ಮೈಸೂರು ಅರಮನೆ ಆವರಣದಲ್ಲಿ ಅಂದ-ಚಂದದ ಫಲಪುಷ್ಪ ಪ್ರದರ್ಶನ
News, ಮೈಸೂರು

ಮೈಸೂರು ಅರಮನೆ ಆವರಣದಲ್ಲಿ ಅಂದ-ಚಂದದ ಫಲಪುಷ್ಪ ಪ್ರದರ್ಶನ

December 26, 2021

ಮೈಸೂರು ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಚಾಲನೆ

ಮನಸ್ಸಿಗೆ ಮುದ ನೀಡಲಿದೆ ನವನವೀನ ಪುಷ್ಪರಾಶಿ

ಕಣ್ಮನ ಸೆಳೆಯುತ್ತಿವೆ ನಾನಾ ರೀತಿಯ ಪುಷ್ಪ ಆಕೃತಿಗಳು

ಬಿಪಿನ್ ರಾವತ್, ಪುನೀತ್ ರಾಜ್‌ಕುಮಾರ್‌ಗೆ ಪುಷ್ಪನಮನ

ಹೊಸ ವರ್ಷದ ಸಂತಸದ ಸ್ವಾಗತಕ್ಕೆ ಅಂದದ ಅರಮನೆ ಆವರಣ ಸಜ್ಜು

ಮೈಸೂರು, ಡಿ.೨೫(ಎಸ್‌ಬಿಡಿ)- ಹೊಸ ವರ್ಷದ ಹೊಸ್ತಿಲಲ್ಲಿ ಮೈಸೂರು ಅರಮನೆ ಅಂಗಳದಲ್ಲಿ ರೂಪುಗೊಂಡಿ ರುವ ಅತ್ಯಾಕರ್ಷಕ `ಫಲಪುಷ್ಪ ಪ್ರದರ್ಶ ನ’ಕ್ಕೆ ಶನಿವಾರ ಚಾಲನೆ ದೊರಕಿತು.

ಕೊರೊನಾ ಪರಿಣಾಮ ಕಳೆದೆರಡು ವರ್ಷಗಳಿಂದ ಈ ವರ್ಷಾಂತ್ಯ ಫಲಪುಷ್ಪ ಪ್ರದರ್ಶನ ಸ್ಥಗಿತಗೊಂಡಿತ್ತು. ಆದರೆ ಈ ಬಾರಿ ಸೇವಂತಿ, ಮೆರಿಗೋಲ್ಡ್, ಸಾಲ್ವಿಯಾ, ಡೇಲಿಯಾ, ಬೋನ್ಸಾಯ್ ಸೇರಿದಂತೆ ೩೨ ಜಾತಿ ಹೂ ಗಿಡದ ೧೫ ಸಾವಿರ ಅಲಂಕಾರಿಕ ಕುಂಡಗಳು, ಲಕ್ಷಾಂತರ ಗುಲಾಬಿ, ಆರ್ಕಿಡ್, ಬ್ಲೂ ಡೈಸಿ, ಊಟಿ ಕಟ್ ಫ್ಲವರ್ ಸೇರಿದಂತೆ ವಿವಿಧ ಅಲಂಕಾರಿಕ ಹೂಗಳಿಂದ `ಪುಷ್ಪಲೋಕ’ವೇ ಸೃಷ್ಟಿಯಾ ಗಿದೆ. ವಿಶ್ವ ವಿಖ್ಯಾತ ಅಂಬಾವಿಲಾಸ ಅರಮನೆ ಮುಂಭಾಗದ ಉದ್ಯಾನದಲ್ಲಿ ಮೈದಳೆದಿ ರುವ `ಫಲಪುಷ್ಪ ಪ್ರದರ್ಶನ’ವನ್ನು ಸಹಕಾರ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಶನಿವಾರ ಸಂಜೆ ಉದ್ಘಾಟಿಸಿ, ಒಂದು ಸುತ್ತು ಹಾಕಿ ಮೆಚ್ಚುಗೆ ವ್ಯಕ್ತಪಡಿಸಿದರು.
ಮೇಯರ್ ಸುನಂದ ಪಾಲನೇತ್ರ, ಶಾಸಕ ಎಲ್.ನಾಗೇಂದ್ರ, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ವಿವಿಧ ನಿಗಮ ಮಂಡಳಿ ಅಧ್ಯಕ್ಷರಾದ ಎಂ.ಅಪ್ಪಣ್ಣ, ಎನ್.ವಿ.ಫಣ Ãಶ್, ಹೇಮಂತ್‌ಕುಮಾರ್ ಗೌಡ, ಎಲ್.ಆರ್.ಮಹದೇವಸ್ವಾಮಿ, ಎನ್‌ಆರ್.ಕೃಷ್ಣಪ್ಪಗೌಡ, ಎಸ್.ಮಹದೇವಯ್ಯ, ರಾಜ್ಯ ಸಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಕೋಟೆ ಎಂ.ಶಿವಣ್ಣ, ಬಿಜೆಪಿ ಜಿಲ್ಲಾ(ಗ್ರಾಮಾಂತರ) ಘಟಕದ ಅಧ್ಯಕ್ಷೆ ಮಂಗಳಾ ಸೋಮಶೇಖರ್, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಎಚ್.ಪ್ರಸಾದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್, ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ಮತ್ತಿತರರ ಗಣ್ಯರು ಉಪಸ್ಥಿತರಿದ್ದರು.

ನಾಡದೇವತೆ-ಅಯೋಧ್ಯೆ ರಾಮ: ಪುಷ್ಪಲೋಕದಲ್ಲಿ ಹೂಗಳಿಂದ ದೇವಾಲಯ ಮಾದರಿ ನಿರ್ಮಿಸಿ, ನಾಡದೇವತೆ ತಾಯಿ ಚಾಮುಂಡೇಶ್ವರಿ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಪಕ್ಕದಲ್ಲೇ ಇರುವ ಶ್ವೇತವರ್ಣದ ಹೂಗಳಿಂದ ನಿರ್ಮಿಸಿರುವ ನಂದಿ ವಿಗ್ರಹ, ಮಹಿಷಾಸುರ ಪ್ರತಿಮೆ ಮಾದರಿ ಆಕರ್ಷಕವಾಗಿವೆ. ಸಮೀಪದಲ್ಲೇ ವಿಸ್ತಾರವಾಗಿ ನಿರ್ಮಿಸಿರುವ `ಅಯೋಧ್ಯೆ ರಾಮ ಮಂದಿರ’ದ ಮಾದರಿಯೂ ಅತ್ಯದ್ಭುತವಾಗಿದೆ. ಬಣ್ಣ ಬಣ್ಣದ ಹೂಗಳಿಂದ ಅಲಂಕೃತಗೊಳಿಸಿರುವ ರಾಮಮಂದಿರದೊಳಗೆ ರಾಮ-ಸೀತೆ, ಲಕ್ಷö್ಮಣರ ಮೂರ್ತಿಗಳನ್ನು ಇಡಲಾಗಿದೆ. ಸುಮಾರು ೧೨ ದಿನಗಳಿಂದ ಹತ್ತಾರು ಮಂದಿ ಪರಿಶ್ರಮದಿಂದ ನಿರ್ಮಿಸಲಾಗಿರುವ `ರಾಮ ಮಂದಿರ’ ಮಾದರಿ ಸೂಜಿಗಲ್ಲಿನಂತೆ ಸೆಳೆಯುತ್ತದೆ. ಹಸಿರು ದ್ವಾರದ ಎರಡೂ ಕಡೆ ಹೂಗಳಿಂದ ಅಲಂಕೃತಗೊಳಿರುವ ಗದೆ ಇಡಲಾಗಿದೆ. ಸ್ವಲ್ಪ ದೂರದಲ್ಲೇ ಗಿಡವೊಂದನ್ನು ಕ್ರಿಸ್‌ಮಸ್ ಟ್ರೀ ಮಾದರಿ ಸಜ್ಜುಗೊಳಿಸಿ, ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ಆಕರ್ಷಕವಾಗಿದೆ.

ರಾಜ ಪರಂಪರೆ ಸ್ಮರಣೆ: ಮಹಾರಾಜ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಪ್ರತಿಮೆಯನ್ನು ಬಗೆ ಬಗೆಯ ಪುಷ್ಪಗಳಿಂದ ಅಲಂಕರಿಸುವ ಮೂಲಕ ನಮನ ಸಲ್ಲಿಸಲಾಗಿದೆ. ಮಹಾರಾಣ ಯವರು ಕುಳಿತಿರುವ ಹೂವಿನ ಪಲ್ಲಕ್ಕಿಯನ್ನು ಹೊತ್ತು ಸಾಗುವ ಮಾದರಿ ಪರಂಪರೆಯನ್ನು ನೆನಪಿಸುತ್ತದೆ. ಚಿತ್ರದುರ್ಗ ಕೋಟೆಯ ವೀರ ವನಿತೆ ಒನಕೆ ಓಬವ್ವ, ಕಲ್ಲಿನ ಕೋಟೆಯೊಳಗೆ ನುಸುಳುವ ಶತ್ರುಗಳನ್ನು ಸದೆ ಬಡಿಯುವ ಚಿತ್ರಣವನ್ನು ಕಣ ್ಣಗೆ ಕಟ್ಟಲಾಗಿದೆ. ಒಂದು ಭಾಗದಲ್ಲಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪುತ್ಥಳಿಯ ಇಕ್ಕೆಲಗಳಲ್ಲಿ ಪಿರಂಗಿಗಳನ್ನಿಟ್ಟು ಗೌರವ ಸಮರ್ಪಿಸಲಾಗಿದೆ.

ರಾವತ್-ಪುನೀತ್‌ಗೆ ನಮನ: ಇತ್ತೀಚೆಗೆ ತಮಿಳುನಾಡಿನ ಊಟಿಯಲ್ಲಿ ಸಂಭವಿಸಿದ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ಜನರಲ್ ಬಿಪಿನ್ ರಾವತ್ ಅವರ ಪ್ರತಿಮೆ ಹಾಗೂ ಅಕಾಲಿಕವಾಗಿ ಅಗಲಿದ ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಫೋಟೋಗೆ ಪುಷ್ಪನಮನ ಸಲ್ಲಿಸಲಾಗಿದೆ.

ಆಕರ್ಷಕ ಮಾದರಿಗಳು: ಸ್ವಾತಂತ್ರö್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಗಾಂಧೀಜಿ ಕ್ವಿಟ್ ಇಂಡಿಯಾ ಸ್ಮರಿಸುವ ಮಾದರಿ, ಪರಮವೀರ ಚಕ್ರ ವಿಜೇತ ಭಾರತೀಯ ವಾಯುಸೇನೆ ಗ್ರೂಪ್ ಕಾಪ್ಟರ್ ಅಭಿನಂದನ್ ವರ್ಧಮಾನ್, ಒಲಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಛೋಪ್ರಾ ಪ್ರತಿರೂಪ ನಿರ್ಮಿಸಿ, ಗೌರವ ಸಲ್ಲಿಸಲಾಗಿದೆ. ಕಾಡಾನೆಗಳ ಖೆಡ್ಡಾ ಕಾರ್ಯಾಚರಣೆ ಮಾದರಿ, ಮಕ್ಕಳ ಆಕರ್ಷಣೆಗಾಗಿ ಹಾಕಿ, ಫುಟ್‌ಬಾಲ್ ಆಡುತ್ತಿರುವ ಕಾರ್ಟೂನ್ ಮಾದರಿ, ಸೆಲ್ಫೀ ಸ್ಪಾಟ್ ಹೀಗೆ ಹತ್ತಾರು ಅತ್ಯಾಕರ್ಷಕ ಮಾದರಿಗಳು ಫಲಪುಷ್ಪ ಪ್ರದರ್ಶನದ ಮೆರುಗು ಹೆಚ್ಚಿಸಿವೆ.

ಗೊಂಬೆ-ಫೋಟೋ ಗ್ಯಾಲರಿ: ನವರಾತ್ರಿಯಲ್ಲಿ ಅತ್ಯುತ್ತಮವಾಗಿ ಬೊಂಬೆ ಜೋಡಿಸಿ, ಪ್ರದರ್ಶಿಸಿದವರಲ್ಲಿ ಐವರಿಗೆ ಫಲಪುಷ್ಪ ಪ್ರದರ್ಶನದಲ್ಲಿ ಅವಕಾಶ ನೀಡಿದ್ದು, ಇಲ್ಲಿಯೂ ಅತ್ಯಾಕರ್ಷಕವಾಗಿ ಬೊಂಬೆ ಜೋಡಿಸಿದ್ದಾರೆ. ಇನ್ನು ಮೈಸೂರು ರಾಜಪರಂಪರೆ, ಇತಿಹಾಸವನ್ನು ಪರಿಚಯಿಸುವ ಫೋಟೋ ಗ್ಯಾಲರಿ, ಈವರೆಗೆ ಜಂಬೂಸವಾರಿಯಲ್ಲಿ ಅಂಬಾರಿ ಹೊತ್ತಿರುವ ಆನೆಗಳ ವಿವರವುಳ್ಳ ಫಲಕ, ಕೋವಿಡ್ ಜಾಗೃತಿ ಮೂಡಿಸುವ ಚಿತ್ರಗಳು, ಪ್ಲಾಸ್ಟಿಕ್ ಮರುಬಳಕೆ ಬಗ್ಗೆ ಮಾಹಿತಿ, ಅರಮನೆಗೆ ಸಂಬAಧಿಸಿದ ಸಾಕ್ಷö್ಯಚಿತ್ರ ಪ್ರದರ್ಶನ ಹೀಗೆ ಹತ್ತು ಹಲವು ವಿಶೇಷತೆಗಳಿವೆ.

ಜ.೨ರವರೆಗೆ ಪ್ರದರ್ಶನ: ಇಂದಿನಿAದ ೨೦೨೨ರ ಜನವರಿ ೨ರವರೆಗೆ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದ್ದು, ಬೆಳಗ್ಗೆ ೧೦ ಗಂಟೆಯಿAದ ರಾತ್ರಿ ೮.೩೦ರವರೆಗೆ ಸಾರ್ವಜನಿಕರು ವೀಕ್ಷಿಸಬಹುದು. ಉಚಿತ ಪ್ರವೇಶ ಕಲ್ಪಿಸಲಾಗಿದ್ದು, ಎರಡು ಡೋಸ್ ಲಸಿಕೆ ಪಡೆದವರಿಗೆ ಪ್ರವೇಶಾವಕಾಶ ನೀಡಲಾಗುವುದು. ಸಂಜೆ ೭ರಿಂದ ೮.೩೦ರವರೆಗೂ ಅರಮನೆ ದೀಪಾಲಂಕಾರವಿರಲಿದ್ದು, ಇದೇ ವೇಳೆ ವರ್ಣರಂಜಿತ ದೀಪಗಳಿಂದ `ಪುಷ್ಪಲೋಕ’ ಮತ್ತಷ್ಟು ಕಂಗೊಳಿಸಲಿದೆ.

ಸಾAಸ್ಕöÈತಿಕ ಕಾರ್ಯಕ್ರಮಕ್ಕೆ ಚಾಲನೆ
ಅರಮನೆ ಮುಂಭಾಗದ ವೇದಿಕೆಯಲ್ಲಿ ಮೂರು ದಿನ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸಚಿವ ಎಸ್.ಟಿ.ಸೋಮಶೇಖರ್ ಚಾಲನೆ ನೀಡಿದರು. ಮೊದಲ ದಿನವಾದ ಇಂದು ಖ್ಯಾತ ಗಾಯಕ ವಿಜಯ ಪ್ರಕಾಶ್, `ಪುನೀತ್ ಗೀತ ನಮನ’ ನಡೆಸಿಕೊಟ್ಟರು. ಜನಪ್ರಿಯ `ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೆ ರಾಜಕುಮಾರ…’, `ಕಾಣದಂತೆ ಮಾಯವಾದನು ನಮ್ಮ ಶಿವ…’, `ಯುವರತ್ನ ಚಿತ್ರದ `ಪಾಠಶಾಲಾ…’ ಸೇರಿದಂತೆ ಹಲವು ಗೀತೆಗಳನ್ನು ಹಾಡಿ, ಕಿಕ್ಕಿರಿದಿದ್ದ ಜನರನ್ನು ಬಾವುಕಗೊಳಿಸಿದರು. ನಾಳೆ(ಡಿ.೨೬) ಸಂಜೆ ೭ರಿಂದ ೯ರವರೆಗೆ ಗಾಯಕರಾದ ಅಜಯ್ ವಾರಿಯರ್, ಶ್ರೀಹರ್ಷ, ಅಂಕಿತ, ಸುನೀತಾ ಜೋಗಿ, ದಿವ್ಯ ರಾಮಚಂದ್ರ ಹಾಗೂ ತಂಡದವರು ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಡಿ.೨೭ರಂದು ಡಾ.ವಿದ್ಯಾಭೂಷಣರಿಂದ ಗಾಯನ, ರಾಷ್ಟಿçÃಯ ಪ್ರಶಸ್ತಿ ಪುರಸ್ಕೃತ ಕಲಾವಿದ ಗಂಜೀಫಾ ರಘುಪತಿ ಭಟ್ ಅವರಿಂದ ಚಿತ್ರಣ ಹಾಗೂ ವಿದ್ವಾನ್ ಶ್ರೀಧರ್ ಜೈನ್ ತಂಡದಿAದ ನೃತ್ಯ ವೈಭವ ಪ್ರಸ್ತುತಿಯಾಗಲಿದೆ.

Translate »