ಮೈಸೂರಲ್ಲಿ ಪೊಲೀಸರಿಂದ ಅಪರಾಧ ತಡೆ ಜಾಗೃತಿಗೆ ಸೈಕಲ್ ಜಾಥಾ
ಮೈಸೂರು

ಮೈಸೂರಲ್ಲಿ ಪೊಲೀಸರಿಂದ ಅಪರಾಧ ತಡೆ ಜಾಗೃತಿಗೆ ಸೈಕಲ್ ಜಾಥಾ

December 26, 2021

ಗೋಡೆ ಮೇಲೆ ಚಿತ್ರ ಕಲಾಕೃತಿ, ಭಿತ್ತಿ ಪತ್ರದ ಮೂಲಕವೂ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಪ್ರಯತ್ನ

ಮೈಸೂರು, ಡಿ. ೨೫(ಆರ್‌ಕೆ)- ಅಪರಾಧ ತಡೆಗಟ್ಟಲು ಸಿಸಿಬಿ ಪೊಲೀಸರು ಮೈಸೂರಲ್ಲಿ ಇಂದು ಸೈಕಲ್ ಜಾಥಾ ನಡೆಸುವ ಮೂಲಕ ಸಾರ್ವ ಜನಿಕರಲ್ಲಿ ಜಾಗೃತಿ ಮೂಡಿಸಿದರು.
ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಸರ್ಕಾರಿ ಆಯುರ್ವೇದ ಕಾಲೇಜು ಸರ್ಕಲ್ ಬಳಿ ರ‍್ವಿನ್ ರಸ್ತೆಯಲ್ಲಿ ಆಯೋಜಿಸಿದ್ದ ಸೈಕಲ್ ಜಾಥಾಗೆ ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಅವರು ಹಸಿರು ನಿಶಾನೆ ತೋರುವ ಮೂಲಕ ಉದ್ಘಾಟಿ ಸಿದರಲ್ಲದೆ, ತಾವೂ ಸೈಕಲ್ ತುಳಿದು, ಸ್ವಲ್ಪ ದೂರ ಜಾಥಾದಲ್ಲಿ ಸಾಗಿದರು. ರ‍್ವಿನ್ ರಸ್ತೆ, ನೆಹರು ಸರ್ಕಲ್, ಅಶೋಕ ರಸ್ತೆ, ಅರಮನೆ ಶ್ರೀ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ, ಕೆ.ಆರ್. ಸರ್ಕಲ್ ಮೂಲಕ ಸಯ್ಯಾಜಿರಾವ್ ರಸ್ತೆ ಮಾರ್ಗವಾಗಿ ಸಂಚ ರಿಸಿದ ಜಾಥಾವು ಮರಳಿ ಸರ್ಕಾರಿ ಆಯುರ್ವೇದ ಕಾಲೇಜು ಸರ್ಕಲ್‌ನಲ್ಲಿ ಅಂತ್ಯಗೊAಡಿತು.

ರ‍್ವಿನ್ ರಸ್ತೆಯ ಜಿಲ್ಲಾ ಕೇಂದ್ರ ಗ್ರಂಥಾಲಯ ಕಟ್ಟಡದ ಗೋಡೆ ಮೇಲೆ ಅಪರಾಧ ಕೃತ್ಯ ತಡೆಗಟ್ಟುವ ಕುರಿತು ಅರಿವು ಮೂಡಿಸುವ ಚಿತ್ರಗಳನ್ನು ಕಲಾವಿದರು ಬಿಡಿಸಿದ್ದು, ಜಾಗೃತಿ ಘೋಷಣೆಗಳನ್ನು ಬರೆದಿದ್ದಾರೆ. ಇದೇ ವೇಳೆ ನಾಗರಿಕರಿಗೂ ಭಿತ್ತಿ ಪತ್ರಗಳನ್ನು ವಿತರಿಸಲಾಯಿತು.

ಡಿಸಿಪಿ ಎಂಎಸ್ ಗೀತಾ ಪ್ರಸನ್ನ, ಸಿಸಿಬಿ ಎಸಿಪಿ ಸಿ.ಕೆ. ಅಶ್ವತ್ಥನಾರಾಯಣ, ದೇವರಾಜ ಉಪ ವಿಭಾಗದ ಎಸಿಪಿ ಎಂ.ಎನ್.ಶಶಿಧರ್, ಸಂಚಾರ ಎಸಿಪಿ ಎಸ್‌ಇ.ಗಂಗಾಧರಸ್ವಾಮಿ, ಸಿಸಿಬಿ ಇನ್‌ಸ್ಪೆಕ್ಟರ್ ಗಳಾದ ಎ.ಮಲ್ಲೇಶ, ಆರ್.ಜಗದೀಶ, ಶೇಖರ್, ಕಾವಾ ಉಪನಿರ್ದೇಶಕ ನಜೀರ್ ಅಹಮದ್, ಕಾರ್ಪೋರೇಟರ್ ನಾಗರಾಜು ಹಾಗೂ ಇತರರು ಈ ಸಂದರ್ಭ ಭಾಗವಹಿಸಿದ್ದರು.

Translate »