ಮೈಸೂರಿಂದ ಹಾರಾಡುವ ವಿಮಾನಗಳ ಸೀಟು ಭರ್ತಿ
ಮೈಸೂರು

ಮೈಸೂರಿಂದ ಹಾರಾಡುವ ವಿಮಾನಗಳ ಸೀಟು ಭರ್ತಿ

April 21, 2022

ಮಾರ್ಚ್ ತಿಂಗಳಲ್ಲಿ ೧೫,೦೦೦ ಮಂದಿ ವಿಮಾನ ಪ್ರಯಾಣ

ಮೇ ೩ರಿಂದ ಮೈಸೂರಿಂದ ಹುಬ್ಬಳ್ಳಿಗೆ ವಿಮಾನ ಸೌಕರ್ಯ

ಮೈಸೂರು, ಏ.೨೦(ಆರ್‌ಕೆ)- ಕೋವಿಡ್ ಸಂಕಷ್ಟ ಪರಿಸ್ಥಿತಿಯಿಂದಾಗಿ ಇಳಿಮುಖವಾಗಿದ್ದ ಮೈಸೂರು ವಿಮಾನ ನಿಲ್ದಾಣ ಚಟುವಟಿಕೆಗಳು ಇದೀಗ ಗರಿಗೆದರಿವೆ.
ಕೋವಿಡ್ ಪ್ರಕರಣಗಳು ಸಂಪೂರ್ಣವಾಗಿ ಕಡಿಮೆ ಯಾದ ನಂತರ ಸಾಲು ಸಾಲು ರಜೆಗಳು, ಬಹುತೇಕ ಪರೀಕ್ಷೆಗಳು ಮುಗಿದಿರುವ ಕಾರಣ ಪ್ರವಾಸ ಕೈಗೊಳ್ಳು ತ್ತಿರುವವರು ಮೈಸೂರಿನಿಂದ ಪ್ರವಾಸಿ ಕೇಂದ್ರಗಳಿಗೆ ನೇರವಾಗಿ ವಿಮಾನದಲ್ಲಿ ಪ್ರಯಾಣ ಸಲಾರಂಭಿಸಿದ್ದಾರೆ.

ಪರಿಣಾಮ ಗೋವಾ, ಹೈದರಾಬಾದ್, ಚೆನ್ನೆöÊ ಸೇರಿದಂತೆ ವಿವಿಧ ನಗರಗಳಿಗೆ ತೆರಳುವ ವಿಮಾನ ಗಳಿಗೆ ಭಾರೀ ಬೇಡಿಕೆ ಇದ್ದು, ಟಿಕೆಟ್‌ಗಳನ್ನು ಮುಂಗಡ ವಾಗಿ ಬುಕ್ ಮಾಡಲಾಗಿದೆ ಎಂದು ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ಆರ್. ಮಂಜುನಾಥ ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

ಗೋವಾ, ಹೈದರಾಬಾದ್, ಚೆನ್ನೆöÊನಂತಹ ನಗರ ಗಳಿಗೆ ಹೋಗಲು ಪ್ರವಾಸಿಗರಿಂದ ಭಾರೀ ಬೇಡಿಕೆ ಬರುತ್ತಿದ್ದು, ಹೆಚ್ಚುವರಿ ವಿಮಾನಗಳನ್ನು ವ್ಯವಸ್ಥೆ ಮಾಡಿ ಎಂದು ಒತ್ತಾಯ ಕೇಳಿಬರುತ್ತಿದೆ. ಈ ಸ್ಥಳಗಳು ಅತೀ ದೂರವಿರುವುದರಿಂದ ಕಾರಿನಲ್ಲಿ ಪ್ರಯಾಣ ಸಲು ಹೆಚ್ಚು ಸಮಯ ಹಾಗೂ ಆಯಾಸವಾಗುತ್ತದೆ. ಹಣ ಖರ್ಚಾ ದರೂ ಸರಿ ವಿಮಾನದಲ್ಲೇ ಪ್ರಯಾಣ ಸಬೇಕೆಂಬ ಒತ್ತಾಯ ಮಕ್ಕಳಿಂದಲೂ ಪೋಷಕರಿಗೆ ಬರುತ್ತಿರು ವುದು ವಿಮಾನಗಳಲ್ಲಿ ಸೀಟುಗಳು ಭರ್ತಿಯಾಗಲು ಕಾರಣ ಎಂದು ತಿಳಿಸಿದರು.

ಕಳೆದ ತಿಂಗಳು ೧೫,೦೦೦ ಮಂದಿ ವಿಮಾನಗಳಲ್ಲಿ ಪ್ರಯಾಣ ಸಿದ್ದಾರೆ. ಈ ತಿಂಗಳು(ಏಪ್ರಿಲ್) ಸಹ ಪ್ರಯಾ ಣ ಕರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ವಿಶೇಷ ವಾಗಿ ಗೋವಾ, ಚೆನ್ನೆöÊ, ಹೈದರಾಬಾದ್ ಹಾಗೂ ಬೆಂಗಳೂರಿಗೆ ಎಲ್ಲಾ ವಿಮಾನಗಳಲ್ಲೂ ಶೇ.೧೦೦ರಷ್ಟು ಸೀಟುಗಳು ಭರ್ತಿಯಾಗುತ್ತಿರುವುದರಿಂದ ಮೈಸೂರು ವಿಮಾನ ನಿಲ್ದಾಣವು ದಿನಪೂರ್ತಿ ಚಟುವಟಿಕೆ ಯಿಂದ ಕೂಡಿದೆ. ನಿತ್ಯ ೬ ಮಾರ್ಗಗಳಲ್ಲಿ ವಿಮಾನ ಗಳು ಹಾರಾಡುತ್ತಿದ್ದು, ೧೨ ಟ್ರಿಪ್ ಮಾಡುತ್ತಿವೆ. ಬೆಂಗ ಳೂರು, ಕೊಚ್ಚಿ, ಚೆನ್ನೆöÊ, ಹೈದರಾಬಾದ್, ಗೋವಾಕ್ಕೆ ನೇರ ಸಂಪರ್ಕವಿದೆ. ಹೈದರಾಬಾದ್, ಗೋವಾ ಮತ್ತು ಚೆನ್ನೆöÊಗೆ ಅತೀ ಹೆಚ್ಚು ಬೇಡಿಕೆ ಇರುವುದರಿಂದ ಹೆಚ್ಚುವರಿ ವಿಮಾನಗಳ ಸಂಚಾರಕ್ಕೆ ಸಂಬAಧಪಟ್ಟ ಸಂಸ್ಥೆಗಳೊAದಿಗೆ ಮಾತುಕತೆ ಮಾಡಲಾಗುತ್ತಿದೆ ಎಂದು ಮಂಜುನಾಥ್ ತಿಳಿಸಿದ್ದಾರೆ.

ಮೇ೩ರಿಂದ ಹುಬ್ಬಳ್ಳಿಗೆ: ಮೈಸೂರು ಮತ್ತು ಹುಬ್ಬಳ್ಳಿ ನಡುವೆ ಮೇ ೩ರಿಂದ ಇಂಡಿಗೋ ವಿಮಾನ ಸೇವೆ ಆರಂಭವಾಗಲಿದೆ. ವಾರದಲ್ಲಿ ೩ ದಿನ (ಮಂಗಳವಾರ, ಗುರುವಾರ, ಶನಿವಾರ) ಹಾರಾಟ ನಡೆಸುವ ಇಂಡಿಗೋ ಹುಬ್ಬಳ್ಳಿಯಿಂದ ಸಂಜೆ ೪.೫೫ಗಂಟೆಗೆ ಹೊರಟು ೬.೦೫ಕ್ಕೆ ಮೈಸೂರು ತಲುಪಲಿದೆ. ಮೈಸೂರಿನಿಂದ ಸಂಜೆ ೬.೨೫ಕ್ಕೆ ಹೊರಟು ರಾತ್ರಿ ೭.೪೦ಕ್ಕೆ ಹುಬ್ಬಳ್ಳಿ ನಗರ ತಲುಪಲಿದೆ ಎಂದು ನಿರ್ದೇಶಕರು ತಿಳಿಸಿದರು.

ಮಂಗಳೂರು ಬೆಳಗಾವಿಗೆ: ಕೋವಿಡ್ ನಿರ್ಬಂಧ ದಿಂದಾಗಿ ಸ್ಥಗಿತಗೊಂಡಿದ್ದ ಬೆಳಗಾವಿ ಮತ್ತು ಮಂಗ ಳೂರಿಗೆ ಮೈಸೂರಿನಿಂದ ವಿಮಾನ ಸಂಚಾರವನ್ನು ಮತ್ತೆ ಆರಂಭಿಸಲಾಗುವುದು. ಈ ಸ್ಥಳಗಳಿಗೆ ಬೇಡಿಕೆ ಕೇಳಿ ಬರುತ್ತಿರುವುದರಿಂದ ಸ್ಟಾರ್ ಏರ್‌ವೇಸ್ ಸಂಸ್ಥೆ ಯೊಂದಿಗೆ ಮಾತನಾಡುತ್ತಿದ್ದೇವೆ. ಅದು ಸಾಕಾರ ಗೊಂಡಲ್ಲಿ ಗೋವಾಗೂ ಮತ್ತಷ್ಟು ಮಂದಿ ಪ್ರಯಾ ಣ ಸಬಹುದು ಎಂದರು. ಪ್ರತಿದಿನ ಸಂಚರಿಸುವ ವಿಮಾನ ಗಳಿಗೆ ಎಲ್ಲಾ ಟ್ರಿಪ್‌ಗಳಲ್ಲೂ ಶೇ.೧೦೦ರಷ್ಟು ಸೀಟುಗಳು ಭರ್ತಿಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ರನ್‌ವೇ ವಿಸ್ತರಣೆಯಾದಲ್ಲಿ ಮತ್ತಷ್ಟು ದೊಡ್ಡ ದೊಡ್ಡ ವಿಮಾನ ಗಳೂ ದೇಶದ ವಿವಿಧ ಭಾಗಗಳಿಗೆ ಸಂಪರ್ಕ ಕಲ್ಪಿಸಲು ಅವಕಾಶವಿದೆ ಎಂದು ಮಂಜುನಾಥ ತಿಳಿಸಿದರು.

 

Translate »