ಸಂಸದ ಪ್ರತಾಪಸಿಂಹ ವಿರುದ್ಧ ದಸಂಸ ಪ್ರತಿಭಟನೆ
ಮೈಸೂರು

ಸಂಸದ ಪ್ರತಾಪಸಿಂಹ ವಿರುದ್ಧ ದಸಂಸ ಪ್ರತಿಭಟನೆ

November 19, 2021

ಮೈಸೂರು,ನ.18(ಆರ್‍ಕೆಬಿ)- ಪ್ರಚೋ ದನಾಕಾರಿ, ಸಂವಿಧಾನ ವಿರೋದಿ,ü ಕಾನೂನು ಬಾಹಿರ ಹೇಳಿಕೆ ನೀಡುವ ಮೂಲಕ ಸಂಸದ ಪ್ರತಾಪಸಿಂಹ ಸಮಾಜದಲ್ಲಿ ಶಾಂತಿ ಕದಡು ತ್ತಿದ್ದಾರೆ ಎಂದು ಆರೋಪಿಸಿ, ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಪ್ರತಾಪ್‍ಸಿಂಹ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸಮಾಜದ ಶಾಂತಿ ಕದಡುವ ಇಂತಹ ಹೇಳಿಕೆ ನೀಡುವವರ ವಿರುದ್ಧ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಇಂತಹ ಹೇಳಿಕೆಗಳಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು. ಸಂಗೀತ ನಿರ್ದೇಶಕ ಹಂಸ ಲೇಖ ಅವರು ಸಮಾನತೆ ಮತ್ತು ಭ್ರಾತೃತ್ವದ ಪರ ಆಡಿದ ಮಾತುಗಳು ಬ್ರಾಹ್ಮಣಶಾಹಿ ಮನಸ್ಸುಗಳ ಎದೆಯನ್ನು ಇರಿದಂತಿದೆ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅವರು ಕ್ಷಮೆಯಾಚಿಸುವಂತೆ ಒತ್ತಡ ಹೇರಿ, ಭಯದ ವಾತಾವರಣ ನಿರ್ಮಿಸಲಾಗಿದೆ. ಹಂಸ ಲೇಖ ವಿರುದ್ಧ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾಗಿರುವುದು ದುರಂ ತವೇ ಸರಿ. ಹಾಗಿದ್ದರೆ ಹಂಸಲೇಖರವರು ಪ್ರಶ್ನಿಸಿರುವ ಜಾತೀಯತೆಯು ನ್ಯಾಯೋ ಚಿತವಾದುದೇ ಎಂದು ಪ್ರಶ್ನಿಸಬೇಕಾಗಿದೆ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.
ಬಿಟ್ ಕಾಯಿನ್ ಹಗರಣ ಕುರಿತಂತೆ ಶಾಸಕ ಪ್ರಿಯಾಂಕ ಖರ್ಗೆ ಎತ್ತಿರುವ ಪ್ರಶ್ನೆ ಗಳಿಗೆ ಉತ್ತರಿಸಲಾಗದ ಸರ್ಕಾರ ವ್ಯವಸ್ಥಿತ ವಾಗಿ ತಮ್ಮ ಬೆಂಬಗಲಿಗರ ಮೂಲಕ ಜನರ ಮನಸ್ಸನ್ನು ಬೇರೆಡೆಗೆ ಸೆಳೆಯಲು ಹಂಸ ಲೇಖರ ಪ್ರಕರಣವನ್ನು ಬಳಸಿಕೊಳ್ಳುತ್ತಿದ್ದಾರೆ. ಅನವಶ್ಯಕವಾಗಿ ಹಿಂದುಳಿದ, ಶೋಷಿತ ಸಮುದಾಯಗಳ ಭಾವನೆಗೆ ವಿರುದ್ಧವಾಗಿ ಹೇಳಿಕೆ ನೀಡುವುದು, ದೂರು ದಾಖಲಿಸು ವುದು, ಹಲ್ಲೆ ನಡೆಸುವುದು, ಭಯ ಹುಟ್ಟಿಸು ವುದರ ಮೂಲಕ ಬಾಯಿ ಮುಚ್ಚಿಸುವ ಪ್ರಯತ್ನ ನಡೆಸಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ದಸಂಸ ಮುಖಂಡರಾದ ಚೋರನಹಳ್ಳಿ ಶಿವಣ್ಣ, ಕೆ.ವಿ.ಮಹೇಂದ್ರ, ಕಿರಂಗೂರು ಸ್ವಾಮಿ, ಯಡದೊರೆ ಮಹದೇವಯ್ಯ, ಹಾರೋಹಳ್ಳಿ ನಟರಾಜ್, ಶಿವಮೂರ್ತಿ ಶಂಕರಪುರ ಇನ್ನಿತರರು ಉಪಸ್ಥಿತರಿದ್ದರು.

Translate »