ಜ.೩ರಿಂದ ೧೫-೧೮ ವರ್ಷದ ಮಕ್ಕಳಿಗೆ ಲಸಿಕೆ
News, ಮೈಸೂರು

ಜ.೩ರಿಂದ ೧೫-೧೮ ವರ್ಷದ ಮಕ್ಕಳಿಗೆ ಲಸಿಕೆ

December 26, 2021
  • ಪ್ರಧಾನಮಂತ್ರಿ ನರೇಂದ್ರ ಮೋದಿ ಮಹತ್ವದ ಘೋಷಣೆ
  • ಫ್ರಂಟ್‌ಲೈನ್ ವಾರಿಯರ್ಸ್, ೬೦ ವರ್ಷ ಮೇಲ್ಪಟ್ಟವರಿಗೂ ಬೂಸ್ಟರ್ ಡೋಸ್
  • ಶಾಲಾ ಕಾಲೇಜುಗಳಲ್ಲೇ ಮಕ್ಕಳಿಗೆ ವ್ಯಾಕ್ಸಿನೇಷನ್
  • ಒಮಿಕ್ರಾನ್ ಬಗ್ಗೆ ಭಯ ಬೇಡ; ಆದರೆ ಮುಂಜಾಗ್ರತೆವಹಿಸಿ
  • ಮೂಗಿನ ಮೂಲಕವೂ ಲಸಿಕೆ, ಡಿಎನ್‌ಎ ಲಸಿಕಾಕರಣವೂ ಶೀಘ್ರದಲ್ಲೇ ಆರಂಭ

ನವದೆಹಲಿ: ಜನವರಿ ೩ರಿಂದ ೧೫-೧೮ ವರ್ಷದ ಮಕ್ಕಳಿಗೆ ಲಸಿಕೆ ನೀಡಲಾಗುವುದು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ. ದೇಶದಲ್ಲಿ ಕೊರೊನಾ ರೂಪಾಂತರಿ ಒಮಿಕ್ರಾನ್ ಸೋಂಕು ಅಟ್ಟಹಾಸ ಮೆರೆಯುತ್ತಿರುವ ಹಿನ್ನೆಲೆಯಲ್ಲಿ ಇಂದು ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಮಾಡಿದರು.

ಎಲ್ಲರಿಗೂ ಕ್ರಿಸ್‌ಮಸ್ ಹಬ್ಬದ ಶುಭಾಶಯಗಳು, ಹೊಸವರ್ಷ ೨೦೨೨ ಸ್ವಾಗತಿ ಸೋಣ ಎಂದು ಪ್ರಧಾನಿ ಮೋದಿ ಭಾಷಣ ಆರಂಭಿಸಿದರು. ಒಮಿಕ್ರಾನ್ ಬಗ್ಗೆ ಆತಂಕಿತರಾಗಬೇಡಿ, ಆದರೆ ಎಚ್ಚರ ವಹಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ವಿಶ್ವದಾದ್ಯಂತ ಒಮಿಕ್ರಾನ್ ಸೋಂಕು ಹೆಚ್ಚಾಗುತ್ತಿದೆ ದೇಶದಲ್ಲಿ ಪರಿವರ್ತಿತ ಸೋಂಕು ನಮ್ಮನ್ನು ಕಾಡುತ್ತಿದೆ. ಕೊರೊನಾ ರೂಪಾಂತರಿಯಾಗಿ ಪರಿವರ್ತನೆ ಹೊಂದುತ್ತಿದೆ. ಹೆಚ್ಚುವರಿ ಐಸಿಯು, ಆಕ್ಸಿಜನ್ ಬೆಡ್‌ಗಳನ್ನು ಸಿದ್ಧಪಡಿಸಿದ್ದೇವೆ. ಜನವರಿ ೩ ರಿಂದ ೧೫-೧೮ ವರ್ಷದ ಮಕ್ಕಳಿಗೆ ವ್ಯಾಕ್ಸಿನೇಷನ್ಆರಂಭವಾಗಲಿದೆ. ಶಾಲಾ, ಕಾಲೇಜುಗಳಿಗೆ ತೆರಳಿ ಮಕ್ಕಳಿಗೆ ವ್ಯಾಕ್ಸಿನ್ ನೀಡುತ್ತೇವೆ. ಫ್ರಂಟ್‌ಲೈನ್ ವಾರಿಯರ್ಸ್ಗೆ ಜ.೧೦ರಿಂದ ಪ್ರಿಕಾಶನ್ ಡೋಸ್ (ಮುಂಜಾಗರೂಕತೆ ಲಸಿಕೆ) ನೀಡುತ್ತೇವೆ. ದೇಶದಲ್ಲಿ ಲಸಿಕಾಕರಣ ಪ್ರಕ್ರಿಯೆ ಆರಂಭವಾಗಿ ೧೧ ತಿಂಗಳಾಗಿದೆ. ಸಾಮೂಹಿಕ ಇಚ್ಛಾಶಕ್ತಿಯಿಂದ ಕೊರೊನಾ ವಿರುದ್ಧ ನಾವು ಹೋರಾಟ ಮುಂದುವರಿಸಬೇಕಿದೆ. ದೇಶದಲ್ಲಿ ಈವರೆಗೆ ೧೪೧ ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಅದರಲ್ಲೂ ಶೇ. ೬೧ರಷ್ಟು ಯುವಕರಿಗೆ ನೀಡಲಾಗಿದೆ. ಜನರನ್ನು ಆರೋಗ್ಯವಾಗಿ ಇರಿಸಲು ನಿರಂತರ ಶ್ರಮಿಸುತ್ತಿದ್ದೇವೆ. ೧೮ ಲಕ್ಷ ಐಸೋಲೇಷನ್ ಬೆಡ್, ೧.೪ ಲಕ್ಷ ಐಸಿಯು ಬೆಡ್, ೫ ಲಕ್ಷ ಆಕ್ಸಿಜನ್ ಬೆಡ್‌ಗಳನ್ನು ಸಿದ್ಧಪಡಿಸಿದ್ದೇವೆ. ೬೦ ವರ್ಷ ಮೇಲ್ಪಟ್ಟವರಿಗೆ, ಕೋಮಾರ್ಬಿಡಿಟಿ ಇದ್ದವರಿಗೂ ವೈದ್ಯರ ಸಲಹೆ ಮೇರೆಗೆ ಪ್ರಿಕಾಷನ್ ಲಸಿಕೆ ಆರಂಭಿಸಲಾಗುವುದು. ಕೊಲಸಿಕಾ ಅಭಿಯಾನಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ನರೇಂದ್ರ ಮೋದಿ ಹೇಳಿದರು. ಉತ್ತರಖಂಡ, ಗೋವಾ, ಹಿಮಾಚಲ ಪ್ರದೇಶದಲ್ಲಿ ಶೇ ೧೦೦ರಷ್ಟು ಲಸಿಕಾಕರಣವಾಗಿದೆ. ದೇಶದ ದೂರದೂರದ ಹಳ್ಳಿಗಳಲ್ಲಿಯೂ ಸಂಪೂರ್ಣ ಲಸಿಕಾಕರಣ ಆಗಿರುವ ಸುದ್ದಿ ಬಂದಾಗ ಮನಸ್ಸಿಗೆ ಸಂತೋಷವಾಗುತ್ತದೆ. ಒಂದು ತಂಡವಾಗಿ ನಾವು ಕೆಲಸ ಮಾಡಿದ್ದೇವೆ. ನಮ್ಮ ಅರೋಗ್ಯ ಸಿಬ್ಬಂದಿ ಬದ್ಧತೆಯಿಂದ ಕೆಲಸ ಮಾಡಿದ್ದಾರೆ. ದೇಶದಲ್ಲಿ ಮೂಗಿನಿಂದ ಕೊಡುವ ಲಸಿಕೆ ಮತ್ತು ಡಿಎನ್‌ಎ ಲಸಿಕಾಕರಣವೂ ಬೇಗನೇ ಆರಂಭವಾಗಲಿದೆ ಎಂದರು. ಕೊರೊನಾ ಇನ್ನೂ ಕೂಡ ನಮ್ಮಿಂದ ದೂರ ಆಗಿಲ್ಲ. ಕೊರೊನಾ ವಿರುದ್ಧ ಭಾರತದ ಹೋರಾಟ ನಿಲ್ಲವುದಿಲ್ಲ. ವಿಜ್ಞಾನಿಗಳು ಸಂಶೋಧನೆ ನಡೆಸುತ್ತಲೇ ಇದ್ದಾರೆ ಎಂದರು.

 

]

Translate »