ಇಂಜಿನಿಯರಿಂಗ್ ಪ್ರವೇಶ ಶುಲ್ಕ ಏರಿಕೆ ಖಂಡಿಸಿ ಎಬಿವಿಪಿ ಪ್ರತಿಭಟನೆ
ಮೈಸೂರು

ಇಂಜಿನಿಯರಿಂಗ್ ಪ್ರವೇಶ ಶುಲ್ಕ ಏರಿಕೆ ಖಂಡಿಸಿ ಎಬಿವಿಪಿ ಪ್ರತಿಭಟನೆ

November 19, 2021

ಮೈಸೂರು,ನ.18(ಆರ್‍ಕೆಬಿ)-ಸರ್ಕಾರಿ ಕೋಟಾ ದಡಿಯಲ್ಲಿ ಇಂಜಿನಿಯರಿಂಗ್ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಶುಲ್ಕ ಏರಿಕೆ ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆಶ್ರಯದಲ್ಲಿ ಗನ್‍ಹೌಸ್ ವೃತ್ತದ ಬಳಿ ಪ್ರತಿಭಟನೆ ನಡೆಸಲಾಯಿತು.

ರಾಜ್ಯದ ಸರ್ಕಾರಿ, ಖಾಸಗಿ ವಿಶ್ವವಿದ್ಯಾಲಯಗಳ ಲ್ಲಿನ ಸರ್ಕಾರಿ ಕೋಟಾದ ಇಂಜಿನಿಯರಿಂಗ್ ಸೀಟ್‍ಗೆ ಪ್ರಸಕ್ತ ಸಾಲಿನಿಂದ ಕ್ರಮವಾಗಿ 83,526 ರೂ. ಹಾಗೂ 90,060 ರೂ. ಶುಲ್ಕ ನಿಗದಿಪಡಿಸಲಾಗಿದೆ. ಹಿಂದಿನ ವರ್ಷ ಈ ಶುಲ್ಕವು ಕ್ರಮವಾಗಿ 58,806 ರೂ. ಹಾಗೂ 65,340 ರೂ. ಇತ್ತು. ಆದರೆ, ಸರ್ಕಾರವು 2021-2022ನೇ ಸಾಲಿನಿಂದ 20,000 ರೂ. ಇತರ ಶುಲ್ಕ ಹಾಗೂ ಸ್ಕಿಲ್ ಲ್ಯಾಬ್ ಸೌಲಭ್ಯಕ್ಕಾಗಿ 20,000 ರೂ.ವ ರೆಗೆ ಹೆಚ್ಚುವರಿ ಶುಲ್ಕ ವಸೂಲಿಗೆ ಕಾಲೇಜುಗಳಿಗೆ ಅವಕಾಶ ನೀಡಿದೆ. ಇದರಿಂದಾಗಿ 40 ಸಾವಿರ ರೂ. ಹೆಚ್ಚುವರಿಯಾಗಿ ವಿದ್ಯಾರ್ಥಿಗಳು ನೀಡಬೇಕಾಗಿದೆ. ಇದು ಅವರಿಗೆ ಹೊರೆಯಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ ಈ ಹಿಂದಿನ ವರ್ಷಗಳಲ್ಲಿ ಕಾಲೇಜುಗಳಲ್ಲಿ ಈ ರೀತಿ ಹೆಚ್ಚಿನ ಶುಲ್ಕ ಪಡೆ ಯದಂತೆ ನಿವೃತ್ತ ನ್ಯಾಯಾ ಧೀಶರ ನೇತೃತ್ವದ ಶುಲ್ಕ ನಿಯಂತ್ರಣ ಸಮಿತಿಯ ಮೂಲಕ ಕಡಿವಾಣ ಹಾಕ ಲಾಗಿತ್ತು. ಆದರೀಗ ಸರ್ಕಾ ರವೇ ಈ ಎಲ್ಲ ಹೆಚ್ಚುವರಿ ಶುಲ್ಕಗಳನ್ನು ವಿದ್ಯಾರ್ಥಿ ಗಳಿಂದ ವಸೂಲಿ ಮಾಡಿ ಕಾಲೇಜುಗಳಿಗೆ ನೀಡು ತ್ತಿದೆ ಎಂದು ಆರೋಪಿಸಿ ದರು. ಪ್ರತಿಭಟನೆಯಲ್ಲಿ ಮುಖಂಡರಾದ ಶ್ರೀರಾಮ, ಮಲ್ಲಪ್ಪ, ಶಿವು, ಕಿರಣ್, ಜೀವನ್, ಶ್ರೇಯಸ್, ನಮೃತ, ನಿಶ್ಚಿತ, ಮನೋಜ್, ಶ್ರೀಕಂಠ, ದಿನೇಶ್ ಇದ್ದರು.

Translate »