ಮೈಸೂರು ಜಿಲ್ಲಾ ಅಧಿಕೃತ ಪತ್ರಿಕಾ ಪ್ರತಿನಿಧಿಗಳ ಸಂಘದ ಐದನೇ ವಾರ್ಷಿಕೋತ್ಸವ
News, ಮೈಸೂರು

ಮೈಸೂರು ಜಿಲ್ಲಾ ಅಧಿಕೃತ ಪತ್ರಿಕಾ ಪ್ರತಿನಿಧಿಗಳ ಸಂಘದ ಐದನೇ ವಾರ್ಷಿಕೋತ್ಸವ

December 26, 2021
  • ಅಸಂಘಟಿತ ಕಾರ್ಮಿಕರ ವ್ಯಾಪ್ತಿಗೆ ಪತ್ರಿಕಾ ವಿತರಕರೂ ಸೇರ್ಪಡೆಯಾಗಬೇಕು
  • ಅಸಂಘಟಿತ ವಲಯಕ್ಕೆ ಪತ್ರಿಕಾ ವಿತರಕರ ಸೇರ್ಪಡೆ; ಉಸ್ತುವಾರಿ ಸಚಿವರಿಗೆ ಶೀಘ್ರ ಮನವಿ
  • ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್

ಮೈಸೂರು,ಡಿ.೨೫(ಪಿಎಂ)-ಪತ್ರಿಕಾ ವಿತರಕರನ್ನು ಅಸಂಘಟಿತ ವಲಯಕ್ಕೆ ಸೇರ್ಪಡೆಗೊಳಿಸುವ ಸಂಬAಧ ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಮನವಿ ಮಾಡು ವುದಾಗಿ ತಿಳಿಸಿದ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿ ಕುಮಾರ್, ಸಾಧ್ಯವಾದರೆ ಸಂಬAಧಿಸಿದ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸುವುದಾಗಿಯೂ ಹೇಳಿದರು. ಪತ್ರಿಕಾ ವಿತರಕರು, ಪತ್ರಿಕಾ ಸಂಸ್ಥೆಗಳ ಬೆನ್ನೆಲುಬು. ಮಳೆ, ಚಳಿ, ಗಾಳಿ ಲೆಕ್ಕಿಸದೆ ಸೇವೆ ಸಲ್ಲಿಸುವ ವಿತರಕರು ಪತ್ರಿಕಾರಂಗದ ಅವಿಭಾಜ್ಯ ಅಂಗವಾಗಿದ್ದಾರೆ. ಹೀಗಾಗಿಯೇ ನಮ್ಮ ಸಂಘದ ಕಾರ್ಯ ಚಟುವಟಿಕೆಯಲ್ಲಿ ವಿತರಕರ ಸಂಘವನ್ನು ಪರಿಗಣ ಸಿದ್ದೇವೆ. ನಮ್ಮ ಸಂಘದ ಸದಸ್ಯರಿಗಾಗಿ ನಡೆದ ಕೋವಿಡ್ ಲಸಿಕಾ ಕಾರ್ಯಕ್ರಮದಲ್ಲಿ ವಿತರಕರನ್ನು ಸೇರ್ಪಡೆಗೊಳಿಸಲಾಯಿತು. ಪತ್ರಿಕೆಗಳು ಅಂತಿಮವಾಗಿ ಓದುಗರ ಕೈ ಸೇರುವ ಸಾರ್ಥಕತೆಗೆ ವಿತರಕರು ಸಾಕ್ಷಿಯಾಗಿದ್ದಾರೆ ಎಂದು ನುಡಿದರು. ಮುಂಬರುವ ಜನವರಿ ಎರಡನೇ ವಾರದಲ್ಲಿ ನಮ್ಮ ಸಂಘದ ಸದಸ್ಯರಿಗಾಗಿ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸುತ್ತಿದ್ದು, ಇದರಲ್ಲಿ ತಾವೂ ಪಾಲ್ಗೊಂಡು ಪ್ರಯೋಜನ ಪಡೆಯಬಹುದು ಎಂದು ತಿಳಿಸಿದರು.

ಮೈಸೂರು,ಡಿ.೨೫(ಪಿಎಂ)-ಅಸAಘ ಟಿತ ಕಾರ್ಮಿಕರ ವ್ಯಾಪ್ತಿಗೆ ಪತ್ರಿಕಾ ವಿತರಕರೂ ಸೇರ್ಪಡೆಗೊಳ್ಳುವ ಅಗತ್ಯ ವಿದ್ದು, ಈ ನಿಟ್ಟಿನಲ್ಲಿ ನಾವು ಪ್ರಯತ್ನಿ ಸಬೇಕಿದೆ ಎಂದು ಮೈಸೂರು ಜಿಲ್ಲಾ ಅಧಿಕೃತ ಪತ್ರಿಕಾ ಪ್ರತಿನಿಧಿಗಳ ಸಂಘದ ಗೌರವಾಧ್ಯಕ್ಷರೂ ಆದ ಮಾಜಿ ಶಾಸಕ ವಾಸು ಅಭಿಪ್ರಾಯಪಟ್ಟರು.
ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮೈಸೂರು ಜಿಲ್ಲಾ ಅಧಿಕೃತ ಪತ್ರಿಕಾ ಪ್ರತಿನಿಧಿಗಳ (ವಿತರಕರು) ಸಂಘದ ೫ನೇ ವಾರ್ಷಿ ಕೋತ್ಸವ ಉದ್ಘಾಟಿಸುವುದರೊಂದಿಗೆ ಸಂಘದ ೨೦೨೨ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದರು.
ಅಸಂಘಟಿತ ಕಾರ್ಮಿಕರ ವ್ಯಾಪ್ತಿಯಲ್ಲಿ ಪತ್ರಿಕಾ ವಿತರಕರೂ ಬರುತ್ತಾರೆ. ಆದರೆ ಅಧಿಕೃತವಾಗಿ ಸೇರ್ಪಡೆಗೊಳಿಸುವ ಕೆಲಸವಾಗಬೇಕಿದೆ. ಅಸಂಘಟಿತ ಕಾರ್ಮಿಕರಿಗೆ ದೊರೆಯುವ ಸೌಲಭ್ಯಗಳು ಹಾಗೂ ಅವರು ಅನುಭವಿಸುವ ಸಮಸ್ಯೆ ಗಳು ಪತ್ರಿಕೆಗಳಲ್ಲಿ ಪ್ರಕಟಣೆಗೊಳ್ಳುತ್ತವೆ. ಆದರೆ ಅಂತಹ ಪತ್ರಿಕೆ ವಿತರಣೆ ಮಾಡುವ ವಿತರಕರು ಅಸಂಘಟಿತರೇ ಆಗಿದ್ದಾರೆ ಎಂದು ವಿಷಾದಿಸಿದರು.

ಕೋವಿಡ್ ಚಿಕಿತ್ಸೆಗಾಗಿ ಪತ್ರಿಕಾ ಕ್ಷೇತ್ರದ ಬಹಳಷ್ಟು ಮಂದಿ ನನ್ನನ್ನು ಸಂಪರ್ಕಿ ಸುತ್ತಿದ್ದರು. ಆದರೆ ನಿರೀಕ್ಷಿತ ಮಟ್ಟದಲ್ಲಿ ಸ್ಪಂದಿಸಲು ಸಾಧ್ಯವಾಗಲಿಲ್ಲ. ವೈದ್ಯಕೀಯ ವ್ಯವಸ್ಥೆ ನಮ್ಮಲ್ಲಿ ಸಮರ್ಪಕವಾಗಿ ಇಲ್ಲದ ಕಾರಣ ಹಲವರಿಗೆ ಸಹಾಯಹಸ್ತ ನೀಡಲು ಸಾಧ್ಯವಾಗಲಿಲ್ಲ. ಹಾಗಾಗಿ ಬಹಳಷ್ಟು ಮಂದಿ ವೈದ್ಯಕೀಯ ಸೌಲಭ್ಯ ಸಮರ್ಪಕವಾಗಿ ದೊರೆಯದೇ ಸಂಕಷ್ಟ ಅನುಭವಿಸಿದರು. ನಾವು ನಗರದಲ್ಲಿ ನಿರ್ಮಿಸಿರುವ ಆಸ್ಪತ್ರೆ ಗಳಲ್ಲಿ ಹೆಚ್ಚುವರಿ ಹಾಸಿಗೆ ವ್ಯವಸ್ಥೆ ಕಲ್ಪಿಸ ಬಹುದು. ಆದರೆ ವೈದ್ಯಕೀಯ ಉಪ ಕರಣ ಮತ್ತು ವೈದ್ಯರ ಕೊರತೆಯಿಂದ ಹಲವು ಕೋವಿಡ್ ಸೋಂಕಿತರ ಸಾವು ಸಂಭವಿಸಿತು ಎಂದು ಬೇಸರ ವ್ಯಕ್ತಪಡಿಸಿದರು.

ಮೈಸೂರಿನ ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ ಆಗಬೇಕಾದರೆ ಮಾಧ್ಯಮ ಅದರ ಮೇಲೆ ಬೆಳಕು ಚೆಲ್ಲಬೇಕಿದೆ. ಸಾಮಾಜಿಕ ಕೆಲಸ ಕಾರ್ಯ, ನ್ಯಾಯಯುತ ಸೌಲಭ್ಯ ಗಳು ದೊರೆಕಿಸಿಕೊಡಲು ತಕರಾರು ತೆಗೆಯುವಲ್ಲಿ ಮೈಸೂರು ಪತ್ರಿಕೋದ್ಯಮಕ್ಕೆ ದೊಡ್ಡ ಇತಿಹಾಸವೇ ಇದೆ ಎಂದರು.

ಸಂಘಕ್ಕೆ ಮತ್ತೆ ೫೦ ಸಾವಿರ ನೀಡುವೆ: ಕೋವಿಡ್ ತೀವ್ರವಾಗುವ ಬಗ್ಗೆ ಮಾತು ಗಳು ಕೇಳಿ ಬರುತ್ತಿದ್ದು, ಮಾಧ್ಯಮದವರು ಎಚ್ಚರ ವಹಿಸುವ ಜೊತೆಗೆ ವೈದ್ಯಕೀಯ ಸೌಲಭ್ಯ ಪಡೆದುಕೊಳ್ಳಲು ಈಗಲೇ ಪೂರ್ವ ತಯಾರಿ ಮಾಡಿಕೊಳ್ಳುವತ್ತ ಗಮನ ನೀಡಬೇಕು. ಈಗಾಗಲೇ ನಿಮ್ಮ ಸಂಘದ ಆರೋಗ್ಯ ನಿಧಿಗಾಗಿ ೫೦ ಸಾವಿರ ರೂ. ನೀಡಿದ್ದೇನೆ. ಇದರ ಜೊತೆಗೆ ಇನ್ನು ೫೦ ಸಾವಿರ ರೂ. ನೀಡುತ್ತೇನೆ. ಆದರೆ ನಾನೊಬ್ಬ ನೀಡುವ ಸಹಾಯಧನದಿಂದ ಪೂರ್ಣ ಪ್ರಮಾಣದಲ್ಲಿ ಸೌಲಭ್ಯ ಪಡೆಯಲು ಸಾಧ್ಯವಿಲ್ಲ. ಹಾಗಾಗಿ ದಾನಿಗಳಿಂದ ದೊಡ್ಡ ಮೊತ್ತವನ್ನು ಕ್ರೋಢೀಕರಿಸಲು ಮುಂದಾಗಬೇಕೆAದು ಸಲಹೆ ನೀಡಿದರು.

ಇಂಜಿನಿಯರಿAಗ್ ಮತ್ತು ವೈದ್ಯಕೀಯ ಸೀಟು ಪಡೆಯಲು ರಾಜ್ಯದಲ್ಲಿ ಮೊಟ್ಟ ಮೊದಲಿಗೆ ಸಿಇಟಿ ಪರೀಕ್ಷೆ ಪ್ರಾರಂಭವಾ ಯಿತು. ಆದರೆ ಈಗ ನೀಟ್ ಪರೀಕ್ಷೆ ಯಿಂದ ನಮ್ಮಲ್ಲಿನ ವೈದ್ಯಕೀಯ ಕಾಲೇಜುಗಳಲ್ಲಿ ಹೊರ ರಾಜ್ಯದವರಿಗೇ ಹೆಚ್ಚು ಸೀಟು ದೊರೆಯುಂತಾಗಿದೆ. ಇದರಿಂದ ನಮ್ಮ ಮುಂದಿನ ಪೀಳಿಗೆಗೆ ಸಾಕಷ್ಟು ಅನ್ಯಾಯವಾಗಲಿದ್ದು, ಇಂತಹ ವಿಚಾರಗಳಲ್ಲಿ ನಾವು ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು.

ಸನ್ಮಾನ-ಸಹಾಯಧನ: ಇದೇ ವೇಳೆ ಹಿರಿಯ ಪತ್ರಿಕಾ ವಿತರಕರಾದ ಈಶ್ವರ ಪ್ರಸಾದ್ (ಗೌರಿಶಂಕರ ಬುಕ್ ಡಿಪೋ), ಆರ್.ಪುಟ್ಟಸ್ವಾಮಿ, ಕೆ.ರಘುಪತಿ (ಸಿಕೆಆರ್) ಮತ್ತು ಅಶ್ವಥ್ ಅವರನ್ನು ಸನ್ಮಾನಿಸಲಾ ಯಿತು. ಅಲ್ಲದೆ, ಆರ್ಥಿಕ ಸಹಾಯ ಅಗತ್ಯವಿರುವ ವಿತರಕರಿಗೆ ಸಹಾಯ ಧನ ನೀಡಲಾಯಿತು. ದಿವಂಗತ ಶಿವಕುಮಾರ್ ಅವರ ಪತ್ನಿ ಮಂಜುಳಾ, ಸಿದ್ದಪ್ಪ, ಶ್ರೀಧರ್‌ಕುಮಾರ್, ಪುಟ್ಟಸ್ವಾಮಿ (ಅವರ ಪುತ್ರ ಸ್ವೀಕರಿಸಿದರು), ಲಕ್ಷö್ಮಣ್‌ಸ್ವಾಮಿ, ಎಂ.ಡಿ.ಗುAಡಪ್ಪ, ರಂಗನಾಥ್ ಮತ್ತು ಚಿಕ್ಕಯ್ಯ ಸಹಾಯಧನ ಪಡೆದರು. ಇದಕ್ಕೂ ಮುನ್ನ ಇತ್ತೀಚೆಗೆ ನಿಧನರಾದ ಭಾರತದ ಸಿಡಿಎಸ್ ಬಿಪಿನ್ ರಾವತ್, ನಟ ಪುನೀತ್ ರಾಜ್‌ಕುಮಾರ್ ಮತ್ತು ನ್ಯೂಸ್‌ಪೇಪರ್ ಹೌಸ್ ಮಾಲೀಕ ಶ್ರೀಧರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಶ್ರದ್ಧಾಂಜಲಿ ಅರ್ಪಿಸಲಾಯಿತು.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ, ಪತ್ರಿಕಾ ಪ್ರತಿನಿಧಿಗಳ ಸಂಘದ ಅಧ್ಯಕ್ಷ ಪಿ.ಸುರೇಶ್, ಪ್ರಧಾನ ಕಾರ್ಯದರ್ಶಿ ಎ.ರವಿ, `ಮೈಸೂರು ಮಿತ್ರ’ ಮತ್ತು `ಸ್ಟಾರ್ ಆಫ್ ಮೈಸೂರು’ ಪತ್ರಿಕೆಗಳ ಮುದ್ರಣ ವಿಭಾಗದ ಪ್ರಧಾನ ವ್ಯವಸ್ಥಾಪಕ ಟಿ.ಎಸ್.ಗೋಪಿನಾಥ್ ಮತ್ತಿತರರು ಹಾಜರಿದ್ದರು.

Translate »