೧೫ ದಿನದಲ್ಲಿ ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ಆರಂಭ
ಮೈಸೂರು

೧೫ ದಿನದಲ್ಲಿ ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ಆರಂಭ

April 20, 2022

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಘೋಷಣೆ

ಪಿ.ಪಟ್ಟಣದಲ್ಲಿ ತಾಲೂಕು ಉಪಕಚೇರಿ ನೂತನ ಕಟ್ಟಡ, ರಾಸು ಮೇಳ ಉದ್ಘಾಟನೆ

ಕ್ಷೀರ ಬ್ಯಾಂಕ್, ಡಿಸಿಸಿ ಬ್ಯಾಂಕ್ ವಿಲೀನ ಇಲ್ಲ

ಪಿರಿಯಾಪಟ್ಟಣದ ತಾಲೂಕು ಉಪ ಕಚೇರಿಯ ನೂತನ ಕಟ್ಟಡವನ್ನು ಮಂಗಳವಾರ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಉದ್ಘಾಟಿಸಿದರು. ಈ ವೇಳೆ ಸಂಸದ ಪ್ರತಾಪ್ ಸಿಂಹ, ಶಾಸಕರಾದ ಜಿ.ಟಿ.ದೇವೇಗೌಡ, ಕೆ.ಮಹದೇವ್, ಮೈಮುಲ್ ಅಧ್ಯಕ್ಷ ಪಿ.ಎಂ.ಪ್ರಸನ್ನ ಇನ್ನಿತರರಿದ್ದರು.

ಪಿರಿಯಾಪಟ್ಟಣ, ಏ.೧೯ (ವೀರೇಶ್)- `ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್’ ಇನ್ನು ೧೫ ದಿನಗಳಲ್ಲಿ ಕಾರ್ಯಾ ರಂಭಿಸುವ ಸಾಧ್ಯತೆ ಇದೆ ಎಂದು ಸಹಕಾರ ಸಚಿವರೂ ಆದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಇಂದಿಲ್ಲಿ ತಿಳಿಸಿದರು.

ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಪಿರಿಯಾಪಟ್ಟಣ ತಾಲೂಕು ಉಪ ಕಚೇರಿಯ ನೂತನ ಕಟ್ಟಡ ಹಾಗೂ ರಾಸು ಮೇಳವನ್ನು ಉದ್ಘಾಟಿಸಿ ಮಾತನಾಡಿ, ರೈತರ ಬಗ್ಗೆ ಅಪಾರ ಕಾಳಜಿ ಹೊಂದಿರುವ ಮುಖ್ಯಮಂತ್ರಿಗಳು `ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್’ ಸ್ಥಾಪಿಸುವುದಾಗಿ ಘೋಷಿಸಿದ್ದು, ಈಗಾಗಲೇ ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಲೋಗೋ ಬಿಡುಗಡೆ ಮಾಡಿದ್ದಾರೆ. ರಿಸರ್ವ್ ಬ್ಯಾಂಕ್ ಅನುಮತಿಯೊಂದಿಗೆ ಇನ್ನು ೧೫ ದಿನಗಳಲ್ಲಿ ಬ್ಯಾಂಕ್ ಕಾರ್ಯಾರಂಭಿಸಲಿದೆ ಎಂದರು.

ವಿಲೀನ ಮಾಡುವುದಿಲ್ಲ: ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್‌ಗಳನ್ನು ಜಿಲ್ಲಾ ಸಹಕಾರ ಕೇಂದ್ರ(ಡಿಸಿಸಿ) ಬ್ಯಾಂಕ್‌ನೊAದಿಗೆ ವಿಲೀನಗೊಳಿಸುವ ಪ್ರಮೇಯವೇ ಇಲ್ಲ. ಪ್ರತ್ಯೇಕವಾಗಿ ಕಾರ್ಯ ನಿರ್ವಹಿಸುವ ಕ್ಷೀರ ಸಮೃದ್ಧಿ ಬ್ಯಾಂಕ್‌ಗಳ ಮೂಲಕ ಹಾಲು ಉತ್ಪಾದಕರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಇದರಿಂದ ರೈತರ ಅಭಿವೃದ್ಧಿ ಜೊತೆಗೆ ಸಹಕಾರ ಕ್ಷೇತ್ರದ ಬೆಳವಣ ಗೆಗೂ ನೆರವಾಗುತ್ತದೆ ಎಂದು ತಿಳಿಸಿದರು.

`ಯಶಸ್ವಿನಿ’ಗೂ ಚಾಲನೆ: ರಾಜ್ಯ ಪ್ರವಾಸದ ವೇಳೆ ಎಲ್ಲೆಡೆ ಸಹಕಾರಿಗಳು ಯಶಸ್ವಿನಿ ಯೋಜನೆ ಜಾರಿಗೆ ಬೇಡಿಕೆ ಇಟ್ಟಿದ್ದರು. ಈ ನಿಟ್ಟಿನಲ್ಲಿ ೨-೩ ವರ್ಷದಿಂದ ಪ್ರಯತ್ನಿಸಲಾಗಿತ್ತು. ಇದೀಗ `ಯಶಸ್ವಿನಿ’ ಮರುಜಾರಿ ಮಾಡುವುದಾಗಿ ಮುಖ್ಯಮಂತ್ರಿ ಬೊಮ್ಮಾಯಿ ಘೋಷಿ ಸಿದ್ದು, ಕೇಂದ್ರ ಸಚಿವ ಅಮಿತ್ ಶಾ ಅವರು ಈಗಾಗಲೇ ವಿಧ್ಯುಕ್ತ ಚಾಲನೆ ನೀಡಿದ್ದಾರೆ. ಇನ್ನು ೧೫-೨೦ ದಿನಗಳಲ್ಲಿ ರಾಜ್ಯದಲ್ಲಿ ಮತ್ತೆ `ಯಶಸ್ವಿನಿ’ ಯೋಜನೆ ಜಾರಿಯಾಗ ಲಿದ್ದು, ರೈತರು, ಸಹಕಾರಿಗಳ ಆರೋಗ್ಯ ಕವಚವಾಗಿ ರಲಿದೆ ಎಂದು ಹೇಳಿದರು.

ಕೆರೆ ತುಂಬಿಸುವ ಪ್ರಯತ್ನ: ಪಿರಿಯಾಪಟ್ಟಣ ಭಾಗದಲ್ಲಿ ಕೆರೆ ತುಂಬಿಸುವ ಕಾರ್ಯಕ್ಕೆ ಪ್ರಾಮಾಣ ಕ ಪ್ರಯತ್ನ ಮಾಡಲಾಗುವುದು. ಈಗಾಗಲೇ ಶೇ.೭೦ರಷ್ಟು ಭಾಗದ ಕೆರೆಗಳಿಗೆ ನೀರು ತುಂಬಿಸಿದ್ದು ಉಳಿದ ಸ್ಥಳಗಳಲ್ಲಿರುವ ಅಡತಡೆ ನಿವಾರಣೆಗೆ ಕ್ರಮ ಕೈಗೊಳ್ಳಲಾಗು ವುದು. ಈ ಭಾಗದಲ್ಲಿ ಪಶು ಆಹಾರ ಉತ್ಪಾದನೆ ಘಟಕ ಆರಂಭಕ್ಕೆ ೧೦ ಎಕರೆ ಜಾಗ ಖರೀದಿಸಲು ಆದೇಶಿಸಲಾಗಿದ್ದು, ಇದರಿಂದ ಈ ಭಾಗದ ರೈತರಿಗೆ ಅನುಕೂಲ ವಾಗುವುದರ ಜೊತೆಗೆ ಸ್ಥಳೀಯ ಯುವಕರಿಗೆ ಉದ್ಯೋಗವೂ ಸಿಗಲಿದೆ ಎಂದರು. ರಾಜ್ಯದಲ್ಲಿ ೧೫ ಹಾಲು ಒಕ್ಕೂಟಗಳಿದ್ದು, ಇವುಗಳಲ್ಲಿ ಪ್ರಥಮವಾಗಿ ಪಿರಿಯಾ ಪಟ್ಟಣದಲ್ಲಿ ಪಶು ಆಹಾರ ತಯಾರಿಕಾ ಘಟಕ ಸ್ಥಾಪನೆಯಾಗುವುದು ಹೆಮ್ಮೆಯ ಸಂಗತಿ. ಈ ಘಟಕದಿಂದ ಮೆಕ್ಕೆ ಜೋಳ, ದ್ವಿದಳ ಧಾನ್ಯಗಳಿಗೆ ಬೇಡಿಕೆ ಹೆಚ್ಚುವುದರಿಂದ ರೈತರ ಆರ್ಥಿಕ ಸುಧಾರಣೆಗೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.

ನಮ್ಮ ಸರ್ಕಾರ ಅಭಿವೃದ್ಧಿ ವಿಚಾರದಲ್ಲಿ ಪಕ್ಷ ಬೇಧ ಮಾಡಿಲ್ಲ. ಕಾಂಗ್ರೆಸ್ ಶಾಸಕರಿರಲಿ, ಜೆಡಿಎಸ್‌ನವರಾಗಲೀ ಎಲ್ಲರಿಗೂ ಒಂದೇ ರೀತಿಯಲ್ಲಿ ಬೆಂಬಲ ನೀಡಿದೆ. ಮೈಸೂರು ಉಸ್ತುವಾರಿ ಸಚಿವನಾಗಿ ಪಿರಿಯಾಪಟ್ಟಣ ಕ್ಷೇತ್ರದ ಅಭಿವೃದ್ಧಿಗೂ ನಾನು ಪ್ರಾಮಾಣ ಕ ಪ್ರಯತ್ನ ಮಾಡಿದ್ದೇನೆ ಎಂದು ಇದೇ ವೇಳೆ ಹೇಳಿದರು.

ಅಭಿವೃದ್ಧಿ ಪಥ: ಸಂಸದ ಪ್ರತಾಪ್ ಸಿಂಹ ಮಾತನಾಡಿ, ಪಿರಿಯಾಪಟ್ಟಣದಲ್ಲಿ ಮುಂದಿನ ದಿನಗಳಲ್ಲಿ ಅತಿ ಹೆಚ್ಚು ಅಭಿವೃದ್ಧಿ ಕಾರ್ಯಗಳಾಗಲಿವೆ. ೪ ಪಥದ ರಸ್ತೆ ಕಾಮಗಾರಿಗೆ ಶೀಘ್ರ ಚಾಲನೆ ಸಿಗಲಿದ್ದು, ಮಸಣ ಕಮ್ಮ ದೇವಸ್ಥಾನದ ಸರ್ವಾಂಗೀಣ ಅಭಿವೃದ್ಧಿಗೆ ೫೦ ಲಕ್ಷ ರೂ. ಬಿಡುಗಡೆಯಾಗಿದೆ ಎಂದು ತಿಳಿಸಿದರು.

ಹೈನುಗಾರಿಕೆ ಮಾಡಿ: ಶಾಸಕ ಕೆ.ಮಹದೇವ್ ಮಾತನಾಡಿ, ತಾಲೂಕಿನಲ್ಲಿ ಅತೀ ಹೆಚ್ಚು ರೈತರು ಹೊಗೆಸೊಪುö್ಪ ಬೆಳೆಯನ್ನು ಅವಲಂಭಿಸಿದ್ದಾರೆ. ರೈತರು ಹೈನುಗಾರಿಕೆಗೆ ಪ್ರಾಶಸ್ತ÷್ಯ ನೀಡಿದ್ದಲ್ಲಿ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ಅನೇಕ ಕುಟುಂಬಗಳು ಇಂದಿಗೂ ಹೈನುಗಾರಿಕೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಕೋವಿಡ್ ವಿಷಮ ಪರಿಸ್ಥಿತಿಯ ಲ್ಲಿಯೂ ಮೈಸೂರು ಹಾಲು ಒಕ್ಕೂಟ ರೈತರ ಹಿತ ಕಾದಿದೆ ಎಂದು ಬಣ ್ಣಸಿದರು.

ಸಾಲಕ್ಕೆ ಮನವಿ: ಮೈಸೂರು ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಪಿ.ಎಂ.ಪ್ರಸನ್ನ ಮಾತನಾಡಿ, ಎಸ್‌ಬಿಐ ಸಹಕಾರದಿಂದ ಹೈನುಗಾರಿಕೆ ಮಾಡಲಿಚ್ಛಿಸುವವರಿಗೆ ೫ ಸಾವಿರ ರಾಸುಗಳಿಗೆ ಸಾಲ ನೀಡಲು ಮನವಿ ಮಾಡಲಾಗಿದೆ. ಈ ಹಿಂದೆ ತಾಲೂಕಿನಲ್ಲಿ ೪೦ ಸಾವಿರ ಲೀಟರ್ ಹಾಲು ಉತ್ಪಾದನೆಯಾಗುತ್ತಿತ್ತು. ಆದರೆ ಪ್ರಸ್ತುತ ೧ ಲಕ್ಷ ಲೀಟರ್‌ಗೂ ಅಧಿಕ ಹಾಲು ಉತ್ಪಾದನೆಯಾಗುತ್ತಿದ್ದು, ಇದನ್ನು ೨ ಲಕ್ಷಕ್ಕೆ ಮುಟ್ಟಿಸುವ ಗುರಿ ನಮ್ಮದಾಗಿದೆ. ಈ ನಿಟ್ಟಿನಲ್ಲಿ ೭೦ ರಿಂದ ೮೦ ಹಾಲು ಉತ್ಪಾದಕರ ಸಂಘಗಳು, ೪೨ ಹಾಲು ಉತ್ಪಾದಕ ಕೇಂದ್ರಗಳು ಶ್ರಮಿಸುತ್ತಿದೆ. ಮೈಮುಲ್‌ನಿಂದ ಯುಎಸ್ಬಿ ಬ್ಯಾಂಕ್ ತೆರೆಯುವ ಯೋಜನೆ ಇದೆ. ತಾಲೂಕಿನಲ್ಲಿಯೂ ಪಶು ಆಹಾರ ಘಟಕ ಸ್ಥಾಪನೆ ಮಾಡುವ ಜೊತೆಗೆ ೨೫೦ ವಿದ್ಯಾರ್ಥಿನಿಯರ ವಾಸ್ತವ್ಯಕ್ಕೆ ವಿದ್ಯಾರ್ಥಿ ನಿಲಯ ನಿರ್ಮಿಸುವ ಗುರಿ ಹೊಂದಿದ್ದೇವೆ. ಈ ಕಾರ್ಯಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸಂಸದರು ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ ಎಂದು ತಿಳಿಸಿದರು.

ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡರು ಮಾತನಾಡಿದರು. ಇದೇ ವೇಳೆ ಹಾಲು ಕರೆಯುವ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಸ್ತು ಪ್ರದರ್ಶನ, ಆರೋಗ್ಯ ಇಲಾಖೆ ವತಿಯಿಂದ ಉಚಿತ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳ ಲಾಗಿತ್ತು. ಕಾರ್ಯಕ್ರಮದಲ್ಲಿ ಮೈಮುಲ್ ನಿರ್ದೇಶಕರಾದ ಸೋಮಶೇಖರ್, ಮಹೇಶ್, ಈರೇಗೌಡ, ಓಂಪ್ರಕಾಶ್, ಕುಮಾರ್, ದಾಕ್ಷಾಯಿಣ , ಓಂಪ್ರಕಾಶ್, ಉಮಾ ಶಂಕರ್, ಲೀಲಾ, ಶಿವಗಾಮಿ, ರಾಜೇಂದ್ರ, ಪುರಸಭೆ ಅಧ್ಯಕ್ಷೆ ನಾಗರತ್ನ, ಸದಸ್ಯರಾದ ಮಂಜುನಾಥ ಸಿಂಗ್, ಪ್ರಕಾಶ್‌ಸಿಂಗ್, ಮಹೇಶ್, ಪಿ.ಸಿ.ಕೃಷ್ಣ, ನಿರಂಜನ್, ಆಶಾ, ಪುಷ್ಪಾ, ಭಾರತಿ, ನಳಿನಿ, ಪ್ರಸಾದ್, ಶಿವರಾಮ್, ಅಣ್ಣಯ್ಯ ಶೆಟ್ಟಿ, ಆರ್.ಟಿ.ಸತೀಶ್, ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ.ಬಿ.ಎನ್.ಷಡಕ್ಷರಮೂರ್ತಿ, ವಿಜಯಕುಮಾರ್ ಮತ್ತಿತರರಿದ್ದರು.

Translate »