ಮೈಸೂರು, ಸೆ.10(ಎಂಟಿವೈ)- ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನಾಧಾರಿತ `ಮಹಾನಾಯಕ’ ಧಾರಾವಾಹಿ ಪ್ರಸಾರ ಮಾಡದಂತೆ ಕೋಮುವಾದಿ ಮನಸ್ಥಿತಿಯವರು ಟಿವಿ ಚಾನಲ್ ಮುಖ್ಯಸ್ಥರಿಗೆ ಬೆದರಿಕೆಯೊಡ್ಡುವ ಮೂಲಕ ನೀಚ ಮನಸ್ಥಿತಿ ಪ್ರದರ್ಶಿಸಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ (ಬುದ್ಧವಾದ) ಆಕ್ರೋಶ ವ್ಯಕ್ತಪಡಿಸಿದೆ.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ದಸಂಸ ರಾಜ್ಯ ಪ್ರಧಾನ ಸಂಚಾಲಕ ನಿಂಗ ರಾಜ್ ಮ¯್ಲÁಡಿ, ರಾಜ್ಯದಲ್ಲಿ ಖಾಸಗಿ ಟಿವಿಯೊಂದ ರಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಜೀವನಾಧಾರಿತ ಕಥೆ ಇರುವ `ಮಹಾನಾಯಕ’ ಧಾರಾವಾಹಿ ಪ್ರಸಾರ ವಾಗುತ್ತಿದೆ. ಜಾತಿ, ಮತ, ಧರ್ಮದ ಭೇದವಿಲ್ಲದೆ ಅಪಾರ ಸಂಖ್ಯೆಯ ಜನರು ಧಾರಾವಾಹಿ ವೀಕ್ಷಿಸುತ್ತಾ ದೇಶದ ಅಪ್ರತಿಮ ನಾಯಕನ ಜೀವನದ ಹಾದಿಯನ್ನು ತಿಳಿದು ಕೊಳ್ಳುತ್ತಿದ್ದಾರೆ. ಜನಮನ್ನಣೆ ಗಳಿಸಿದ ಈ ಧಾರಾವಾಹಿ ಯನ್ನು ಪ್ರಸಾರ ಮಾಡದಂತೆ ಕೆಲವು ಕೋಮುವಾದಿ ಮನಸಿನ ವ್ಯಕ್ತಿಗಳು ಬೆದರಿಕೆ ಹಾಕುತ್ತಿದ್ದಾರೆ ಎಂದು ಕಿಡಿ ಕಾರಿದರು.
ದೇಶದಲ್ಲಿ ಸ್ವಾತಂತ್ರ್ಯಕ್ಕೂ ಮುನ್ನ ಪರಿಶಿಷ್ಟ ಜಾತಿಯವರು ಎಷ್ಟೆಲ್ಲಾ ಶೋಷಣೆಗೀಡಾಗಿ ದ್ದರು ಹಾಗೂ ಅಂಬೇಡ್ಕರ್ ಅವರು ನೊಂದವರ, ಹಸಿ ದವರ ಪರವಾಗಿ ಹೇಗೆ ಕೆಲಸ ಮಾಡಿದರು ಎಂಬ ಬಗ್ಗೆ ಮಹಾ ನಾಯಕ ಧಾರಾವಾಹಿ ತೋರಿಸಿಕೊಡುತ್ತಿದೆ. ಕೆಲವರು ಈ ಸತ್ಯವನ್ನು ಸಹಿಸಲಾಗದೆ ಬೆದರಿಕೆ ಕರೆ ಮಾಡುತ್ತಿ ದ್ದಾರೆ. ಇಂತಹವರ ವಿರುದ್ಧ ಪೆÇಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇತ್ತೀಚಿನ ದಿನಗಳಲ್ಲಿ ಕೆಲವರು ಅಂಬೇಡ್ಕರ್ ಅವ ರಿಂದ ದೊರೆತ ಮೀಸಲಾತಿ ಸೌಲಭ್ಯವನ್ನು ಅನುಭÀವಿ ಸುತ್ತಲೇ ಅಂಬೇಡ್ಕರ್ ಅವರ ಆಶಯಕ್ಕೆ ಧಕ್ಕೆಯಾ ಗುವಂತಹ ಕೆಲಸಕ್ಕಿಳಿದಿz್ದÁರೆ. ಯಾವುದೇ ಹೋರಾಟ ಮಾಡದೆ ಹಣ ಸಂಪಾದಿಸಿಕೊಂಡು ಸುಮ್ಮನಿz್ದÁರೆ. ಅಂತಹವರೂ ಬದಲಾಗುವ ಅನಿವಾರ್ಯತೆ ಎದ್ದು ಕಾಣುತ್ತಿದೆ. ಮೇಲ್ಜಾತಿಯಲ್ಲೂ ಎಲ್ಲರೂ ಕೆಟ್ಟವರಿಲ್ಲ. ಆದರೆ ಕೆಲವು ಸಣ್ಣ ಮನಸ್ಸುಗಳು ಧಾರಾವಾಹಿಯನ್ನು ವಿರೋಧಿಸುತ್ತಿವೆ. ಈ ಬಗ್ಗೆ ಕ್ರಮ ಕೈಗೊಂಡು ವಾಹಿನಿ ಮುಖ್ಯಸ್ಥರಿಗೆ ಭದ್ರತೆ ಒದಗಿಸಲು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಿz್ದÉೀವೆ ಎಂದು ತಿಳಿಸಿದರು. ಕೆ.ನಂಜಪ್ಪ ಬಸವನಗುಡಿ, ಬ¯್ಲÉೀನಹಳ್ಳಿ ಕೆಂಪರಾಜು, ದೇವೇಂದ್ರ ಕೆ.ಎಂ.ವಾಡಿ, ರಂಗಮ್ಮ ಸುದ್ದಿಗೋಷ್ಠಿಯಲ್ಲಿದ್ದರು.