ದಸರಾ ಕಾಲೇ ಪಾಲಿಕೆಯಿಂದ ರಸ್ತೆ ಗುಂಡಿ ಮುಚ್ಚು ಶಾಸ್ತ್ರ!
ಮೈಸೂರು

ದಸರಾ ಕಾಲೇ ಪಾಲಿಕೆಯಿಂದ ರಸ್ತೆ ಗುಂಡಿ ಮುಚ್ಚು ಶಾಸ್ತ್ರ!

September 30, 2021

ಮೈಸೂರು, sಸೆ.29(ವೈಡಿಎಸ್)- ಪ್ರತೀ ವರ್ಷ ಗುಂಡಿ ಬಿದ್ದಿ ರುವ ರಸ್ತೆಗಳು ನಗರಪಾಲಿಕೆಗೆ ನೆನಪಾಗುವುದು ದಸರಾ ಮಹೋತ್ಸವದಲ್ಲಿ ಮಾತ್ರ. ಅದುವರೆಗೂ ಗುಂಡಿಬಿದ್ದ ರಸ್ತೆ ಗಳನ್ನು ಮುಚ್ಚಿಸಬೇಕು. ಇದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ ಎಂಬುದು ನೆನಪಾಗುವುದೇ ಇಲ್ಲ.
ಹಲವು ವರ್ಷಗಳ ಹಿಂದೆಯೇ ಅರಮನೆ ಸುತ್ತ, ಜಂಬೂ ಸವಾರಿ ಮಾರ್ಗ ಮತ್ತು ಚಾಮರಾಜ ಜೋಡಿ ರಸ್ತೆಯನ್ನು ಕಾಂಕ್ರೀಟ್ ರಸ್ತೆ ಮಾಡಿರುವುದರಿಂದ ಇವುಗಳನ್ನು ಹೊರತುಪಡಿಸಿ ಉಳಿದ ರಸ್ತೆಗಳಲ್ಲಿ ಸಂಚರಿಸಲು ಸವಾ ರರು ಪರಿಪಾಟಲು ಅನುಭವಿಸುವಂತಾಗಿದೆ.
ನಗರದ ನಾರಾಯಣ ಶಾಸ್ತ್ರಿ, ಅಶೋಕ ರಸ್ತೆ, ಇರ್ವಿನ್ ರಸ್ತೆ, ಎಂ.ಜಿ ರೋಡ್, ವಿನೋಬಾ ರಸ್ತೆ, ಧನ್ವಂತರಿ ರಸ್ತೆ, ವಾಲ್ಮೀಕಿ ರಸ್ತೆ, ಕೆಆರ್‍ಎಸ್ ರಸ್ತೆ ಹೀಗೆ ಹಲವು ಪ್ರಮುಖ ರಸ್ತೆಗಳನ್ನು ವಿವಿಧ ಕಾಮಗಾರಿಗಾಗಿ ಅಗೆದಿದ್ದು, ಮರು ಡಾಂಬರೀಕರಣ ಮಾಡಿಲ್ಲ. ಹಾಗಾಗಿ ರಸ್ತೆಗಳೆಲ್ಲಾ ಹೊಂಡ ದಂತಾಗಿ ಮಾರ್ಪಟ್ಟಿದ್ದು, ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ದಸರಾ ಬಂದಾಗ ಮಾತ್ರ ಪಾಲಿಕೆಗೆ ಗುಂಡಿಗಳನ್ನು ಮುಚ್ಚಬೇಕೆಂದು ನೆನಪಾಗುತ್ತದೆ. ಅದುವರೆಗೆ ಇದರ ಬಗ್ಗೆ ತಲೆಕೆಡಿಸಿಕೊಳ್ಳುವುದೇ ಇಲ್ಲ. ಮಳೆಗಾಲದಲ್ಲಿ ಮಳೆ ನೀರು ರಸ್ತೆ ಮತ್ತು ಗುಂಡಿಯಲ್ಲೇ ನಿಲ್ಲುವುದರಿಂದ ಗುಂಡಿಗಳು ಎಲ್ಲಿವೆ ಎಂಬುದು ಗೊತ್ತಾಗು ವುದಿಲ್ಲ. ಹಲವು ಮಂದಿ ಬೈಕ್ ಸವಾರರು ಬಿದ್ದು ಗಾಯ ಗೊಂಡಿರುವ ಘಟನೆಗಳು ನಡೆದಿವೆ. ಮಳೆ ಬಂತೆಂದರೆ ಆಟೋ ಓಡಿಸಲು ಭಯವಾಗುತ್ತದೆ ಎಂದು ಆಟೋ ಚಾಲಕ ಪರಮೇಶ್ ಅಸಮಾಧಾನ ವ್ಯಕ್ತಪಡಿಸಿದರು.

8-10 ದಿನಗಳಲ್ಲಿ ಕಾಮಗಾರಿ ಪೂರ್ಣ: ಈ ಕುರಿತು ಪಾಲಿಕೆ ಕಾರ್ಯಪಾಲಕ ಅಭಿಯಂತರ ರಂಜಿತ್ ಕುಮಾರ್ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಪಾಲಿಕೆ ವತಿ ಯಿಂದ 1 ಕೋಟಿ ರೂ. ವೆಚ್ಚದಲ್ಲಿ ರಸ್ತೆಗಳ ಗುಂಡಿ ಮುಚ್ಚುವ ಕಾಮಗಾರಿ ಹಮ್ಮಿಕೊಂಡಿದ್ದು, ನಾಳೆ(ಗುರುವಾರ) ವಾರ್ಡ್ 51ರಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗುವುದು. ಮೈಸೂ ರಿನ ಮಹದೇವು ಮತ್ತು ರಮೇಶ್ ಎಂಬುವರು ಕಾಮ ಗಾರಿಯ ಗುತ್ತಿಗೆ ಪಡೆದಿದ್ದು, 8-10 ದಿನಗಳಲ್ಲಿ ಪೂರ್ಣ ಗೊಳಿಸಲಿದ್ದಾರೆ. ಮಳೆಯಾದರೆ ಇನ್ನೆರಡು-ಮೂರು ದಿನಗಳು ವಿಳಂಬವಾಗಬಹುದು ಎಂದು ಹೇಳಿದರು.

ಕಾಮಗಾರಿಯ ಪ್ರಮುಖ ರಸ್ತೆಗಳು: ನ್ಯೂ ಸಯ್ಯಾ ಜಿರಾವ್ ರಸ್ತೆ, ಎಂ.ಜಿ.ರಸ್ತೆ, ಸೋಮಸುಂದÀರಂ ವೃತ್ತ, ಮೃಗಾಲಯ ರಸ್ತೆ, ರಾಣಾಪ್ರತಾಪ ವೃತ್ತ, ಸತ್ಯ ಹರಿಶ್ಚಂದ್ರ ರಸ್ತೆ, ಹನುಮಂತನಗರ, ಜೋಡಿತೆಂಗಿನಮರ ರಸ್ತೆ, ಸಿದ್ದಿಖಿನಗರ, ಹುಡ್ಕೋ ಬಡಾವಣೆ, ಮೈಸೂರು-ಬೆಂಗ ಳೂರು ಮುಖ್ಯ ರಸ್ತೆ, ಪಿಎಫ್ ಆಫೀಸ್ ರಸ್ತೆ, ಇಂದಿರಾ ಗಾಂಧಿ ರಸ್ತೆ, ಹರಿಶ್ಚಂದ್ರ ಘಾಟ್ ರಸ್ತೆ, ಸುಲ್ತಾನ್ ರಸ್ತೆ, ಅಜೀಜ್ ಸೇಠ್ ನಗರದ ಮುಖ್ಯ ರಸ್ತೆ, ಯರಗನಹಳ್ಳಿ ಮುಖ್ಯ ರಸ್ತೆ, ಸಾತಗಳ್ಳಿ ಮುಖ್ಯ ರಸ್ತೆ, ಬೆಂಗಳೂರು ರಸ್ತೆ, ಮಲೆಮಹದೇಶ್ವರ ರಸ್ತೆ, ದಿವಾನ್ಸ್ ರಸ್ತೆ, ಬಿ.ಎನ್.ರಸ್ತೆ, ದೇವರಾಜ ಅರಸು ರಸ್ತೆ, ರಮಾವಿಲಾಸ ರಸ್ತೆ, ಜೆಎಲ್‍ಬಿ ರಸ್ತೆ ಮತ್ತಿತರೆ ರಸ್ತೆಗಳಲ್ಲಿ ಗುಂಡಿಮುಚ್ಚುವ ಕಾಮಗಾರಿ ಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

50 ಲಕ್ಷ ರೂ.ವೆಚ್ಚದಲ್ಲಿ ನಗರದ ಪ್ರಮುಖ ರಸ್ತೆಗಳ ವಿಭಜಕ ಮತ್ತು ರಸ್ತೆ ಬದಿಯ ಕಲ್ಲುಗಳಿಗೆ ಬಣ್ಣ ಬಳಿಯ ಲಾಗುವುದು. ಹಾಗೆಯೇ ನಗರವನ್ನು ಸ್ವಚ್ಛವಾಗಿಸಲು 3 ದಿನಗಳ ಕಾಲ ಬೃಹತ್ ಸ್ವಚ್ಛತಾ ಆಂದೋಲನಾ ಹಮ್ಮಿ ಕೊಂಡಿದ್ದು, ಇದಕ್ಕಾಗಿ ಗುತ್ತಿಗೆದಾರರು ಉಚಿತವಾಗಿ ಜೆಸಿಬಿ, ಟಿಪ್ಪರ್‍ಗಳನ್ನು ನೀಡುತ್ತಿದ್ದು, 60 ಜೆಸಿಬಿ, 100 ಟಿಪ್ಪರ್, ಟ್ರ್ಯಾಕ್ಟರ್‍ಗಳ ಬಳಸಿ ರಸ್ತೆ ಬದಿಯಲ್ಲಿನ ಮಣ್ಣು, ಕಲ್ಲುಗಳು ತೆಗೆದು ಸ್ವಚ್ಛ ಮಾಡಲಾಗುವುದು ಎಂದರು.

Translate »