ಪಾರಂಪರಿಕ ತಜ್ಞರ ಸಮಿತಿ ಪುನಃ ರಚನೆಗೆ ಯದುವೀರ್ ಒತ್ತಾಯ
ಮೈಸೂರು

ಪಾರಂಪರಿಕ ತಜ್ಞರ ಸಮಿತಿ ಪುನಃ ರಚನೆಗೆ ಯದುವೀರ್ ಒತ್ತಾಯ

April 21, 2022

೧೦೦ ವರ್ಷ ದಾಟಿದೆ ಎಂದು ಅರಮನೆ ಕೆಡವಲು ಸಾಧ್ಯನಾ?
ಮೈಸೂರು: ಮೈಸೂರಿನ ಪಾರಂ ಪರಿಕ ಕಟ್ಟಡಗಳಾದ ದೇವರಾಜ ಮಾರು ಕಟ್ಟೆ ಹಾಗೂ ಲ್ಯಾನ್ಸ್ಡೌನ್ ಕಟ್ಟಡ ನೆಲಸಮಗೊಳಿಸಲು ವರದಿ ನೀಡಿರುವ ಪಾರಂಪರಿಕ ತಜ್ಞರ ಸಮಿತಿ ಅವೈಜ್ಞಾ ನಿಕವಾಗಿದ್ದು, ಅನುಭವವುಳ್ಳ ನೈಜ ತಜ್ಞರ ಒಳಗೊಂಡ ಸಮಿತಿಯನ್ನು ಪುನರ್ ರಚಿಸಬೇಕು ಎಂದು ರಾಜ ವಂಶಸ್ಥ ಯದುವೀರ ಕೃಷ್ಣದತ್ತ ಚಾಮ ರಾಜ ಒಡೆಯರ್ ಅಭಿಪ್ರಾಯಪಟ್ಟಿದ್ದಾರೆ.

ಮೈಸೂರಲ್ಲಿ ಬುಧವಾರ ಪತ್ರಕರ್ತ ರೊಂದಿಗೆ ಮಾತನಾಡಿದ ಅವರು, ಪಾರಂಪರಿಕ ಕಟ್ಟಡಗಳಾದ ದೇವ ರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್ ಡೌನ್ ಕಟ್ಟಡವನ್ನು ನೆಲಸಮ ಮಾಡಿ, ಪುನರ್ ನಿರ್ಮಾಣ ಮಾಡುವಂತೆ ಪಾರಂಪರಿಕ ಸಮಿತಿ ವರದಿ ನೀಡಿದೆ ಎಂದು ಸರ್ಕಾರದ ಕಡೆಯಿಂದ ಮಾಹಿತಿ ಲಭ್ಯವಾಗಿದೆ. ಆ ಸಮಿತಿಯಲ್ಲಿ ನಿಜ ವಾದ ಪಾರಂಪರಿಕ ತಜ್ಞರು ಇಲ್ಲದಿ ರುವುದು ನಮ್ಮ ಗಮನಕ್ಕೆ ಬಂದಿದೆ. ತಜ್ಞರ ಅನುಪಸ್ಥಿತಿಯಲ್ಲಿ ಕೈಗೊಂಡಿ ರುವ ತೀರ್ಮಾನವನ್ನು ಒಪ್ಪಲು ಸಾಧ್ಯ ವಿಲ್ಲ. ಮೈಸೂರಲ್ಲಿ ಪ್ರೊ.ರಂಗರಾಜು ಹಾಗೂ ಗುಂಡೂರಾವ್ ಇಬ್ಬರೇ ಪಾರಂ ಪರಿಕ ತಜ್ಞರು.

ಕಟ್ಟಡ ನೆಲಸಮಕ್ಕೆ ಸಲಹೆ ನೀಡಿರುವ ಸಮಿತಿ ಅವೈಜ್ಞಾನಿಕ ಎಂಬುದು ನಮ್ಮ ಭಾವನೆ. ಈ ಹಿನ್ನೆಲೆಯಲ್ಲಿ ನೈಜ ಹಾಗೂ ಪಾರಂಪರಿಕ ಕಟ್ಟಡಗಳನ್ನು ಉಳಿಸಲು ಅಗತ್ಯವಿರುವ ಸಲಹೆಗಳನ್ನು ಕೊಡಲು ಅನುಭವ ಹೊಂದಿದ ತಜ್ಞರು ಇರುವ ಪಾರಂಪರಿಕ ಸಮಿತಿಯನ್ನು ರಚಿಸಬೇಕು ಎಂದು ಆಗ್ರಹಿಸಿದರು. ಅಭಿವೃದ್ಧಿ ನೆಪದಲ್ಲಿ ಐತಿಹಾಸಿಕ ಕಟ್ಟಡಗಳನ್ನು ನಾಶ ಮಾಡುವುದು ಬೇಡ. ಪ್ರತಿಯೊಬ್ಬರ ಹೃದಯಕ್ಕೂ ದೇವರಾಜ ಮಾರುಕಟ್ಟೆ ಹತ್ತಿರವಾಗಿದೆ. ಈ ಹಿಂದೆ ಈ ಎರಡು ಕಟ್ಟಡಗಳನ್ನು ದುರಸ್ತಿ ಮಾಡಿದರೆ ಮುಂದಿನ ೧೦೦ ವರ್ಷ ಬಾಳಿಕೆ ಬರುತ್ತದೆ ಎಂದು ತಜ್ಞರು ಹೇಳಿದ್ದರು. ಅವರು ಹೇಳಿರುವಂತೆ ಕಟ್ಟಡಗಳ ಸಂರಕ್ಷಣೆಗೆ ಅವಕಾಶ ವಿದೆ. ನಮ್ಮ ಪೂರ್ವಜರು ಕಟ್ಟಿದ ಪಾರಂಪರಿಕ ಕಟ್ಟಡಗಳನ್ನು ನೋಡಿ ನಾವು ಬೆಳೆದಿದ್ದೇವೆ. ಇದೇ ನಮ್ಮ ಮೈಸೂರಿನ ಕಲೆ. ಇದನ್ನು ಮುಂದಿನ ಪೀಳಿಗೆಗೆ ಉಳಿಸಬೇಕು. ಈ ಪರಂಪರೆ ಯನ್ನು ಕಾಪಾಡದಿದ್ದರೆ ಮೈಸೂರಿನ ಐಡೆಂಟಿಟಿ ಉಳಿಯಲ್ಲ ಎಂದು ನುಡಿದರು.

ಮೈಸೂರಿನ ನಾಗರಿಕ ಸಮುದಾಯ ಆರಂಭವಾಗಿದ್ದು ದೇವರಾಜ ಮಾರುಕಟ್ಟೆಯಿಂದ. ಸರ್ಕಾರ, ಸ್ಥಳೀಯ ಆಡಳಿತಗಳು ಈ ಬಗ್ಗೆ ಸರಿಯಾದ ಕ್ರಮಗಳನ್ನು ಕೈಗೊಳ್ಳುವ ವಿಶ್ವಾಸವಿದೆ. ಪಾರಂಪರಿಕ ಕಟ್ಟಡಗಳ ಉಳಿವಿಗೆ ಸದಾ ನನ್ನ ಬೆಂಬಲವಿದೆ. ನೂರಕ್ಕೆ ನೂರು ನಾನು ನಿಮ್ಮ ಜೊತೆ ಇರುತ್ತೇನೆ ಎಂದು ಭರವಸೆ ನೀಡಿದರು. ಯಾವುದೇ ಕಟ್ಟಡಕ್ಕೆ ಇಂತಿಷ್ಟೇ ಕಾಲಮಿತಿ ಇರುತ್ತದೆ ಎನ್ನುವುದಾದರೆ ಮೈಸೂರು ಅರಮನೆ ಕಟ್ಟಿ ೧೦೦ ವರ್ಷಗಳ ಮೇಲಾಗಿದೆ. ಕಾಲಾವಧಿ ಮುಂದಿಟ್ಟುಕೊAಡು ಅರಮನೆ ಕೆಡವಿ ಮತ್ತೊಂದು ಅರಮನೆ ಕಟ್ಟಲು ಆಗುತ್ತಾ?. ಮೈಸೂರಿನ ಸಂಸ್ಕöÈತಿ ಪಾರಂಪರಿಕ ಕಟ್ಟಡಗಳ ಜತೆ ಬೆರೆತಿದೆ. ನೂರು ವರ್ಷಗಳು ಕಳೆದಿವೆ ಎಂದು ಕಟ್ಟಡಗಳನ್ನು ಒಡೆಯುತ್ತಾ ಹೋದರೆ ಪಾರಂಪರಿಕತೆ ಎಲ್ಲಿ ಉಳಿಯುತ್ತದೆ. ಒಂದು ಪಾರಂಪರಿಕ ಕಟ್ಟಡ ಕೆಡವಿದ ಮೇಲೆ ಅದೇ ಮಾದರಿಯಲ್ಲಿ ನಿರ್ಮಿಸಿದರೂ ಕೂಡ ಆ ಕಟ್ಟಡಕ್ಕೆ ಹಳೆಯ ಇತಿಹಾಸ ಬರುವುದಿಲ್ಲ. ಪಾರಂಪರಿಕ ಕಟ್ಟಡ ಉಳಿಸುವ ಹೊಸ ತಜ್ಞರ ಸಮಿತಿ ರಚನೆ ಮಾಡಬೇಕು. ಜನರ ಅಭಿಪ್ರಾಯಗಳು, ಭಾವನೆಗಳಿಗೆ ಸ್ಪಂದಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಸರ್ಕಾರ ಈ ನಿಟ್ಟಿನಲ್ಲಿ ಜನರ ಭಾವನೆಗಳಿಗೆ ಸ್ಪಂದಿಸಿ ನೆಲಸಮಗೊಳಿಸುವ ತೀರ್ಮಾನ ಕೈಬಿಡುವ ವಿಶ್ವಾಸವಿದೆ ಎಂದರು.

ರಾಜಮನೆತನದ ಖಾಸಗಿ ಆಸ್ತಿಗಳು ಹಾಗೂ ಪಾರಂಪರಿಕ ಕಟ್ಟಡಗಳನ್ನು ರಕ್ಷಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಆದರೆ, ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್ಡೌನ್ ಕಟ್ಟಡ ಸಾರ್ವಜನಿಕರ ಸ್ವತ್ತಾಗಿವೆ. ಅರಮನೆಯ ಆಸ್ತಿ ವಿಚಾರಕ್ಕೂ-ಸಾರ್ವಜನಿಕರ ಸ್ವತ್ತಿನ ಪಾರಂಪರಿಕ ಕಟ್ಟಡಗಳಿಗೂ ಸಂಬAಧ ಕಲ್ಪಿಸುವುದು ಬೇಡ. ದೇವರಾಜ ಮಾರುಕಟ್ಟೆ ಯನ್ನು ನಮ್ಮ ವ್ಯಾಪ್ತಿಗೆ ಕೊಟ್ಟರೆ ನಾವೇ ಪುನಶ್ಚೇತನ ಮಾಡುತ್ತೇವೆಂಬ ಪ್ರಮೋದಾದೇವಿ ಒಡೆಯರ್ ಅವರ ಹೇಳಿಕೆಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಅದನ್ನು ಅವರ ಬಳಿಯೇ ಕೇಳಿ. ನಾನು ಪ್ರತಿಕ್ರಿಯಿಸಲ್ಲ ಎಂದು ಸ್ಪಷ್ಟಪಡಿಸಿದರು.

Translate »