ಕ್ರಿಮಿನಲ್‌ಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳಬಾರದು
ಮೈಸೂರು

ಕ್ರಿಮಿನಲ್‌ಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳಬಾರದು

October 22, 2021

ಮೈಸೂರು, ಅ.೨೧(ಆರ್‌ಕೆ)- ಸರಿ ಯಾದ ಸಾಕ್ಷಾö್ಯಧಾರಗಳಿಲ್ಲದೇ ನಿಜವಾದ ಕ್ರಿಮಿನಲ್‌ಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳ ಬಾರದು ಎಂದು ಮೈಸೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಂ.ಎಲ್.ರಘುನಾಥ್ ಅಭಿಪ್ರಾಯಪಟ್ಟರು.

ಮೈಸೂರಿನ ಎಸ್‌ಪಿ ಕಚೇರಿ ಬಳಿ ಇರುವ ಹುತಾತ್ಮರ ಸ್ಮಾರಕ ಉದ್ಯಾನದಲ್ಲಿ ಮೈಸೂರು ನಗರ ಮತ್ತು ಜಿಲ್ಲಾ ಪೊಲೀಸ್, ಕೆಪಿಎ, ಕೆಎಸ್‌ಆರ್‌ಪಿ ಹಾಗೂ ಪೊಲೀಸ್ ತರಬೇತಿ ಶಾಲೆ ಸಂಯುಕ್ತಾಶ್ರಯದಲ್ಲಿ ಗುರು ವಾರ ಏರ್ಪಡಿಸಿದ್ದ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ತನಿಖೆ ವೇಳೆಯ ಲೋಪದೋಷಗಳಿಂ ದಾಗಿ ಕೆಲವೊಮ್ಮೆ ನಿಜವಾದ ಕ್ರಿಮಿನಲ್ ಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ತನಿಖಾಧಿಕಾರಿಗಳು ಸರಿಯಾದ ಸಾಕ್ಷಿ ಪುರಾವೆಗಳೊಂದಿಗೆ ದೋಷಾ ರೋಪಣಾ ಪಟ್ಟಿ ಸಲ್ಲಿಸಿ ನ್ಯಾಯಾಲಯದ ಗಮನ ಸೆಳೆದರೆ ಕ್ರಿಮಿನಲ್‌ಗಳಿಗೆ ಶಿಕ್ಷೆ ಯಾಗಲು ಸಾಧ್ಯವಾಗುತ್ತದೆ. ಹಾಗೂ ಪ್ರಕ ರಣದ ಪತ್ತೆಗಾಗಿ ಶ್ರಮಿಸಿದ ಪೊಲೀಸ ರಿಗೂ ಪ್ರತಿಫಲ ದೊರೆಯುತ್ತದೆ. ಈ ನಿಟ್ಟಿ ನಲ್ಲಿ ಪೊಲೀಸರು ಕಾರ್ಯ ನಿರ್ವಹಿಸ ಬೇಕು ಎಂದು ಕಿವಿಮಾತು ಹೇಳಿದರು.
ದೇಶಕ್ಕೆ ಸ್ವಾತಂತ್ರö್ಯ ತಂದು ಕೊಡಲು ಪ್ರಾಣ ತ್ಯಾಗ ಮಾಡಿದ ಹಲವಾರು ಗಣ್ಯ ರನ್ನು ಸ್ಮರಿಸುತ್ತೇವೆ. ಅದೇ ರೀತಿ ನಮ್ಮ ಹಿರಿಯರು ಗಳಿಸಿಕೊಟ್ಟ ಸ್ವಾತಂತ್ರö್ಯವನ್ನು ಜನ ಶಾಂತಿ ಹಾಗೂ ನೆಮ್ಮದಿಯಿಂದ ಅನು ಭವಿಸಲು ಹಗಲಿರುಳು ಕರ್ತವ್ಯ ನಿರ್ವ ಹಿಸಿ ಹುತಾತ್ಮರಾದ ಪೊಲೀಸರನ್ನು ಸ್ಮರಿ ಸಲು ಅ.೨೧ರಂದು ದೇಶಾದ್ಯಂತ ಪೊಲೀಸ್ ಹುತಾತ್ಮರ ದಿನ ಆಚರಿಸುತ್ತಿರುವುದು ಸಮಯೋಚಿತ ಎಂದು ನ್ಯಾಯಾಧೀಶರು ಹೇಳಿದರು. ನಾಗರಿಕರ ಸುರಕ್ಷತೆಗಾಗಿ ದಿನದ ೨೪ ಗಂಟೆಯೂ ಪೊಲೀಸರು ಕರ್ತವ್ಯ ನಿರ್ವಹಿಸುತ್ತಾರೆ. ಒಂದು ದಿನ ಅವರು ಕರ್ತವ್ಯ ಮರೆತರೆ ಸಮಾಜದಲ್ಲಿ ಅರಾಜಕತೆ ಉಂಟಾಗುತ್ತದೆ ಎಂದರು.

ದಕ್ಷಿಣ ವಲಯ ಐಜಿಪಿ ಪ್ರವೀಣ್ ಮಧು ಕರ್ ಪವಾರ್, ಕೆಪಿಎ ನಿರ್ದೇಶಕ ವಿಫುಲ್ ಕುಮಾರ್, ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಜಿಲ್ಲಾ ಎಸ್ಪಿ ಆರ್.ಚೇತನ್, ಕೆಪಿಎ ಉಪನಿರ್ದೇಶಕ ಸುಮನಾ ಡಿ ಪನ್ನೇಕರ್, ಪೊಲೀಸ್ ತರಬೇತಿ ಶಾಲೆ ಪ್ರಾಂಶುಪಾಲ ಡಾ.ಧರಣ ದೇವಿ ಮಾಲಗತ್ತಿ, ಎಸಿಬಿ ಎಸ್ಪಿ ಅರುಣಾಂಕ್ಷÄಗಿರಿ, ಡಿಸಿಪಿ ಪ್ರದೀಣ್ ಗುಂಟಿ, ಗುಪ್ತಚರ ದಳದ ಎಸ್ಪಿ ಮುತ್ತುರಾಜ್, ಕೆಎಸ್‌ಆರ್‌ಪಿ ಕಮಾಂ ಡೆಂಟ್ ಜನಾರ್ಧನ್, ಕೆಎಆರ್‌ಪಿ ಕಮಾಂ ಡೆಂಟ್ ನಾಗರಾಜು, ಸಿಎಆರ್ ಡಿಸಿಪಿ ಶಿವ ರಾಜ್, ಪಾಲಿಕೆ ವಲಯಾಧಿಕಾರಿ ಎಸ್. ನಾಗರಾಜ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್, ನಿವೃತ್ತ ಪೊಲೀಸ್ ಅಧಿಕಾರಿಗಳಾದ ಪಿ.ರಾಜೇಂದ್ರ ಪ್ರಸಾದ್, ಶಿವಣ್ಣ, ಡಿ.ಆನಂದ್, ನಾಗರಿ ಕರ ಪರವಾಗಿ ಡಾ.ರಮೇಶ್, ವಿಶೇಷ ಪೊಲೀಸ್ ಅಧಿಕಾರಿ ಶ್ರೀನಿವಾಸ ಗಾಂಧಿ, ದಿವಂಗತ ಪೊಲೀಸ್ ಅಧಿಕಾರಿಗಳಾದ ಪತ್ನಿಯರಾದ ಜ್ಯೋತಿ, ಮೀನಾಕ್ಷಿ, ವಿನುತಾ ಸೇರಿದಂತೆ ಹಲವರು ಹುತಾತ್ಮ ಪೊಲೀ ಸರಿಗೆ ಗೌರವ ನಮನ ಸಲ್ಲಿಸಿದರು.

ಇದಕ್ಕೂ ಮುನ್ನಾ ಪರೇಡ್ ಕಮಾಂ ಡರ್‌ಗಳು ಗೌರವ ವಂದನೆ ಸಲ್ಲಿಸಿದ ನಂತರ ವಾಲಿ ಫೈರಿಂಗ್ ಹಾಗೂ ಮೌನಾ ಚರಣೆ ಮಾಡಲಾಯಿತು. ಈ ಒಂದು ವರ್ಷದಲ್ಲಿ ಕರ್ನಾಟಕದ ೧೬ ಸೇರಿದಂತೆ ದೇಶಾದ್ಯಂತ ೩೭೭ ಮಂದಿ ಪೊಲೀಸರು ಹುತಾತ್ಮರಾಗಿದ್ದು, ಅವರ ಪಟ್ಟಿಯನ್ನು ಎಸ್ಪಿ ಚೇತನ್ ವಾಚಿಸಿ, ಪೊಲೀಸ್ ಹುತಾತ್ಮರ ದಿನಾಚರಣೆಯ ಮಹತ್ವವನ್ನು ತಿಳಿಸಿದರು.

Translate »