ನೆಲಸಮ ವಿರೋಧಿಸಿ ದೇವರಾಜ ಮಾರುಕಟ್ಟೆ ವ್ಯಾಪಾರಿಗಳ ಪ್ರತಿಭಟನೆ
Uncategorized

ನೆಲಸಮ ವಿರೋಧಿಸಿ ದೇವರಾಜ ಮಾರುಕಟ್ಟೆ ವ್ಯಾಪಾರಿಗಳ ಪ್ರತಿಭಟನೆ

April 21, 2022

ಮಧ್ಯಾಹ್ನ ೨ ಗಂಟೆವರೆಗೂ ಎಲ್ಲಾ ಅಂಗಡಿ-ಮುAಗಟ್ಟುಗಳು ಬಂದ್
ರಾಜವAಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಬೆಂಬಲ

ಮೆರವಣ ಗೆ ಮೂಲಕ ಡಿಸಿ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಕೆ

ದಾರಿಯುದ್ದಕ್ಕೂ ಘೋಷಣೆ ಕೂಗಿ ಒಗ್ಗಟ್ಟು ಪ್ರದರ್ಶಿಸಿದ ವರ್ತಕರು

ದೇವರಾಜ ಮಾರುಕಟ್ಟೆ ಉಳಿಸಿ ಸಂರಕ್ಷಿಸುವAತೆ ಆಗ್ರಹಿಸಿ ಮಾರುಕಟ್ಟೆ ವಹಿವಾಟು ಬಂದ್ ಮಾಡಿ ಮೈಸೂರಲ್ಲಿ ನಡೆದ ಬೃಹತ್ ಪ್ರತಿಭಟನಾ ಮೆರವಣ ಗೆಗೆ ರಾಜಮನೆತನದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಲನೆ ನೀಡಿದರು. ಮೆರವಣ ಗೆಯಲ್ಲಿ ಪಾಲ್ಗೊಂಡಿದ್ದ ಬಾಡಿಗೆದಾರರು, ವ್ಯಾಪಾರಿಗಳನ್ನು ಚಿತ್ರದಲ್ಲಿ ಕಾಣಬಹುದು.

ಮೈಸೂರು,ಏ.೨೦ (ಎಂಟಿವೈ)-ಪಾರAಪರಿಕ ದೇವರಾಜ ಮಾರುಕಟ್ಟೆ ಕಟ್ಟಡ ನೆಲಸಮ ವಿರೋ ಧಿಸಿ ಮೈಸೂರಿನಲ್ಲಿ ದೇವರಾಜ ಮಾರುಕಟ್ಟೆ ಬಾಡಿಗೆ ದಾರರು ವಹಿವಾಟು ಬಂದ್ ಮಾಡಿ ಬೃಹತ್ ಪ್ರತಿ ಭಟನಾ ಮೆರವಣ ಗೆ ನಡೆಸಿದರು.

ಪಾರಂಪರಿಕ ತಜ್ಞರ ಸಮಿತಿ ಮೈಸೂರಿನ ಪಾರಂ ಪರಿಕ ಕಟ್ಟಡಗಳಾದ ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್ಡೌನ್ ಕಟ್ಟಡವನ್ನು ನೆಲಸಮಗೊಳಿಸಿ ಪುನರ್ ನಿರ್ಮಾಣ ಮಾಡುವ ಸಂಬAಧ ವರದಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಕಟ್ಟಡ ನೆಲಸಮ ಮಾಡಲು ಉದ್ದೇಶಿಸಿ ರುವ ಕ್ರಮವನ್ನು ವಿರೋಧಿಸಿ ಇಂದು ಬೆಳಗ್ಗೆ ಬೃಹತ್ ಪ್ರತಿಭಟನೆ ನಡೆಸಿದ ವರ್ತಕರು ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್ಡೌನ್ ಕಟ್ಟಡ ನೆಲಸಮಗೊಳಿಸಲು ಬಿಡುವುದಿಲ್ಲ ಎಂದು ಘೋಷಣೆ ಕೂಗಿದರು.

ದೇವರಾಜ ಮಾರುಕಟ್ಟೆಯ ಹಣ್ಣು, ತರಕಾರಿ, ಹೂವು, ತೆಂಗಿನಕಾಯಿ ಹಾಗೂ ವಿವಿಧ ಮಳಿಗೆ ಇರುವ ಎಲ್ಲಾ ಬ್ಲಾಕ್‌ಗಳನ್ನು ಬಂದ್ ಮಾಡಿದ ವರ್ತಕರು ಸ್ವಯಂ ಪ್ರೇರಣೆಯಿಂದ ವಹಿವಾಟು ಸ್ಥಗಿತಗೊಳಿಸಿ ಚಿಕ್ಕಗಡಿಯಾರ ವೃತ್ತದ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ದೇವ ರಾಜ ಮಾರುಕಟ್ಟೆಯ ಬಾಡಿಗೆದಾರರ ಸಂಘ ಆಯೋ ಜಿಸಿದ್ದ ಪ್ರತಿಭಟನೆಯಲ್ಲಿ ಎಲ್ಲಾ ವ್ಯಾಪಾರಿಗಳು ಪಾಲ್ಗೊಂಡು ಒಗ್ಗಟ್ಟು ಪ್ರದರ್ಶಿಸಿದರು. ಪ್ರತಿಭಟನೆಯಲ್ಲಿ ಕೇವಲ ದೇವ ರಾಜ ಮಾರುಕಟ್ಟೆಯಲ್ಲಿರುವ ಮಳಿಗೆದಾರರು ಮಾತ್ರ ವಲ್ಲದೆ, ಸಯ್ಯಾಜಿರಾವ್ ರಸ್ತೆ,
ಆನೆ ಸಾರೋಟ್ ರಸ್ತೆಯಲ್ಲಿರುವ ಫ್ಯಾನ್ಸಿಸ್ಟೋರ್ಸ್, ಸಿಹಿ ಅಂಗಡಿಗಳು, ಪುಸ್ತಕದ ಅಂಗಡಿಗಳು, ಬಟ್ಟೆ ಅಂಗಡಿ, ತೆಂಗಿನಕಾಯಿ, ಬಾಳೆಕಾಯಿ ಸೇರಿದಂತೆ ಇನ್ನಿತರ ಮಳಿಗೆ ಗಳ ಮಾಲೀಕರು ಹಾಗೂ ಕೆಲಸಗಾರರು ಪಾಲ್ಗೊಂಡು ಬೆಂಬಲ ನೀಡಿದರು. ವ್ಯಾಪಾರಿಗಳ ಪ್ರತಿಭಟನೆ ಹಿನ್ನೆಲೆ ಯಲ್ಲಿ ದೇವರಾಜ ಮಾರುಕಟ್ಟೆಯ ಎಲ್ಲಾ ದ್ವಾರಗಳಿಗೂ ಬೀಗ ಹಾಕಿ ಮಾರುಕಟ್ಟೆಗೆ ಯಾರೂ ಬರದಂತೆ ತಡೆಗಟ್ಟಲಾಯಿತು. ವಿವಿಧೆಡೆಯಿಂದ ಬಂದ ಹೂವು, ಹಣ್ಣು ಇನ್ನಿತರ ವಸ್ತುಗಳನ್ನು ಮಾರುಕಟ್ಟೆಯ ದ್ವಾರದಲ್ಲೇ ಇರಿಸಲಾಗಿತ್ತು. ಪ್ರತಿಭಟನೆ ಮುಗಿದ ನಂತರ ಎಲ್ಲಾ ವ್ಯಾಪಾರಿಗಳು ವಾಪಸ್ಸಾದ ಬಳಿಕವಷ್ಟೇ ಮಾರುಕಟ್ಟೆಯ ದ್ವಾರ ತೆರೆಯಲಾಯಿತು. ಮದ್ಯಾಹ್ನ ೨ ಗಂಟೆ ನಂತರ ಮಾರುಕಟ್ಟೆಯಲ್ಲಿ ವಹಿವಾಟು ಎಂದಿನAತೆ ಆರಂಭವಾಯಿತು. ಚಿಕ್ಕಗಡಿಯಾರ ವೃತ್ತದ ಬಳಿ ಆಯೋಜಿಸಿದ್ದ ಪ್ರತಿಭಟನಾ ಸಭೆಗೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಆಗಮಿಸಿ ಬೆಂಬಲ ವ್ಯಕ್ತಪಡಿಸಿದರು. ಬಳಿಕ ಮಾತನಾಡಿದ ಅವರು, ನಾವೆಲ್ಲಾ ಚಿಕ್ಕಂದಿನಿAದ ನಮ್ಮ ಪೂರ್ವಜರ ಮಾರ್ಗದರ್ಶನದಲ್ಲಿ ಪಾರಂಪರಿಕ ಕಟ್ಟಡಗಳಾದ ದೇವರಾಜ ಮಾರುಕಟ್ಟೆ, ಲ್ಯಾನ್ಸ್ಡೌನ್ ಕಟ್ಟಡ ನೋಡಿಕೊಂಡು ಬೆಳೆದಿದ್ದೇವೆ. ಈ ಪಾರಂಪರಿಕ ಕಟ್ಟಡಗಳು ವರ್ತಕರಿಗೆ ಮಾತ್ರ ಸೀಮಿತಗೊಂಡಿಲ್ಲ. ಅವುಗಳು ಮೈಸೂರಿನ ಜನತೆಯೊಂದಿಗೆ ಅವಿನಾಭಾವ ಸಂಬAಧವನ್ನು ಹೊಂದಿವೆ ಎಂದರು.

Devaraja market traders protest against demolition

ಪಾರAಪರಿಕ ಕಟ್ಟಡಗಳು ನಮ್ಮ ಸಂಸ್ಕೃತಿ, ಕಲೆಯೂ ಆಗಿವೆ. ಮೈಸೂರಿನ ಜನತೆ ದೇವಾ ಲಯಕ್ಕೆ ಹೋಗಿ ಬರುವಂತೆ ಮಾರುಕಟ್ಟೆಗೆ ಹೋಗಿ ತಮಗೆ ಬೇಕಾದ ಹಣ್ಣು-ತರಕಾರಿ ಖರೀದಿಸುವ ಸಂಪ್ರದಾಯವನ್ನು ಮೊದಲಿನಿಂದಲೂ ಅನುಸರಿಸುತ್ತಾ ಬಂದಿದ್ದಾರೆ. ಇಂತಹ ಕಟ್ಟಡವನ್ನು ನೆಲಸಮ ಮಾಡುವುದು ಸರಿಯಲ್ಲ. ವರ್ತಕರು, ವ್ಯಾಪಾರಿಗಳು ಕಳೆದ ೫-೬ ವರ್ಷಗಳಿಂದ ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ನೀಡುತ್ತಾ ಬಂದಿದ್ದೇವೆ. ಮುಂದಿನ ದಿನಗಳಲ್ಲೂ ಈ ಕಟ್ಟಡಗಳ ರಕ್ಷಣೆಗಾಗಿ ನಮ್ಮ ಬೆಂಬಲ ಇದ್ದೇ ಇರುತ್ತದೆ. ವರ್ತಕರು ಶಾಂತಿಯುತವಾದ ಹೋರಾಟ ನಡೆಸಬೇಕು. ನಿಮ್ಮ ಹೋರಾಟಕ್ಕೆ ಸರ್ಕಾರ ಮನ್ನಣೆ ನೀಡಲಿದೆ ಎಂಬ ವಿಶ್ವಾಸವಿದೆ ಎಂದು ಭರವಸೆ ನೀಡಿದರು. ಇದೇ ವೇಳೆ ವೇದಿಕೆಯಲ್ಲಿ ಇಡಲಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್, ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಪ್ರತಿಭಟನಾ ಮೆರವಣ ಗೆಗೆ ಚಾಲನೆ ನೀಡಲಾಯಿತು. ಬಳಿಕ ಪ್ರತಿಭಟನಾ ಮೆರವಣ ಗೆ ಆರಂಭಿಸಿದ ದೇವರಾಜ ಮಾರುಕಟ್ಟೆಯ ವ್ಯಾಪಾರಿಗಳು, ವರ್ತಕರು ಡಿ.ದೇವರಾಜ ಅರಸು ರಸ್ತೆ, ಜೆಎಲ್‌ಬಿ ರಸ್ತೆ, ಮೆಟ್ರೋಪೋಲ್ ವೃತ್ತ, ವಿನೋಬಾ ರಸ್ತೆಯ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ತಲುಪಿ ಮನವಿ ಸಲ್ಲಿಸಿದರು.

ದಾರಿಯುದ್ದಕ್ಕೂ ದೇವರಾಜ ಮಾರುಕಟ್ಟೆ ನಮ್ಮ ಜೀವನಾಡಿ ಇದನ್ನು ಉಳಿಸಿ, ಮೈಸೂರಿನ ಪರಂಪರೆಯ ಹಿರಿಮೆ ದೇವರಾಜ ಮಾರುಕಟ್ಟೆ, ಮಹಾರಾಜರ ಕಾಲದ ಪರಂಪರೆ ಮೈಸೂರಿನ ಪಾರಂಪರಿಕ ಸಂಸ್ಕೃತಿ, ನಮಗೆ ಬೇಕು ನಮ್ಮ ಪರಂಪರೆ, ಮೈಸೂರು ಮಹಾರಾಜರ ಕೊಡುಗೆಗಳನ್ನು ಉಳಿಸಿ ಮೈಸೂರು ಪರಂಪರೆಯ ನಾಶಬೇಡ, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೋರಾಟಕ್ಕೆ ಜಯವಾಗಲಿ ಎನ್ನುವ ಭಿತ್ತಿಫಲಕಗಳನ್ನು ಹಿಡಿದಿದ್ದ ವ್ಯಾಪಾರಿಗಳು ಸರ್ಕಾರದ ವಿರುದ್ಧ ಘೋಷಣೆ ಮೊಳಗಿಸಿ ದರು. ಈ ವೇಳೆ ದೇವರಾಜ ಮಾರುಕಟ್ಟೆಯ ಬಾಡಿಗೆದಾರರ ಸಂಘದ ಅಧ್ಯಕ್ಷ ಪೈಲ್ವಾನ್ ಎಸ್.ಮಹದೇವ, ಉಪಾಧ್ಯಕ್ಷ ಅಜೇಯ್ ಎಸ್.ಪತಂಗೆ, ಕೋಶಾಧ್ಯಕ್ಷ ಎಂ.ಎನ್.ನಾಗರಾಜ, ಪ್ರಧಾನ ಕಾರ್ಯದರ್ಶಿ ಪಿ.ಎನ್.ನಾಗರಾಜ್, ಕಾರ್ಯದರ್ಶಿ ಇಲಿಯಾಜ್ ಅಹಮ್ಮದ್, ಕಾರ್ಯಕಾರಿ ಸಮಿತಿ ಸದಸ್ಯರಾದ ಮನೀಷ್ ಕುಮಾರ್, ಎಲ್.ಮುಖೇಶ್, ಎಚ್.ವಿ.ನಾಗೇಂದ್ರ, ಉಮ್ಮರ್, ಮೈಸೂರು ವಾಣ ಜ್ಯ ಮತ್ತು ಕೈಗಾರಿಕಾಸಂಸ್ಥೆ ಅಧ್ಯಕ್ಷ ಕೆ.ಬಿ.ಬಾಲಕೃಷ್ಣ, ಕಾರ್ಯದರ್ಶಿ ಶಿವಾಜಿರಾವ್, ಮುಖಂಡರಾದ ಮಾಧು, ಗೋಪಾಲ ಇನ್ನಿತರರು ಪಾಲ್ಗೊಂಡಿದ್ದರು.

Translate »