ಮೈಸೂರು, ಜೂ.20(ವೈಡಿಎಸ್)- ಲಾಕ್ ಡೌನ್ ಹಿನ್ನೆಲೆ `ತೂಗುದೀಪ್ ದರ್ಶನ್ ಅಭಿಮಾನಿ ಬಳಗ’ದಿಂದ ಮೈಸೂರಿನ ಗಾಯತ್ರಿ ಚಿತ್ರಮಂದಿ ರದ ನೌಕರರಿಗೆ ದಿನಸಿ ಕಿಟ್ ವಿತರಿಸಲಾಯಿತು.
ಟಾಕೀಸ್ ಆವರಣದಲ್ಲಿ ನಟ ಮಂಡ್ಯ ರಮೇಶ್ ಕಿಟ್ ವಿತರಿಸಿ ಮಾತನಾಡಿ, ನಟ ದರ್ಶನ್ ಮನುಷ್ಯ ರಿಗೆ ಮಾತ್ರವಲ್ಲ, ಪ್ರಾಣಿ-ಪಕ್ಷಿಗಳಿಗೂ ಅನುಕೂಲ ವಾಗಲಿ ಎಂದು ಕರೆ ನೀಡಿದ್ದಕ್ಕೆ ಸ್ಪಂದಿಸಿ ಬಹ ಳಷ್ಟು ಪ್ರಾಣಿಪ್ರಿಯರು ಮೈಸೂರು ಮೃಗಾಲಯದ ಪ್ರಾಣಿಗಳನ್ನು ದತ್ತು ಸ್ವೀಕರಿಸಿದರು. ಇದು ನನಗೆ ಖುಷಿ ತಂದಿತು. ಇದನ್ನೇ ಸ್ಫೂರ್ತಿಯಾಗಿಸಿ `ದರ್ಶನ್ ಅಭಿಮಾನಿ ಬಳಗ’ವು ಚಿತ್ರಮಂದಿರದ ನೌಕರರಿಗೆ ದಿನಸಿ ಕಿಟ್ ವಿತರಿಸಿದೆ. ಇದು ಉತ್ತಮ ಕೆಲಸ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು..
ಮಾಜಿ ಮೇಯರ್ ಸಂದೇಶ್‍ಸ್ವಾಮಿ, ಗಾಯತ್ರಿ ಚಿತ್ರಮಂದಿರದ ಮಾಲೀಕ ರಾಜಾರಾಮ್, ತೂಗು ದೀಪ್ ದರ್ಶನ್ ಅಭಿಮಾನಿ ಬಳಗದ ಮಹೇಂದ್ರ ಸಿಂಗ್ ಕಾಳಪ್ಪ ಬನ್ನೂರು, ಜೀವಧಾರ ಗಿರೀಶ್, ಎಂ.ಡಿ.ಪಾರ್ಥಸಾರಥಿ, ಹರೀಶ್‍ನಾಯ್ಡು, ಕಡಕೊಳ ಜಗದೀಶ್, ಮಂಜುನಾಥ್ ಮತ್ತಿತರರಿದ್ದರು.