ಮೈಸೂರು,ನ.11-ವಿಶ್ವದ ಅತೀ ದೊಡ್ಡ ಅಗರಬತ್ತಿ ಗಳ ತಯಾರಿಕಾ ಸಂಸ್ಥೆ ಮೈಸೂರಿನ ಎನ್.ರಂಗರಾವ್ ಅಂಡ್ ಸನ್ಸ್‍ನ ಸೈಕಲ್ ಪ್ಯೂರ್ ಅಗರಬತ್ತೀಸ್, ದೀಪಾವಳಿ ಹಬ್ಬದ ಅಂಗವಾಗಿ ವಿಶೇಷವಾದ ವೇದಿಕ್ ಸಂಪೂರ್ಣ ಲಕ್ಷ್ಮಿ ಪೂಜಾ ಪ್ಯಾಕ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ ಎಂದು ಸೈಕಲ್ ಪ್ಯೂರ್ ಅಗರಬತ್ತೀಸ್‍ನ ವ್ಯವಸ್ಥಾಪಕ ನಿರ್ದೇಶಕ ಅರ್ಜುನ್ ರಂಗಾ ತಿಳಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆಯನ್ನು ನೀಡಿರುವ ಅವರು, ದೇಶೀಯ ಬ್ರ್ಯಾಂಡ್ ಆಗಿರುವ ಸೈಕಲ್ ಪ್ಯೂರ್ ಅಗರಬತ್ತೀಸ್, ಈ ಹಬ್ಬದ ಸಂಭ್ರಮ ಸುರಕ್ಷಿತವಾಗಿರಲು ಪೂಜೆಗೆ ಅಗತ್ಯವಾದ ಎಲ್ಲಾ ಪರಿಕರಗಳನ್ನು ಈ ಪ್ಯಾಕ್‍ನಲ್ಲಿ ಸೇರ್ಪಡೆ ಮಾಡಿದೆ. ಈ ವೇದಿಕ್ ಸಂಪೂರ್ಣ ಲಕ್ಷ್ಮಿ ಪ್ಯಾಕ್, ಭಕ್ತರ ಎಲ್ಲಾ ರೀತಿಯ ಪೂಜಾ ಅಗತ್ಯಗಳನ್ನು ಪೂರೈಸುತ್ತದೆ ಮತ್ತು ಪರಿಪೂರ್ಣವಾದ ಪೂಜೆಯ ಅನುಭವವನ್ನು ನೀಡಲಿದೆ. ಮನೆಯಿಂದಲೇ ಪ್ರಾರ್ಥಿಸಿ ಎಂಬ ಸಂದೇಶದೊಂದಿಗೆ ಮನೆಯಲ್ಲಿಯೇ ಸುರಕ್ಷಿತ ವಾಗಿ ಹಬ್ಬ ಆಚರಣೆಯನ್ನು ಸಾಂಪ್ರದಾಯಿಕವಾಗಿ ಪೂರ್ಣ ಗೊಳಿಸುವ ಉಪಕ್ರಮವನ್ನು ಈ ಮೂಲಕ ಪರಿಚಯಿಸಿದೆ.
ಈ ಪೂಜಾಕಿಟ್‍ನಲ್ಲಿ ವೇದಿಕ್ ಶೈಲಿಯ ಐಶ್ವರ್ಯ ಲಕ್ಷ್ಮಿ, ಲಕ್ಷ್ಮಿ ವಿಗ್ರಹ, ಗಣೇಶ ಮೂರ್ತಿ, ತೋರಣ, ಕಪ್ ಸಾಂಬ್ರಾಣಿ, ಅಗರಬತ್ತಿ ಹೋಲ್ಡರ್, ದೀಪ, ಬೆಂಕಿಕಡ್ಡಿ ಪೊಟ್ಟಣ, ಗಣೇಶ ಮೂರ್ತಿಗೆ ಪೀಠ, ಹರಿದ್ರಾ, ಕುಂಕುಮ, ಗಂಧದಟ್ಯಾಬ್ಲೆ, ಧೂಪ, ಪೂಜಾಫಲ, ಗೆಜ್ಜೆ ವಸ್ತ್ರ ಸಣ್ಣದು, ಕಂಚಿಕಿ, ಯಜ್ಞಪವೀಠ, ವಿಶೇಷ ಅಗರಬತ್ತಿ, ವಿಶೇಷ ಕ್ಯಾಂಡಲ್, ಗಂಗಾಜಲ(ರೀಪ್ಯಾಕ್ಡ್), ಕಂಕಣ, ಕಿರುಹೊತ್ತಿಗೆ, ಆಡಿಯೋ ಸಿಡಿ ಇರಲಿವೆ. ಈ ಓಂ ಶಾಂತಿ ಸಂಪೂರ್ಣ ಲಕ್ಷ್ಮಿ ಪೂಜಾ ಪ್ಯಾಕ್‍ನ ಬೆಲೆ 1200 ರೂಪಾಯಿಗಳಾಗಿದ್ದು, ನಮ್ಮ ಮೈಸೂರು ಮತ್ತು ಬೆಂಗಳೂರಿನಲ್ಲಿರುವ ಸೈಕಲ್.ಇನ್ ಸ್ಟೋರ್‍ನಲ್ಲಿ ಖರೀದಿಸ ಬಹುದಾಗಿದೆ. ಇದಲ್ಲದೇ, ಸೈಕಲ್‍ನ ವೆಬ್‍ಸೈಟ್ ತಿತಿತಿ. ಛಿಥಿಛಿಟe.iಟಿನಲ್ಲಿಯೂ ಖರೀದಿಸಬಹುದಾಗಿದೆ.