ಮೈಸೂರು ವಿವಿ ಪತ್ರಿಕೋದ್ಯಮ ಸ್ನಾತಕೋತ್ತರ ವಿಭಾಗಕ್ಕೆ ಸದ್ಯವೇ ಪ್ರತ್ಯೇಕ ಸುಸಜ್ಜಿತ ಕಟ್ಟಡ
ಮೈಸೂರು

ಮೈಸೂರು ವಿವಿ ಪತ್ರಿಕೋದ್ಯಮ ಸ್ನಾತಕೋತ್ತರ ವಿಭಾಗಕ್ಕೆ ಸದ್ಯವೇ ಪ್ರತ್ಯೇಕ ಸುಸಜ್ಜಿತ ಕಟ್ಟಡ

October 22, 2021

ಮೈಸೂರು,ಅ.೨೧(ಪಿಎಂ)- ಪತ್ರಿಕೋದ್ಯಮ ಶಿಕ್ಷಣದ ಪ್ರವರ್ತಕ ಪ್ರೊ.ನಾಡಿಗ ಕೃಷ್ಣಮೂರ್ತಿ ಅವರ ಜನ್ಮ ಶತಮಾನೋತ್ಸವದ ಈ ವರ್ಷದಲ್ಲೇ ಮೈಸೂರು ವಿವಿ ಯಲ್ಲಿ ಅವರು ಹುಟ್ಟುಹಾಕಿದ ಸ್ನಾತಕೋತ್ತರ ಪತ್ರಿಕೋ ದ್ಯಮ ವಿಭಾಗಕ್ಕೂ ಸುವರ್ಣ ಮಹೋತ್ಸವದ ಸಂಭ್ರಮ ವಿದೆ. ಇಂತಹ ಸವಿನೆನಪಿನಲ್ಲೇ ವಿವಿಯ ಸ್ನಾತಕೋ ತ್ತರ ಪತ್ರಿಕೋದ್ಯಮ ವಿಭಾಗಕ್ಕೆ ಸುಸಜ್ಜಿತ ಪ್ರತ್ಯೇಕ ಕಟ್ಟಡ ಕೊಡುಗೆಯಾಗಿ ದೊರೆಯುತ್ತಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ತಿಳಿಸಿದರು.
ಮೈಸೂರಿನ ಮಾನಸಗಂಗೋತ್ರಿಯ ವಿಜ್ಞಾನ ಭವ ನದ ಸೆಮಿನಾರ್ ಹಾಲ್‌ನಲ್ಲಿ ಮೈಸೂರು ವಿವಿ, ಕರ್ನಾ ಟಕ ಮಾಧ್ಯಮ ಅಕಾಡೆಮಿ ಮತ್ತು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಸಂಯುಕ್ತಾಶ್ರಯದಲ್ಲಿ ಗುರು ವಾರ ಹಮ್ಮಿಕೊಂಡಿದ್ದ ಭಾರತದಲ್ಲಿ ಪತ್ರಿಕೋದ್ಯಮ ಶಿಕ್ಷಣದ ಆದ್ಯ ಪ್ರವರ್ತಕ ಪ್ರೊ.ನಾಡಿಗ ಕೃಷ್ಣಮೂರ್ತಿ ಅವರ ಜನ್ಮ ಶತಮಾನೋತ್ಸವ ಸಮಾರಂಭ ಉದ್ಘಾಟಿಸಿ, ನಾಡಿಗರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

ಈ ಎರಡೂ ಮಹೋತ್ಸವ ಆಚರಿಸುವ ಅವಕಾಶ ದೊರೆತಿದೆ. ಇದರ ನೆನಪಿಗೆ ಮೈಸೂರು ವಿವಿ ಸ್ನಾತ ಕೋತ್ತರ ಪತ್ರಿಕೋದ್ಯಮ ವಿಭಾಗಕ್ಕೆ ಪ್ರತ್ಯೇಕ ಹೊಸ ಕಟ್ಟಡವೊಂದನ್ನು ವಿವಿ ಕೊಡುಗೆಯಾಗಿ ನೀಡುತ್ತಿದೆ. ಮಾನಸಗಂಗೋತ್ರಿ ಆವರಣದಲ್ಲಿ ಕಟ್ಟಡ ಸುಂದರ ವಾಗಿ ತಲೆ ಎತ್ತಿದ್ದು, ಕೆಲವೇ ದಿನಗಳಲ್ಲಿ ಉದ್ಘಾಟನೆಗೊಳ್ಳ ಲಿದೆ. ಆ ಮೂಲಕ ಈ ಎರಡೂ ಮಹೋತ್ಸವದ ಸವಿ ನೆನಪಿನಲ್ಲಿ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗಕ್ಕೆ ಮರು ಹುಟ್ಟು ದೊರೆಯಲಿ ಎಂದು ಆಶಿಸಿದರು.
ಪತ್ರಿಕೋದ್ಯಮವನ್ನು ತರಗತಿಗಳಲ್ಲಿ ಕಲಿಸಲಾಗದು ಎಂಬ ಭಾವನೆ ಹೊಂದಿದ್ದ ಸನ್ನಿವೇಶದಲ್ಲಿ ಶೈಕ್ಷಣ ಕ ಹಿನ್ನೆಲೆ ಮೂಲಕ ಪತ್ರಿಕೋದ್ಯಮ ಕಲಿಕೆ ಸಾಧ್ಯ ಎಂಬು ದನ್ನು ಸಾಬೀತುಪಡಿಸಿದವರು ಪ್ರೊ.ನಾಡಿಗ ಕೃಷ್ಣಮೂರ್ತಿ ಎಂದು ಸ್ಮರಿಸಿದರು. ಅವರು ಅಂದಿನ ಮೈಸೂರು ವಿವಿ ಕುಲಪತಿ ಬಳಿ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ ಆರಂಭಿಸುವ ಪ್ರಸ್ತಾಪ ಇಟ್ಟಾಗ ಅವರು ನಕ್ಕು ನಿರಾಕರಿಸಿ ದ್ದರಂತೆ. ಆ ನಂತರದಲ್ಲಿ ದೇ.ಜವರೇಗೌಡರು ವಿವಿ ಕುಲಪತಿಯಾದಾಗ, ಅವರು ನಾಡಿಗರ ಪ್ರಸ್ತಾಪವನ್ನು ಗಂಭೀರವಾಗಿ ಪರಿಗಣ ಸಿ, ಅಂದಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲ, ಹಣಕಾಸು ಸಚಿವ ರಾಮಕೃಷ್ಣ ಹೆಗಡೆ ಅವರಿಂದ ಪತ್ರಿಕೋದ್ಯಮ ಕೋರ್ಸ್ ಆರಂ ಭಿಸಲು ಸರ್ಕಾರದ ಅನುಮೋದನೆ ಪಡೆದರು. ಪ್ರೊ. ನಾಡಿಗ ಕೃಷ್ಣಮೂರ್ತಿ ಪತ್ರಿಕೋದ್ಯಮ ಶಿಕ್ಷಣದ ಭೀಷ್ಮರೆಂದೇ ದೇಶಾದ್ಯಂತ ಪ್ರಸಿದ್ಧರು. ಅವರು ಅಮೇ ರಿಕದ ಮಿಸ್ಸೌರಿ ವಿವಿಯಲ್ಲಿ ಪತ್ರಿಕೋದ್ಯಮ ಸ್ನಾತ ಕೋತ್ತರ ಪದವಿ ಪಡೆದವರು ಎಂದರು.

`ಭಾರತೀಯ ಪತ್ರಿಕೋದ್ಯಮ’ ಮರು ಮುದ್ರಣ: ನಾಡಿ ಗರ ಪಿಹೆಚ್.ಡಿ ಮಹಾಪ್ರಬಂಧ `ಭಾರತೀಯ ಪತ್ರಿ ಕೋದ್ಯಮ’ ಒಂದು ದಾಖಲೆಯೇ ಸರಿ. ಇಡೀ ದೇಶದ ಪತ್ರಿಕೋದ್ಯಮ ಬೆಳೆದು ಬಂದ ಚರಿತ್ರೆಯನ್ನು ಅವರು ಅದರಲ್ಲಿ ಕಟ್ಟಿಕೊಟ್ಟಿದ್ದಾರೆ. ಮೈಸೂರು ವಿವಿ ಪ್ರಸಾ ರಾಂಗವು ಇಂತಹ ಐತಿಹಾಸಿಕ ಪುಸ್ತಕವನ್ನು ಪ್ರಕಟಿ ಸಿದ ಹೆಮ್ಮೆ ಹೊಂದಿದೆ. ಇಂದಿಗೂ ಈ ಪುಸ್ತಕ ಪತ್ರಿ ಕೋದ್ಯಮ ವಿದ್ಯಾರ್ಥಿಗಳ ಪರಾಮರ್ಶನ ಗ್ರಂಥವಾಗಿದೆ. ಈ ಗ್ರಂಥ ಪರಿಷ್ಕೃರಿಸಿ ಪ್ರಕಟಿಸುವ ಅಗತ್ಯವಿದೆ. ಪತ್ರಿಕೋ ದ್ಯಮ ವಿಭಾಗ ಅಥವಾ ಹಿರಿಯ ಪ್ರಾಧ್ಯಾಪಕರು ಇದಕ್ಕೆ ಮುಂದೆ ಬಂದಲ್ಲಿ ಅದನ್ನು ಮರು ಪ್ರಕಟಿಸುವ ಕೆಲಸ ವನ್ನು ಮೈಸೂರು ವಿವಿ ಮಾಡಲಿದೆ. ವಿವಿ ಸ್ನಾತಕೋ ತ್ತರ ಪತ್ರಿಕೋದ್ಯಮ ವಿಭಾಗ ಇದನ್ನು ಗಂಭೀರವಾಗಿ ತೆಗೆದುಕೊಳ್ಳಲಿ ಎಂದು ತಿಳಿಸಿದರು.

ನಮ್ಮ ಪತ್ರಿಕೋದ್ಯಮ ವಿಭಾಗವು ಜಿಲ್ಲಾ ಪತ್ರಕರ್ತರ ಸಂಘದ ಜೊತೆಗೂಡಿ ಇನ್ನಷ್ಟು ಕಾರ್ಯ ಚಟುವಟಿಕೆ ಹಮ್ಮಿಕೊಳ್ಳುವುದು ವಿದ್ಯಾರ್ಥಿಗಳ ದೃಷ್ಟಿಯಿಂದ ಒಳ್ಳೆ ಯದು ಎಂದು ಸಲಹೆ ನೀಡಿದರು. `ಪ್ರೊ.ನಾಡಿಗರ ನೆನಪು ಮತ್ತು ಮಾಧ್ಯಮ ಶಿಕ್ಷಣದ ಮುಂದಿನ ಮಾರ್ಗ’ ಕುರಿತು ಅಸ್ಸಾಂ ಕೇಂದ್ರೀಯ ವಿವಿಯ ವಿಶ್ರಾಂತ ಸಹ ಕುಲಪತಿ ಪ್ರೊ.ಕೆ.ವಿ.ನಾಗರಾಜ್ ಉಪನ್ಯಾಸ ನೀಡಿ ದರು. ಇದೇ ವೇಳೆ ನಾಡಿಗರ ಪುತ್ರಿಯರಾದ ಡಾ.ವಿಜಯ ಲಕ್ಷಿö್ಮ ಸುಧಾಕರ್, ಕೃಪಾ ನಾಡಿಗ್ ಅವರನ್ನು ಸನ್ಮಾನಿ ಸಲಾಯಿತು. ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಕೆ.ಸದಾಶಿವ ಶೆಣೈ, ಕಾರ್ಯದರ್ಶಿ ಸಿ.ರೂಪಾ, ಸದಸ್ಯ ರಾದ ಕೂಡ್ಲಿ ಗುರುರಾಜ್, ಸಿ.ಕೆ.ಮಹೇಂದ್ರ, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿ ಕುಮಾರ್, ಪ್ರಧಾನ ಕಾರ್ಯದರ್ಶಿ ಎಂ.ಸುಬ್ರಹ್ಮಣ್ಯ, ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ.ನಿರಂಜನ ವಾನಳ್ಳಿ ಮತ್ತಿತರರು ಹಾಜರಿದ್ದರು.

Translate »