ಸೃಷ್ಟಿ-೨: ಸಮಕಾಲೀನ ಅಮೂರ್ತಗಳು: ಸರಣ ಚಿತ್ರಕಲಾ ಪ್ರದರ್ಶನ
ಮೈಸೂರು

ಸೃಷ್ಟಿ-೨: ಸಮಕಾಲೀನ ಅಮೂರ್ತಗಳು: ಸರಣ ಚಿತ್ರಕಲಾ ಪ್ರದರ್ಶನ

October 22, 2021

ಮೈಸೂರು,ಅ.೨೧-ಒಂದು ವರ್ಷಕ್ಕೂ ಅಧಿಕ ಕಾಲದ ಕೋವಿಡ್ ಸಾಂಕ್ರಾಮಿಕದ ನಂತರ ಭರಣ ಆರ್ಟ್ ಗ್ಯಾಲರಿ ಪ್ರದ ರ್ಶನಗಳ ಆಯೋಜಿಸಲು ಸಜ್ಜಾ ಗಿದೆ. ಇದು ಮೈಸೂರಿನ ಮೊದಲ ಸೇವಾ ಆಧಾರಿತ ಖಾಸಗಿ ಕಲಾ ಗ್ಯಾಲರಿ ಎಂದು ಹೇಳಲಾಗಿದೆ.

೧೯೯೪ರಲ್ಲಿ ಸ್ಥಾಪನೆಯಾದ ಈ ಗ್ಯಾಲರಿಯನ್ನು ದೃಶ್ಯ ಕಲೆಗಳ ಪ್ರದರ್ಶನ ಮತ್ತು ಪ್ರಚಾರಕ್ಕಾಗಿ ಮೀಸಲಿಡಲಾಗಿದೆ. ಇದು ಬಾಡಿಗೆ ರಹಿತ ಕಲಾ ಗ್ಯಾಲರಿ ಯಾಗಿದ್ದು, ಸೌಂದರ್ಯದ ಬೆಳಕು ಮತ್ತು ಪ್ರದರ್ಶನ ಗೋಡೆಗಳ ಜೊತೆಗೆ ಅಟ್ಯಾಚ್ಡ್ ಬಾತ್‌ರೂಂ ಒಳಗೊಂಡ ಅತಿಥಿ ಕೊಠಡಿಯನ್ನು ಕಲಾವಿದರಿಗೆ ಕಲ್ಪಿಸಲಾಗುತ್ತಿದೆ. ಕೊರೊನಾ ಮಹಾಮಾರಿ ನಂತರ ಹಿರಿಯ ಕಲಾವಿದರು ಮತ್ತು ಭರಣ ಆರ್ಟ್ ಗ್ಯಾಲರಿಯ ಸ್ಥಾಪಕರು, ಮುಖ್ಯ ಸಂಚಾಲಕರಾದ ಎನ್.ಬಿ.ಕಾವೇರಪ್ಪನವರ ನೂತನ ಕಲಾ ಕೃತಿಗಳು “ಸೃಷ್ಟಿ-೨, ಸರಣ ಚಿತ್ರಕಲಾ ಪ್ರದರ್ಶನ ಸಮಕಾಲೀನ ಅಮೂರ್ತಗಳು, ಗ್ಯಾಲರಿಯ ೨೭ನೇ ವರ್ಷದ ಸಾಂಕ್ರಾಮಿಕ ಪೂರ್ವ ಕಲಾ ಪ್ರದರ್ಶನವನ್ನು ಮೈಸೂರಿನ ವಿವೇಕಾನಂದ ನಗರದಲ್ಲಿರುವ ಭರಣ ಆರ್ಟ್ ಗ್ಯಾಲರಿಯಲ್ಲಿ ಅ.೨೪ರಿಂದ ೨೮ರವರೆಗೆ ಪ್ರತಿದಿನ ಬೆಳಗ್ಗೆ ೧೧ರಿಂದ ಸಂಜೆ ೭ರವರೆಗೆ ಆಯೋಜಿಸಲಾಗುತ್ತಿದ್ದು, ಪ್ರವೇಶ ಉಚಿತ. ಅರ್ಥ್, ಗ್ರೀನ್ಸ್, ಲೈಫ್ ಅಂಡ್ ಡೆತ್ ಥೀಮ್ ಹೊಂದಿರುವ ವಿಶಿಷ್ಟ ಕಲಾ ಪ್ರದರ್ಶನವನ್ನು ಅ.೨೪ರಂದು ಬೆಳಗ್ಗೆ ೧೧ ಗಂಟೆಗೆ ಬೆಂಗ ಳೂರಿನ ಕ್ರೆöÊಸ್ಟ್ ವಿಶ್ವವಿದ್ಯಾಲಯದ ಮನೋವಿಜ್ಞಾನ ಪ್ರಾಧ್ಯಾ ಪಕ ಹಾಗೂ ಯೂನಿಯನ್ ಆಫ್ ಸೈಕಾಲಜಿಕಲ್ ಸೈನ್ಸ್ ಹಾಗೂ ಸಾಪ್ತಾಹಿಕದ ಪ್ರಧಾನ ಸಂಪಾದಕ ಡಾ.ಪಿ.ಪ್ರಕಾಶ್ ಉದ್ಘಾಟಿಸಲಿದ್ದಾರೆ. ‘ಮೈಸೂರು ಮಿತ್ರ’ ಮತ್ತು ‘ಸ್ಟಾರ್ ಆಫ್ ಮೈಸೂರ್’ ಪತ್ರಿಕೆಗಳ ಸಂಸ್ಥಾಪಕ ಸಂಪಾದಕರು ಹಾಗೂ ಭಾರತೀಯ ವಿದ್ಯಾ ಭವನ (ಬಿವಿಬಿ), ಮೈಸೂರು ಕೇಂದ್ರದ ಅಧ್ಯಕ್ಷರಾದ ಕೆ.ಬಿ.ಗಣಪತಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿ ಷತ್ ಮಾಜಿ ಅಧ್ಯಕ್ಷ ಎಂ.ಚAದ್ರಶೇಖರ್, ಹಿರಿಯ ಕಲಾವಿದ ಎಲ್.ಶಿವಲಿಂಗಪ್ಪ ಭಾಗವಹಿಸುವರು. ಹಿರಿಯ ಕಲಾವಿದ, ಭರಣ ಆರ್ಟ್ ಗ್ಯಾಲರಿ ಪ್ರಧಾನ ಸಂಚಾಲಕ ಎನ್.ಬಿ.ಕಾವೇ ರಪ್ಪ ಉಪಸ್ಥಿತರಿರುವರು. ಹೆಚ್ಚಿನ ಮಾಹಿತಿಗೆ ಎನ್.ಬಿ. ಕಾವೇರಪ್ಪ ಅವರನ್ನು ಮೊ:೯೪೪೮೫-೫೪೨೨೧ ಸಂಪರ್ಕಿಸಿ.

Translate »