಲ್ಲಾ, ಕುರಿಮಂಡಿ, ಕೆಸರೆ 3ನೇ ಹಂತ ಹಾಗೂ ಸುತ್ತುಮುತ್ತ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಎನ್.ಆರ್. ಮೊಹಲ್ಲಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅದೇ ರೀತಿ 66/11 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ 1ನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿರು ವುದರಿಂದ ಟಿ.ನರಸೀಪುರ ಪಟ್ಟಣ, ಕಿರಗಸೂರು, ಟಿ.ದೊಡ್ಡಪುರ, ಹೆಮ್ಮಿಗೆ, ಬೆನಕನ ಹಳ್ಳಿ, ಮುತ್ತಲವಾಡಿ, ಸೋಸಲೆ, ಕೊಳತ್ತೂರು, ಉಕ್ಕಲಗೆರೆ, ದೊಡ್ಡೇಬಾಗಿಲು, ಹೊಸ ಕೋಟೆ, ಗರ್ಗೇಶ್ವರಿ ಗ್ರಾಮ ಪ್ರಾಪ್ತಿ, ದೊಡ್ಡೇಹುಂಡಿ, ಚಂದಳ್ಳಿ, ಶಂಭೂದೇವನಪುರ, ಅಕ್ಕೂರು, ಅಕ್ಕೂರುದೊಡ್ಡಿ, ಮಾರನಪುರ, ಮೂಗೂರು, ಕೊತ್ತೇಗಾಲ, ಆಲಗೂಡು, ವಾಟಾಳು, ಮೂಗೂರುಮೋಳೆ, ಕೊತ್ತವಾಡಿ, ಕೊತ್ತವಾಡಿಮೋಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯವಾಗಲಿದೆ ಎಂದು ನಂಜನಗೂಡು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Translate »