ಕೋಟಿ ರೂ. ವೆಚ್ಚದಲ್ಲಿ ಉದಯರವಿ  ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ
ಮೈಸೂರು

ಕೋಟಿ ರೂ. ವೆಚ್ಚದಲ್ಲಿ ಉದಯರವಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

March 22, 2021

ಮೈಸೂರು,ಮಾ.21(ಪಿಎಂ)- ಮೈಸೂ ರಿನ ಕೆಆರ್ ಕ್ಷೇತ್ರ ವ್ಯಾಪ್ತಿಯ ಚನ್ನಗಿರಿ ಕೊಪ್ಪಲು ಬಳಿಯ ರೈಲ್ವೆ ಕೆಳಸೇತುವೆ ಬಳಿ ಯಿಂದ ಉದಯರವಿ ರಸ್ತೆಯ ಅಭಿವೃದ್ಧಿ ಜೊತೆಗೆ ಇದೇ ರಸ್ತೆಯ ಫುಟ್‍ಪಾತ್ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗೆ (ಆದಿಚುಂಚನಗಿರಿ ರಸ್ತೆ ಜಂಕ್ಷನ್‍ವರೆಗೆ) ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಭಾನುವಾರ ಚಾಲನೆ ನೀಡಿದರು.

ರಾಜ್ಯ ಸರ್ಕಾರದ ಕೋಟಿ ರೂ. ವೆಚ್ಚ ದಲ್ಲಿ (ಟಿಎಸ್‍ಪಿ ಅನುದಾನ) ಸದರಿ ಕಾಮ ಗಾರಿಯನ್ನು ಲೋಕೋಪಯೋಗಿ ಇಲಾಖೆ ಕೈಗೆತ್ತಿಕೊಂಡಿದೆ. ಉದಯರವಿ ರಸ್ತೆಯ ಇಸ್ಕಾನ್ ದೇವಾಲಯದ ಎದುರು ಕಾಮ ಗಾರಿಗೆ ಚಾಲನೆ ನೀಡಿದ ಶಾಸಕ ಎಸ್.ಎ. ರಾಮದಾಸ್ ಮಾತನಾಡಿ, ವಿದ್ಯಾರಣ್ಯ ಪುರಂ, ಜಯನಗರ, ಅಶೋಕಪುರಂ, ಕುವೆಂಪುನಗರ ಹಾಗೂ ಶಾರದಾದೇವಿ ನಗರ ಮೂಲಕ ರಿಂಗ್ ರಸ್ತೆಗೆ ಸಂಪರ್ಕ ಕಲ್ಪಿಸುವ ಈ ಉದಯರವಿ ರಸ್ತೆಯಲ್ಲಿ ದಿನೇ ದಿನೆ ಸಂಚಾರ ದಟ್ಟಣೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಇದರ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಈ ರಸ್ತೆ ಅಗಲೀಕರಣ ಮಾಡಿ, ಎರಡೂ ಬದಿಯಲ್ಲಿ ಚರಂಡಿ ನಿರ್ಮಾಣ ಮಾಡ ಬೇಕೆಂದು ಜನಸಾಮಾನ್ಯರ ಬೇಡಿಕೆ ಇತ್ತು. ಈ ಹಿನ್ನೆಲೆಯಲ್ಲಿ ಪಾಲಿಕೆ ಸದಸ್ಯರು ಒತ್ತಾಯ ಮಾಡುತ್ತಿದ್ದರು. ಇದೀಗ ರಾಜ್ಯ ಸರ್ಕಾ ರದ ಅನುದಾನದ 1 ಕೋಟಿ ರೂ. ವೆಚ್ಚದಲ್ಲಿ ಈ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ. ಚನ್ನಗಿರಿಕೊಪ್ಪಲು ಹಾಗೂ ಜಯನಗರ ಭಾಗದ ಇನ್ನಿತರ ಮುಖ್ಯ ರಸ್ತೆಗಳ ಅಭಿವೃದ್ಧಿಗೂ ಆದ್ಯತೆ ನೀಡಲಾಗುವುದು. ಪ್ರಸಕ್ತ ಸಾಲಿನ ಒಳಗೆ ಈ ಮುಖ್ಯರಸ್ತೆಗಳ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳುವ ಪ್ರಯತ್ನದಲ್ಲಿರು ವುದಾಗಿ ಶಾಸಕರು ಹೇಳಿದರು.

ದೇವಿರಮ್ಮಣ್ಣಿ ಅಗ್ರಹಾರ: ಬಳಿಕ ಮೈಸೂರು ನಗರ ಪಾಲಿಕೆ ವಾರ್ಡ್ 51ರ ವ್ಯಾಪ್ತಿಯ ದೇವಿರಮ್ಮಣ್ಣಿ ಅಗ್ರಹಾರದಲ್ಲಿ ರಸ್ತೆ ಅಭಿ ವೃದ್ಧಿ ಹಾಗೂ ಫುಟ್‍ಪಾತ್ ನಿರ್ಮಾಣ ಕಾಮಗಾರಿಗೂ ಶಾಸಕರು ಗುದ್ದಲಿ ಪೂಜೆ ನೆರವೇರಿಸಿದರು. ಮಹಾನಗರ ಪಾಲಿಕೆಯ 10 ಲಕ್ಷ ರೂ. ಅನುದಾನದಲ್ಲಿ ಇಲ್ಲಿನ ಗಣಪತಿ ದೇವಸ್ಥಾನದ ಎದುರಿನ ರಸ್ತೆ ಅಭಿವೃದ್ಧಿಗೆ ಕೈಗೆತ್ತಿಕೊಂಡಿರುವ ಕಾಮ ಗಾರಿಗೆ ಶಾಸಕರು ಚಾಲನೆ ನೀಡಿದರು.

ನಗರ ಪಾಲಿಕೆಯ ತೆರಿಗೆ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷೆ ಎಂ.ಎಸ್.ಶೋಭಾ, ಪಾಲಿಕೆ ಸದಸ್ಯರಾದ ಭುವನೇಶ್ವರಿ ಪ್ರಭುಮೂರ್ತಿ, ಬಿ.ವಿ.ಮಂಜುನಾಥ್, ಮುಖಂಡರಾದ ಸುಜಾತಾ ರಾಮ ಪ್ರಸಾದ್, ಗೌರಿ, ಗಿರಿ, ಪ್ರದೀಪ್, ಕೃಷ್ಣ, ಉಮೇಶ್, ಲೋಕೇಶ್, ಬಾಲಕೃಷ್ಣ, ನಾಗರಾಜ್, ವಿಜಯ್, ಕಾವೇರಿ, ಶಿವ ಕುಮಾರಿ, ಸುಭಾಷ್, ರವಿ, ರಾಜು, ಮಧು ಸೋಮಣ್ಣ, ರಾಜೀವ್, ಅಧಿಕಾರಿ ಗಳಾದ ರಾಜು, ನಂಜುಂಡೇಗೌಡ, ಶುಶ್ರುತ್, ಸಂತೋಷ್ ಮತ್ತಿತರರು ಹಾಜರಿದ್ದರು.

Translate »